ETV Bharat / entertainment

ವಸಿಷ್ಠ ಸಿಂಹ ನಟನೆಯ 'ವಿಐಪಿ' ಸಿನಿಮಾಗೆ ಸಿಕ್ತು ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ - VIP - VIP

ವಸಿಷ್ಠ ಸಿಂಹ ಅಭಿನಯದ 'ವಿಐಪಿ' ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿದೆ.

'VIP' First Look Poster Release Event
'ವಿಐಪಿ' ಫಸ್ಟ್ ಲುಕ್ ಪೋಸ್ಟರ್ ರಿಲೀಸ್​ ಈವೆಂಟ್​
author img

By ETV Bharat Karnataka Team

Published : Mar 26, 2024, 1:29 PM IST

ಕನ್ನಡ ಚಿತ್ರರಂಗದಲ್ಲಿ ತಮ್ಮ ಅಮೋಘ ಅಭಿನಯ ಮತ್ತು ಕಂಠಸಿರಿಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳ ಮನಗೆದ್ದಿರುವ ಜನಪ್ರಿಯ ನಟ ವಸಿಷ್ಠ ಸಿಂಹ. ಸದ್ಯ 'ಲವ್ ಲೀ' ಚಿತ್ರದ ಗುಂಗಿನಲ್ಲಿರುವ ವಸಿಷ್ಟ ಸಿಂಹ ಅವರೀಗ ಬ್ಯಾಟ್ ಬಾಲ್ ಹಿಡಿದು ಫೀಲ್ಡ್​ಗೆ ಹಾಜರಾಗಿದ್ದಾರೆ. ಹಾಗಾದ್ರೆ ವಸಿಷ್ಠ ಸಿಂಹ ಕ್ರಿಕೆಟ್​ಗೆ ಎಂಟ್ರಿ ಕೊಟ್ರಾ ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು. ವಸಿಷ್ಠ ಸಿಂಹ ನಟಿಸುತ್ತಿರೋ ಹೊಸ ಚಿತ್ರದ ಹೆಸರು 'ವಿಐಪಿ'. ಈ ಸಿನಿಮಾದ ಪಾತ್ರ ಕ್ರಿಕೆಟ್​ಗೆ ಸಂಬಂಧಿಸಿದಂತೆ ತೋರುತ್ತಿದೆ.

ವಿಐಪಿ ಫಸ್ಟ್ ಲುಕ್​ ಪೋಸ್ಟರ್ ಅನಾವರಣ: ಅದಿಚುಂಚನಗಿರಿ ಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪೂಜ್ಯ ಪ್ರಸನ್ನನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ವಿಐಪಿ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ. ಈ ಕಾರ್ಯಕ್ರಮದಲ್ಲಿ ನಾಯಕ ನಟ ವಸಿಷ್ಠ ಸಿಂಹ ಸೇರಿದಂತೆ ಚಿತ್ರತಂಡದವರು ಉಪಸ್ಥಿತರಿದ್ದರು. ಸದ್ಯ ಬಿಡುಗಡೆಯಾಗಿರುವ ಫಸ್ಟ್ ಲುಕ್​ನಲ್ಲಿ ವಸಿಷ್ಠ ಸಿಂಹ ಬ್ಯಾಟ್ ಹಿಡಿದಿದ್ದಾರೆ. ಮಾಸ್ ಫೀಲ್ ಕೊಡುವಂತಹ ಚಿತ್ರದ ಪೋಸ್ಟರ್ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

'VIP' First Look Poster Release Event
'ವಿಐಪಿ' ಫಸ್ಟ್ ಲುಕ್ ಪೋಸ್ಟರ್ ರಿಲೀಸ್​ ಈವೆಂಟ್​

ಚಿತ್ರತಂಡ ಹೀಗಿದೆ; ವಿಭಿನ್ನ ಕಥಾಹಂದರ ಹಾಗೂ ಮೇಕಿಂಗ್​ನಿಂದ ಸದ್ದು ಮಾಡುತ್ತಿರುವ ವಿಐಪಿ ಚಿತ್ರದಲ್ಲಿ ವಸಿಷ್ಠ ಸಿಂಹ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶರ್ಮಾ ಅಭಿನಯಿಸುತ್ತಿದ್ದಾರೆ. ಸುನೀಲ್ ಪುರಾಣಿಕ್, ಬಲ ರಾಜವಾಡಿ, ಅಫ್ಜಲ್, ಸ್ಪರ್ಶ ರೇಖಾ, ಸುಚೇಂದ್ರ ಪ್ರಸಾದ್, ಹನುಮಂತೇಗೌಡ, ರಾಮ್ ಕಶ್ಯಪ್, ರಣವೀರ್ ಸೇರಿದಂತೆ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: ಊರ್ಮಿಳಾ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕಂಗನಾ ಹಳೇ ವಿಡಿಯೋ ವೈರಲ್‌ - Kangana Ranaut

ಬಹುತೇಕ ಚಿತ್ರೀಕರಣ ಪೂರ್ಣ: ಪೋಸ್ಟರ್​ನಿಂದ ಕುತೂಹಲ ಹುಟ್ಟಿಸಿರೋ ಈ ಚಿತ್ರಕ್ಕೆ ಈಗಾಗಲೇ ಬೆಂಗಳೂರು ಸುತ್ತಮುತ್ತ ಎರಡು ಹಂತಗಳ ಚಿತ್ರೀಕರಣ ನಡೆದಿದೆ. ಈ ಹಂತದಲ್ಲಿ ಮಾತಿನ‌ ಭಾಗದ ಚಿತ್ರೀಕರಣ ಮತ್ತು ಕೆ.ಜಿ.ಎಫ್ ಖ್ಯಾತಿಯ ವಿಕ್ರಂ ಮೋರ್, ಯುವ ಖ್ಯಾತಿಯ ಅರ್ಜುನ್ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆದಿದೆ.

ಇದನ್ನೂ ಓದಿ: ಹರಾಜಿನಲ್ಲಿ 5 ಕೋಟಿಗೆ ಮಾರಾಟವಾಯ್ತು 'ಟೈಟಾನಿಕ್'​ ಹಿರೋಯಿನ್​ ಜೀವ ಉಳಿಸಿದ್ದ 'ತೇಲುವ ಬಾಗಿಲು' - wooden door from Titanic

ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ: ಕಲಾ ಸೃಷ್ಟಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಎಸ್ ಮೋಹನ್ ಕುಮಾರ್ ಹಾಗೂ ಆರ್ ಅಚ್ಯುತ್ ರಾವ್ ಅವರು ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬ್ರಹ್ಮ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ರಾಜೀವ್ ಗಣೇಸನ್ ಛಾಯಾಗ್ರಹಣ, ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಸತೀಶ್ ಚಂದ್ರಯ್ಯ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರೋ ಚಿತ್ರತಂಡ ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.