ETV Bharat / entertainment

'ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ' ಎಂದ 'U I' ಸೆನ್ಸಾರ್​ನಲ್ಲಿ ಪಾಸ್​: ಪರೀಕ್ಷೆಗೆ ಸಜ್ಜಾದ ಬುದ್ಧಿವಂತ, ಕಿಚ್ಚ - UPENDRA U I MOVIE

ಡಿಸೆಂಬರ್​​ 20ಕ್ಕೆ ಅದ್ಧೂರಿಯಾಗಿ ತೆರೆಕಾಣಲು ಸಜ್ಜಾಗಿರುವ 'ಯು ಐ' ಸಿನಿಮಾ ಸೆನ್ಸಾರ್​ ಪರೀಕ್ಷೆಯಲ್ಲಿ 'ಯು ಎ' ಪ್ರಮಾಣ ಪತ್ರದೊಂದಿಗೆ ಪಾಸಾಗಿದೆ.

U I Film Gets U/A Certificate
ಸೆನ್ಸಾರ್​ನಲ್ಲಿ ಪಾಸಾದ ಯು ಐ ಸಿನಿಮಾ (Photo: Film Poster)
author img

By ETV Bharat Entertainment Team

Published : Dec 11, 2024, 3:00 PM IST

ಚಿತ್ರರಂಗದಲ್ಲಿ 'ಬುದ್ಧಿವಂತ' ಎಂಬ ಜನಪ್ರಿಯತೆಗೆ ಪಾತ್ರರಾಗಿರುವ ರಿಯಲ್​ ಸ್ಟಾರ್​ ಉಪೇಂದ್ರ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ 'U I'. ಈ ಸಿನಿಮಾ ಬಿಡುಗಡೆಗೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಸಿನಿಮಾ ವೀಕ್ಷಿಸಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಯು ಐ' ಸೆನ್ಸಾರ್​ ಪರೀಕ್ಷೆಯಲ್ಲಿ ಕೂಡಾ ಪಾಸಾಗಿದೆ. ಇನ್ನೇನು ಚಿತ್ರಮಂದಿರ ಪ್ರವೇಶಿಸೋದೊಂದೇ ಬಾಕಿ ಇದೆಯಷ್ಟೇ!.

ಇನ್​ಸ್ಟಾಗ್ರಾಂ ಪೋಸ್ಟ್​​ ಮೂಲಕ ಮಾಹಿತಿ: ಕೆವಿಎನ್​ ಪ್ರೊಡಕ್ಷನ್​​ ತನ್ನ ಅಧಿಕೃತ ಇನ್​​ಸ್ಟಾಗ್ರಾಮ್​ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದೆ. ನಾಯಕ ನಟ ಉಪೇಂದ್ರ ಅವರ ಪವರ್​ಫುಲ್​ ಪೋಸ್ಟರ್ ಹಂಚಿಕೊಂಡ ಪ್ರೊಡಕ್ಷನ್​ ಹೌಸ್​, ''ಸರ್ಟಿಫೈಡ್​​​ 𝐔/𝐀 - ಅನ್​​​ಸ್ಟಾಪಬಲ್​ ಆ್ಯಕ್ಷನ್​​, ಯು ಐ ದಿ ಮೂವಿ ಫೈರ್ ಅಂಡ್ ಫ್ಯೂರಿಯೊಂದಿಗೆ ನಿಮ್ಮೆಲ್ಲರಿಗೂ ಬಿಗ್ ಸ್ಕ್ರೀನ್​​ ಮೇಲೆ ಅದ್ಭುತ ಹಬ್ಬ ನೀಡಲು ಬರುತ್ತಿದೆ, ಯು ಐ ದಿ ಮೂವಿ - ಡಿಸೆಂಬರ್​​ 20ಕ್ಕೆ ಬಿಡುಗಡೆ'' ಎಂದು ಬರೆದುಕೊಂಡಿದೆ.

7-8 ವರ್ಷಗಳ ಬಳಿಕ ನಿರ್ದೇಶನಕ್ಕಿಳಿದ ಉಪ್ಪಿ: ಉಪ್ಪಿ ಅಂದ್ಮೇಲೆ ಸಾಮಾನ್ಯ ಸಿನಿಮಾವನ್ನೊಂತೂ ನಿರಿಕ್ಷಿಸೋಕಾಗಲ್ಲ. ತನ್ನ ಪ್ರತೀ ಚಿತ್ರದಲ್ಲೂ ಪ್ರೇಕ್ಷಕರ ತಲೆಗೆ ಕೆಲಸ ಕೊಡೋ ಕಾರ್ಯವನ್ನು ಉಪ್ಪಿ ಮಾಡಿಕೊಂಡು ಬಂದಿದ್ದಾರೆ. ಚಿತ್ರದ ಕಥಾವಸ್ತು ಮತ್ತು ಅದನ್ನು ಪ್ರೇಕ್ಷಕರಿಗೆ ತಲುಪಿಸುವ ರೀತಿ ಬಹು ವಿಭಿನ್ನ. ಹಾಗಾಗಿಯೇ, ಅವರ ಹೆಚ್ಚಿನ ಸಿನಿಮಾಗಳು ಹಿಟ್​​ ಲಿಸ್ಟ್​ ಸೇರಿವೆ. ಇನ್ನೂ 'ಯು ಐ' ಬಗ್ಗೆ ಮಾತನಾಡುವುದಾದರೆ, ಬರೋಬ್ಬರಿ 7-8 ವರ್ಷಗಳ ಬಳಿಕ ಉಪೇಂದ್ರ ನಿರ್ದೇಶಿಸಿರುವ ಸಿನಿಮಾ. ಹಾಗಾಗಿ ಈ ಚಿತ್ರದ ಪ್ರೆಸೆಂಟೇಶನ್​​ ಬಗ್ಗೆ ದೊಡ್ಡ ಮಟ್ಟಿನ ನಿರೀಕ್ಷೆಗಳಿರೋದು ಸಹಜವೇ.

ಸಿನಿಮಾ ಗ್ಲಿಂಪ್ಸ್​​​ ಕೊಟ್ಟ ಹಿಂಟ್ಸ್​ ಏನು?: 'ಯು ಐ' ಉಪ್ಪಿ ವೃತ್ತಿಜೀವನದ ವಿಶಿಷ್ಟ ಸಿನಿಮಾ ಆಗುವ ಎಲ್ಲ ಲಕ್ಷಣಗಳಿವೆ. ಇತ್ತೀಚೆಗೆ ವಾರ್ನರ್ ಶೀರ್ಷಿಕೆಯಡಿ ಅನಾವರಣಗೊಂಡಿರುವ ಸಿನಿಮಾದ ಗ್ಲಿಂಪ್ಸ್​ ಕೂಡಾ ಇದನ್ನೇ ಹೇಳಿದೆ. ತಮ್ಮದೇ ಆದ ಡಿಫ್ರೆಂಟ್​ ಸ್ಟೈಲ್​ನಲ್ಲಿ ಮತ್ತೊಂದು ವಿಭಿನ್ನ ಕಥೆ ಹೇಳಲು ಉಪ್ಪಿ ಸಜ್ಜಾಗಿದ್ದಾರೆ.

14 ವರ್ಷಗಳಿಂದೆ ಬಂದಿದ್ದ 'ಸೂಪರ್' ಚಿತ್ರದಲ್ಲಿ ದೇಶದ ಭವಿಷ್ಯ ಹೇಗಿರಬೇಕು? ಏನೆಲ್ಲ ಬದಲಾವಣೆ ಆಗಬೇಕು? ಎಂಬ ವಿಚಾರದ ಸುತ್ತ ಉಪ್ಪಿ ಕಥೆ ಮಾಡಿದ್ದರು. ಈ ಬಾರಿ ಅದಕ್ಕೆ ವಿರುದ್ಧ ಎನ್ನುವಂತಹ ಕಥೆಯನ್ನು ಹೇಳಲು ರೆಡಿಯಾಗಿದ್ದಾರೆ. 2040ರಲ್ಲಿ ಭಾರತ ಹೇಗಿರುತ್ತದೆ ಎಂಬುದನ್ನು ಕಲ್ಪಿಸಿಕೊಂಡು ಸಿನಿಮಾ ಮಾಡಿದ್ದಾರೆ. ಜನತೆ ನಿಜವಾಗಿಯೂ ಬೇಕಾದ್ದನ್ನು ಬಿಟ್ಟು ಬೇಡದೇ ಇರುವ ವಿಷಯಗಳ ಹಿಂದೆ ಬಿದ್ದಿದ್ದು, ಪ್ರಪಂಚ ವಿನಾಶದತ್ತ ಸಾಗುತ್ತಿದೆ. ಜಾತಿ, ಧರ್ಮ, ಮೊಬೈಲ್ ಗುಂಗಿನಲ್ಲೇ ಇದ್ದೇವೆ ಎಂಬ ಕಾನ್ಸೆಪ್ಟ್​​​​ನಲ್ಲಿ ಕಥೆ ಹೆಣೆದಿದ್ದಾರೆ. ಇಡೀ ವಾರ್ನರ್​​ ಗ್ಲಿಂಪ್ಸ್​​ನಲ್ಲಿರುವ "ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ" ಎನ್ನುವ ಒಂದೇ ಒಂದು ಡೈಲಾಗ್ ಸಿನಿಪ್ರಿಯರ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಪುಷ್ಪ 2 ಕಲೆಕ್ಷನ್​​​​: ಅಬ್ಬಬ್ಬಾ 6 ದಿನಗಳಲ್ಲಿ ₹1,000 ಕೋಟಿ; ಭಾರತದಲ್ಲೆಷ್ಟು? ಸಂಪೂರ್ಣ ಮಾಹಿತಿ

ಯು ಐ ಬರೋಬ್ಬರಿ 100 ಕೋಟಿ ಬಜೆಟ್​ನ ಸಿನಿಮಾ ಎಂದು ವರದಿಗಳು ತಿಳಿಸಿವೆ. ಉಪೇಂದ್ರ ಅವರ ಜೊತೆ ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಾಧುಕೋಕಿಲ, ಆರ್ಮುಗ ರವಿಶಂಕರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತವಿದೆ. ಕೆ.ಪಿ ಶ್ರೀಕಾಂತ್ ಹಾಗೂ ನವೀನ್ ಮನೋಹರ್ ಜಂಟಿಯಾಗಿ ನಿರ್ಮಾಣ ಮಾಡಿರೋ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಿಸೆಂಬರ್ 20ಕ್ಕೆ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

ಇದನ್ನೂ ಓದಿ: 'ಮೋಕ್ಷಿತಾ ಕರೆಕ್ಟ್​​, ಗೆಳೆಯ ಗೆಳತಿ ಇನ್ನಿರೋದಿಲ್ಲ, ಮುಗಿಸ್ತಿದ್ದೇನೆ': ಟಾಸ್ಕ್​​ ಹೊಡೆತಕ್ಕೆ ಮಂಜು ಗೌತಮಿ ಫ್ರೆಂಡ್​ಶಿಪ್​ ಪೀಸ್​ ಪೀಸ್​!

ಯು ಐ vs ಮ್ಯಾಕ್ಸ್​​: ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಸುದೀಪ್​ ಅವರ ಬಹುನಿರೀಕ್ಷಿತ ಚಿತ್ರಗಳು ಬೆರಳೆಣಿಕೆ ದಿನಗಳ ಅಂತರದಲ್ಲಿ ಬಿಡುಗಡೆ ಆಗುತ್ತಿವೆ.​ ಯು ಐ ಡಿಸೆಂಬರ್ 20ರಂದು ತೆರೆಕಂಡರೆ, ಡಿಸೆಂಬರ್ 25ಕ್ಕೆ ಮ್ಯಾಕ್ಸ್ ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.