ಕಳೆದ ವರ್ಷ 'ಜೈಲರ್' ಮೂಲಕ ವಿಶ್ವದಾದ್ಯಂತ ಸದ್ದು ಮಾಡಿರುವ ಸೌತ್ ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಕೂಲಿ'. ತಮ್ಮ ಈ ಸಿನಿಮಾ ಮೂಲಕ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಮನರಂಜಿಸಲು ಸಜ್ಜಾಗಿದ್ದಾರೆ. ಕಮಲ್ ಹಾಸನ್ ಅವರ ವಿಕ್ರಮ್ ಮತ್ತು ದಳಪತಿ ವಿಜಯ್ ಅವರ ಲಿಯೋ, ಮಾಸ್ಟರ್‌ನಂತಹ ಹಿಟ್ ಚಿತ್ರಗಳಿಂದ ಗುರುತಿಸಿಕೊಂಡಿರುವ ತಮಿಳು ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ವಿಭಿನ್ನ ಅವತಾರದಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಲಿದ್ದಾರೆ. ಈ ಚಿತ್ರದಲ್ಲಿ ಸ್ಯಾಂಡಲ್ವುಡ್ನ ರಿಯಲ್ ಸ್ಟಾರ್ ಉಪೇಂದ್ರ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೂಲಿ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪ್ಪಿ: ರಜನಿಕಾಂತ್ ನಟನೆಯ ಈ ಚಿತ್ರವನ್ನು ಈ ಮೊದಲು 'ತಲೈವರ್ 171' ಎಂದು ಉಲ್ಲೇಖಿಸಲಾಗುತ್ತಿತ್ತು. ನಂತರ ಆ್ಯಕ್ಷನ್-ಪ್ಯಾಕ್ಡ್ ಟೀಸರ್ ಮೂಲಕ ಚಿತ್ರದ ಟೈಟಲ್ ಅನ್ನು ಅನೌನ್ಸ್ ಮಾಡಲಾಯಿತು. 'ಕೂಲಿ' ಶೀರ್ಷಿಕೆ ಪ್ರೇಕ್ಷಕರ ಗಮನ ಸೆಳೆದಿದ್ದು, ಸಂಪೂರ್ಣ ಸಿನಿಮಾ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ. ಇದೀಗ ಕನ್ನಡ ಚಿತ್ರರಂಗದ ಬುದ್ಧಿವಂತ ಖ್ಯಾತಿಯ ನಟ-ನಿರ್ದೇಶಕ ಉಪೇಂದ್ರ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.
ನಿಮ್ಮ ಆಶೀರ್ವಾದದಿಂದ ನನ್ನ ಸೂಪರ್ ಸ್ಟಾರ್ ರಜನಿ ಸಾರ್ ಜೊತೆ ಕೂಲಿ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ🙏
— Upendra (@nimmaupendra) August 24, 2024
Feeling blessed to share Screen space with my Idol SUPERSTAR Rajni Sir #Coolie 🙏❤️🙏
Special Thanks to @Dir_Lokesh@sunpictures @rajinikanth #KalanithiMaran@anirudhofficial @anbariv… pic.twitter.com/uztl8Jbqca
ಉಪೇಂದ್ರ ಪೋಸ್ಟ್: ಈ ಗುಡ್ ನ್ಯೂಸ್ ಅನ್ನು ಸ್ವತಃ ನಟ-ನಿರ್ದೇಶಕ ಉಪೇಂದ್ರ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಜನಿ ಜೊತೆಗಿನ ಫೋಟೋ ಹಂಚಿಕೊಂಡ ಉಪ್ಪಿ, 'ನಿಮ್ಮ ಆಶೀರ್ವಾದದಿಂದ ನನ್ನ ಸೂಪರ್ ಸ್ಟಾರ್ ರಜನಿ ಸರ್ ಜೊತೆ ಕೂಲಿ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
Buzz: New Addition to Superstar’s #Coolie is none other than Kannada Mass star Upendra 🔥 pic.twitter.com/PziWlf0RpY
— Christopher Kanagaraj (@Chrissuccess) August 23, 2024
ಪೋಸ್ಟ್ ಡಿಲೀಟ್ ಮಾಡಿದ ರಿಯಲ್ ಸ್ಟಾರ್: ಪೋಸ್ಟ್ ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಉಪೇಂದ್ರ ಅವರು ಈ ಫೋಟೋ ಡಿಲೀಟ್ ಮಾಡಿದ್ದಾರೆ. ಆದ್ರೆ ಕೂಲಿ ಚಿತ್ರದಲ್ಲಿ ರಿಯಲ್ ಸ್ಟಾರ್ ನಟಿಸುತ್ತಿರೋದು ಪಕ್ಕಾ ಆಗಿದೆ.
ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಚಿತ್ರವನ್ನು ಸನ್ ಪಿಕ್ಚರ್ಸ್ನ ಕಲಾನಿತಿಮಾರನ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ಸಂಗೀತ ಒದಗಿಸುತ್ತಿದ್ದಾರೆ. ಬಹುನಿರೀಕ್ಷಿತ ಚಿತ್ರದಲ್ಲಿ ಶ್ರುತಿ ಹಾಸನ್ ಮತ್ತು ಸತ್ಯರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಿನಾಮ…. U I …. For U….. pic.twitter.com/djYlbMMGjm
— Upendra (@nimmaupendra) August 24, 2024
ಇದನ್ನೂ ಓದಿ: ಹಂಗೇರಿಯಲ್ಲಿ ಉಪೇಂದ್ರ ಸಿನಿಮಾದ ಸಂಗೀತ ಸಂಯೋಜನೆ: ಸಖತ್ ಥ್ರಿಲ್ಲಿಂಗ್ ಆಗಿದೆ 'ಸೌಂಡ್ ಆಫ್ ಯಐ' - Sound of UI
ಈಗಾಗಲೇ ರಜನಿಕಾಂತ್ ಅವರ ಜೈಲರ್ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ನಿರ್ವಹಿಸಿರುವ ಪಾತ್ರ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ. ಸದ್ಯ ಉಪ್ಪಿ ಪಾತ್ರ ಹೇಗಿರಬಹುದು ಎಂಬ ಕತೂಹಲ ಪ್ರೇಕ್ಷಕರಲ್ಲಿದೆ. ಇನ್ನು ವಿಜಯ್ ಜೊತೆಗಿನ ಲೋಕೇಶ್ ಕನಕರಾಜ್ ಅವರ ಕೊನೆಯ ಚಿತ್ರ 'ಲಿಯೋ' ಮಿಶ್ರ ವಿಮರ್ಶೆ ಸ್ವೀಕರಿಸಿದೆ. ಮುಂದಿನ ಕೂಲಿ ಚಿತ್ರ ಹೇಗಿರಬಹುದು ಎಂಬ ಕುತೂಹಲ ಸಿನಿಪ್ರಿಯರಲ್ಲಿದೆ. ಇನ್ನು ಜ್ಞಾನವೆಲ್ ನಿರ್ದೇಶನದ ರಜನಿಕಾಂತ್ ಅವರ 170ನೇ ಚಿತ್ರ ವೆಟ್ಟೈಯನ್ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ.
ಉಪೇಂದ್ರ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಯು ಐ'. ಹೊಸದಾಗಿ ವಿಡಿಯೋವೊಂದನ್ನು ಅನಾವರಣಗೊಳಿಸಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಟೈಟಲ್, ಟೀಸರ್, ಟ್ರೋಲ್ ಸಾಂಗ್ನಿಂದಲೇ ಸಖತ್ ಸದ್ದು ಮಾಡಿದ್ದ 'ಯು ಐ' ಚಿತ್ರತಂಡ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಸಂಗೀತ ಸಂಯೋಜನೆ ಮಾಡಿಕೊಂಡು ಬಂದಿದೆ.