ETV Bharat / entertainment

Vettaiyan Box Office Collection Day 9: ಎರಡನೇ ವಾರಕ್ಕೆ ಗಲ್ಲಾಪೆಟ್ಟಿಗೆ ಗಳಿಕೆಯಲ್ಲಿ ಕೊಂಚ ಮಸುಕಾದ 'ವೆಟ್ಟೈಯನ್'​ - RAJINIKANTH VETTAIYAN

ಅಕ್ಟೋಬರ್​ 10ರಂದು ಬಿಡುಗಡೆಯಾದ ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 9 ದಿನಗಳ ಕಳೆದಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಇದ ಅಬ್ಬರ ಕೊಂಚ ಮಸುಕಾದಂತೆ ಕಂಡು ಬಂದಿದೆ.

vettaiyan-box-office-collection-day-9-rajinikanth-and-big-bs-film-slips-into-single-digits-in-2nd-week
ವೆಟ್ಟಿಯನ್​ (ಈಟಿವಿ ಭಾರತ್​)
author img

By ETV Bharat Entertainment Team

Published : Oct 19, 2024, 11:18 AM IST

ಹೈದರಾಬಾದ್​: ಸೂಪರ್ ಸ್ಟಾರ್​ ರಜನಿಕಾಂತ್ ಮತ್ತು ಅಮಿತಾಬ್ ಬಚ್ಚನ್ ನಟನೆಯ 'ವೆಟ್ಟಿಯನ್​' ಚಿತ್ರವೂ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಿದ್ದು, ಜಾಗತಿಕವಾಗಿ ಬಾಕ್ಸ್​ ಆಫೀಸ್​ನಲ್ಲಿ ಆರಂಭದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ, ಚಿತ್ರ ಬಿಡುಗಡೆಯಾಗಿ ವಾರ ಕಳೆಯುತ್ತಿದ್ದಂತೆ ಸಿನಿಮಾ ನಿರೀಕ್ಷಿತ ಮಟ್ಟದ ಗಳಿಗೆ ನಡೆಸುವಲ್ಲಿ ವಿಫಲವಾಗಿದೆ. ಅಕ್ಟೋಬರ್​ 10ರಂದು ಬಿಡುಗಡೆಯಾದ ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 9 ದಿನಗಳ ಕಳೆದಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಇದ ಅಬ್ಬರ ಕೊಂಚ ಮಸುಕಾದಂತೆ ಕಂಡು ಬಂದಿದೆ.

ಅದ್ದೂರಿ ಆರಂಭ: ಚಿತ್ರದ ಕುರಿತ ಮಿಶ್ರಾ ಪ್ರತಿಕ್ರಿಯೆ ಹೊರತಾಗಿ ಚಿತ್ರವೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾಗಿದೆ. ಚಿತ್ರ ಆರಂಭವಾದಗಿನಿಂದ ಇಲ್ಲಿಯವರೆಗೆ ಒಟ್ಟು 124 ಕೋಟಿ ಗಳಿಕೆ ಮಾಡಿದೆ. ಬಿಡುಗಡೆಯಾದ ನಾಲ್ಕೇ ದಿನದಲ್ಲಿ ಸಿನಿಮಾ 100 ಕೋಟಿ ಕ್ಲಬ್​ ಸೇರಿದ್ದು, ಆರಂಭದಲ್ಲಿ ಉತ್ತಮ ಪ್ರದರ್ಶನ ಕಂಡು ಬಂದಿದೆ. ಆದರೆ, ವಾರ ಕಳೆಯುತ್ತಿದ್ದಂತೆ ಸಿನಿಮಾದ ಲಾಭ ಗಳಿಕೆಯ ಮೇಲೆ ಮಸುಕು ವಾತಾವರಣ ಕವಿದಿದೆ. ಚಿತ್ರದ ಟಿಕೆಟ್​ ಮಾರಾಟದಲ್ಲೂ ಅಂದುಕೊಂಡ ನಿರೀಕ್ಷೆ ತುಲುಪಿಲ್ಲ. ಮೊದಲ ದಿನಕ್ಕೆ ಹೋಲಿಸಿದರೆ, 9ನೇ ದಿನ ಟಿಕೆಟ್​ ಮಾರಾಟದಲ್ಲಿ ಶೇ 74.89ರಷ್ಟು ಕುಸಿತ ಕಂಡಿದೆ.

9ನೇ ದಿನದ ಬಾಕ್ಸ್​ ಆಫೀಸ್​ ಕಲೆಕ್ಷನ್​: ಸ್ಯಾಕ್ನಿಲ್ಕ್ ಪ್ರಕಾರ, ಸಿನಿಮಾ ಬಿಡುಗಡೆಯಾಗಿ ಒಂಬತ್ತನೇ ದಿನಕ್ಕೆ 124.80 ಲೋಟಿ ಸಂಗ್ರಹಿಸಿದೆ. ಒಂದೇ ವಾರದಲ್ಲಿ ಚಿತ್ರ 122.15ಕೋಟಿ ಸಂಗ್ರಹಿಸಿತ್ತು. ಅಕ್ಟೋಬರ್​ 18 ರಂದು ಸಿನಿಮಾದ ಪ್ರೇಕ್ಷಕರು, ಪ್ರಸಾರದಲ್ಲೂ ಬದಲಾವಣೆ ಕಂಡು ಬಂದಿದ್ದು, ಕೇವಲ ಶೇ 17.15ರಷ್ಟು ವೀಕ್ಷಣೆ ಕಂಡಿದೆ.

ಹೀಗಿದೆ ಗಳಿಕೆಯ ಲೆಕ್ಕಾಚಾರ: ಮೊದಲದಿನದ ಕಲೆಕ್ಷನ್​: ಎಲ್ಲಾ ಭಾಷೆ ಸೇರಿ ಒಟ್ಟು 122.15 ಕೋಟಿ (ತಮಿಳು: 105.07 ಕೋಟಿ, ತೆಲುಗು: 13.58 ಕೋಟಿ, ಹಿಂದಿ: 3.2 Cr ಕೋಟಿ, ಕನ್ನಡ: 0.3 ಕೋಟಿ)

9 ಮೇ ದಿನ (ಎರಡನೇ ಶುಕ್ರವಾರ): 2.65 ಕೋಟಿ

ಪ್ರಿಕ್ವೇಲ್​ನತ್ತ ನಿರ್ದೇಶಕರ ಚಿತ್ತ: 'ವೆಟ್ಟೈಯನ್​' ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಮಿಶ್ರ ಪ್ರದರ್ಶನವನ್ನು ನೀಡಿದರೂ ನಿರ್ದೇಶಕ ಟಿಜೆ ಜ್ಞಾನವೆಲ್ ಈಗಾಗಲೇ ಅದರ ಪ್ರಿಕ್ವೆಲ್​ ಕುರಿತು ಮಾತನಾಡುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಪತ್ರಿಕಾ ಸಂವಾದದ, ಪೊಲೀಸ್ ಎನ್‌ಕೌಂಟರ್ ಹತ್ಯೆಗಳ ವಿವಾದಾತ್ಮಕ ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡುವ, ಅನ್ವೇಷಿಸುವ ಕುರಿತು ಮಾತನಾಡಿದ್ದರು. ನಾಯಕ ಅಥಿಯಾನ್ ಅವರ ಪ್ರಯಾಣ ವಿಸ್ತರಿಸುವ ಗುರಿಯನ್ನು ಕೂಡ ಜ್ಞಾನವೆಲ್​ ಹೊಂದಿದ್ದಾರೆ.

'ವೆಟ್ಟೈಯನ್'​ ಕುರಿತು: ಸುಬಾಸ್ಕರನ್ ಅಲ್ಲಿರಾಜ ಅವರ ಲೈಕಾ ಪ್ರೊಡಕ್ಷನ್ಸ್​​ನಲ್ಲಿ ಸಿನಿಮಾ ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿದ್ದು, ಮಾದಕವಸ್ತು ಜಾಲದ ವಿರುದ್ಧದ ಹೋರಾಟದ ಕುರಿತು ಕಥಾ ಹಂದರವಿದೆ. ಅಪರಾಧ, ನೀತಿ ಮತ್ತು ನ್ಯಾಯದ ಅಸ್ತ್ರಗಳೊಂದಿಗೆ ಕಥೆ ಸಾಗುತ್ತದೆ.

ಸುಬಾಸ್ಕರನ್ ಅಲ್ಲಿರಾಜ ಅವರ ಲೈಕಾ ಪ್ರೊಡಕ್ಷನ್ಸ್​ನ ಅಡಿ ನಿರ್ಮಿಸಿದ ಈ ಚಲನಚಿತ್ರವು ಮಾದಕವಸ್ತು ವ್ಯಾಪಾರವನ್ನು ಬಹಿರಂಗಪಡಿಸುವ ಸರ್ಕಾರಿ ಶಾಲೆಯ ಶಿಕ್ಷಕರ ಹಿಡಿತದ ಕಥೆಯನ್ನು ಹೇಳುತ್ತದೆ, ಇದು ಅಸಾಂಪ್ರದಾಯಿಕ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖೆಗೆ ಕಾರಣವಾಗುತ್ತದೆ. ನಿರೂಪಣೆಯು ಅಪರಾಧ, ನೈತಿಕತೆ ಮತ್ತು ನ್ಯಾಯದ ಅಂಶಗಳಲ್ಲಿ ಸಂಕೀರ್ಣವಾಗಿ ನೇಯ್ದಿದೆ, ಅಂತಹ ಎನ್ಕೌಂಟರ್​​​​​​​ಗಳೊಂದಿಗೆ ಸಂಬಂಧಿಸಿದ ನೈತಿಕ ಇಕ್ಕಟ್ಟುಗಳನ್ನು ಆಲೋಚಿಸಲು ವೀಕ್ಷಕರನ್ನು ಆಹ್ವಾನಿಸುತ್ತದೆ.

ಒಟಿಟಿ: ವೆಟ್ಟಿಯನ್​ ಚಿತ್ರವನ್ನೂ ಈಗಾಗಲೇ ಅಮೆಜಾನ್​ ಫ್ರೈಮ್​​ 90 ಕೋಟಿಗೆ ಹಕ್ಕು ಪಡೆದುಕೊಂಡಿದೆ.

ಇದನ್ನೂ ಓದಿ: 'ಬಘೀರ' ಚಿತ್ರದಲ್ಲಿ 'ರುಧಿರ'ನಾಗಿ ಎಂಟ್ರಿ ಕೊಟ್ಟ ರೋರಿಂಗ್ ಸ್ಟಾರ್ ಶ್ರೀಮುರಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.