ETV Bharat / entertainment

ಟಿ.ಎಸ್ ನಾಗಾಭರಣರ ಪತ್ನಿ ನಿರ್ದೇಶನದ ಚೊಚ್ಚಲ ಚಿತ್ರ 'ಜೀನಿಯಸ್ ಮುತ್ತ'ನಿಗೆ ಚಿನ್ನಾರಿಮುತ್ತ ಸಾಥ್ - Genius Mutta - GENIUS MUTTA

ನಾಗಾಭರಣ ಅವರ ಪತ್ನಿ ನಾಗಿಣಿ ಭರಣ ನಿರ್ದೇಶನದ ಚೊಚ್ಚಲ ಚಿತ್ರ 'ಜೀನಿಯಸ್ ಮುತ್ತ' ತೆರೆಕಾಣಲು ಸಜ್ಜಾಗಿದೆ.

'Genius Mutta' Film Team
'ಜೀನಿಯಸ್ ಮುತ್ತ' ಚಿತ್ರತಂಡ (ETV Bharat)
author img

By ETV Bharat Karnataka Team

Published : Jul 26, 2024, 4:34 PM IST

ಟಿ.ಎಸ್ ನಾಗಾಭರಣ, ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕದ ಜೊತೆಗೆ ಕಮರ್ಷಿಯಲ್ ಸಿನಿಮಾಗಳನ್ನು ನಿರ್ದೇಶಿಸಿ ಯಶ ಕಂಡವರು. ಇದೀಗ ಯಶಸ್ವಿ ನಿರ್ದೇಶಕನ ಪತ್ನಿ ಕೂಡ ನಿರ್ದೇಶನಕ್ಕಿಳಿದಿದ್ದಾರೆ. ಹೌದು, ನಾಗಾಭರಣ ಅವರ ಪತ್ನಿ ನಾಗಿಣಿ ಭರಣ ನಿರ್ದೇಶನದ ಚೊಚ್ಚಲ ಚಿತ್ರ 'ಜೀನಿಯಸ್ ಮುತ್ತ' ತೆರೆಗೆ ಬರಲು ಸಜ್ಜಾಗಿದೆ.

'Genius Mutta' Film Team
'ಜೀನಿಯಸ್ ಮುತ್ತ' ತಂಡ (ETV Bharat)

'ಜೀನಿಯಸ್ ಮುತ್ತ'ನಾಗಿ ಮಾಸ್ಟರ್ ಶ್ರೇಯಸ್ ಎಂಬ ಯುವಪ್ರತಿಭೆ ನಟಿಸಿದ್ದಾರೆ. ಚಿತ್ರದ ವಿಶೇಷ ಪಾತ್ರದಲ್ಲಿ ಚಿನ್ನಾರಿಮುತ್ತನಾಗಿ ಮೆಚ್ಚುಗೆ ಪಡೆದಿರುವ ಜನಪ್ರಿಯ ನಟ ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ. ಇತ್ತೀಚೆಗೆ ತಮ್ಮ ಚಿತ್ರದ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

'Genius Mutta' Film Team
ನಾಗಿಣಿ ಭರಣ ನಿರ್ದೇಶನದ ಚೊಚ್ಚಲ ಚಿತ್ರ 'ಜೀನಿಯಸ್ ಮುತ್ತ' (ETV Bharat)

ಮೊದಲಿಗೆ ಮಾತನಾಡಿದ ನಿರ್ದೇಶಕಿ ನಾಗಿಣಿ ಭರಣ, ನನಗೆ ಹಲವು ವರ್ಷಗಳಿಂದ ನಿರ್ದೇಶನ ಮಾಡುವಂತೆ ಎಲ್ಲರೂ ಹೇಳುತ್ತಿದ್ದರು. ಆದರೆ ಆಗಿರಲಿಲ್ಲ. ಲತಾ ಅವರು ತಮ್ಮ ಮಗನನ್ನು ಚಿತ್ರರಂಗಕ್ಕೆ ಪ್ರವೇಶಿಸಬೇಕೆಂದುಕೊಂಡಿದ್ದೇನೆ. ಆ ಚಿತ್ರವನ್ನು ನೀವೇ ನಿರ್ದೇಶಿಸಬೇಕು ಎಂದರು. ಅವರ ಒತ್ತಾಯಕ್ಕೆ ಮಣಿದು ನನ್ನ ಸ್ನೇಹಿತರ ತಂಡದೊಂದಿಗೆ ಸೇರಿ ಈ ಚಿತ್ರದ ಕಥೆ ಸಿದ್ಧಪಡಿಸಿದೆ.

'Genius Mutta' Film Team
'ಜೀನಿಯಸ್ ಮುತ್ತ'ನಿಗೆ ಚಿನ್ನಾರಿಮುತ್ತ ಸಾಥ್ (ETV Bharat)

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಹೆಚ್ಚಾಗಿ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿದೆ. ಮಾಸ್ಟರ್ ಶ್ರೇಯಸ್, ವಿಜಯ ರಾಘವೇಂದ್ರ, ಟಿ.ಎಸ್.ನಾಗಾಭರಣ, ಗಿರಿಜಾ ಲೋಕೇಶ್, ಸುಂದರರಾಜ್, ಪನ್ನಗಾಭರಣ ಸೇರಿದಂತೆ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಒಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಾಗೂ ವಿದೇಶಗಳಲ್ಲಿ ನಮ್ಮ ಚಿತ್ರದ ಪ್ರದರ್ಶನವಾಗಿದೆ. ಸಿನಿಮಾ ವೀಕ್ಷಿಸಿದವರು ಮೆಚ್ಚುಗೆಯ ಮಾತುಗಳಾಡಿದ್ದಾರೆಂದು ತಿಳಿಸಿದರು.

'Genius Mutta' Film Team
'ಜೀನಿಯಸ್ ಮುತ್ತ' ಚಿತ್ರತಂಡ (ETV Bharat)

ಟಿ.ಎಸ್ ನಾಗಾಭರಣ ಮಾತನಾಡಿ, ನಾಗಿಣಿ ಅವರು ಈಗ ಸ್ವತಂತ್ರ ನಿರ್ದೇಶನ ಮಾಡಿದರಷ್ಟೇ. ಆದರೆ ನನ್ನ ಎಲ್ಲಾ ಸಿನಿಮಾ, ಧಾರಾವಾಹಿಗಳ ನಿರ್ದೇಶನಕ್ಕೆ ಬಹಳ ಹಿಂದಿನಿಂದ ಸಹಕಾರ ನೀಡುತ್ತಾ ಬಂದಿದ್ದಾರೆ. ಸದ್ಯ ಮೊದಲ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾನು ಈ ಚಿತ್ರದಲ್ಲಿ ಪುಟ್ಟ ಪಾತ್ರವೊಂದನ್ನು ನಿರ್ವಹಿಸಿದ್ದೇನೆ ಎಂದು ತಿಳಿಸಿದರು.

ಯುವ ಪ್ರತಿಭೆ ಮಾಸ್ಟರ್ ಶ್ರೇಯಸ್ ಮಾತನಾಡಿ, ನಾನು ನಾಗಾಭರಣ ಸರ್ ಬಳಿ ನಟನೆ ಕಲಿತಿದ್ದೇನೆ. ಆನಂತರ ಅಮ್ಮನಿಗೆ ನಾನು ನಟನೆ ಮಾಡಬೇಕೆಂಬ ಆಸೆಯಾಯಿತು. ಈ ಚಿತ್ರದಲ್ಲಿ ಜೀನಿಯಸ್ ಮುತ್ತನಾಗಿ ಅಭಿನಯಿಸಿದ್ದೇನೆಂದು ಅಭಿಪ್ರಾಯ ಹಂಚಿಕೊಂಡರು.

ಇದನ್ನೂ ಓದಿ: ಕುಡುಬಿ ಜನಾಂಗದ ಕಥೆ ಹೇಳಲಿದೆ 'ಗುಂಮ್ಟಿ' ಸಿನಿಮಾ - Movie On Kudubi Community

ನಟ ವಿಜಯ ರಾಘವೇಂದ್ರ ಮಾತನಾಡಿ, ನಾನು ಯಾವಾಗಲೂ ನಾಗಾಭರಣ್ ಸರ್ ಅವರಿಗೆ ಆಭಾರಿ. ಏಕೆಂದರೆ ನನ್ನನ್ನು ಎಲ್ಲರೂ ವಿಜಯ ರಾಘವೇಂದ್ರ ಅನ್ನುವುದಕ್ಕಿಂತ ಚಿನ್ನಾರಿಮುತ್ತ ಎನ್ನುವುದೇ ಹೆಚ್ಚು. ಅಂತಹ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದವರು ನಾಗಾಭರಣ್ ಸರ್. ಈಗ ನಾಗಿಣಿ ಭರಣ ಅವರ ಮೊದಲ ನಿರ್ದೇಶನದ ಸಿನಿಮಾದಲ್ಲೂ ನಾನು ನಟಿಸಿರುವುದು ಖುಷಿಯಾಗಿದೆ, ಹೆಮ್ಮೆ ಇದೆ ಎಂದು ತಿಳಿಸಿದರು.

ನಿರ್ಮಾಪಕಿ ಲತಾ ಜೈಪ್ರಕಾಶ್ ಮಾತನಾಡಿ, ನಾಗಿಣಿ ಭರಣ ಅವರು ನನಗೆ ಹತ್ತು ವರ್ಷಗಳಿಂದ ಪರಿಚಯ. ನನ್ನ ಮಗನಿಗಾಗಿ ಒಂದೊಳ್ಳೆ ಕಥೆ ಮಾಡಿ, ನೀವೇ ನಿರ್ದೇಶನ ಮಾಡಬೇಕೆಂದು ಅವರ ಬಳಿ ಕೇಳಿಕೊಂಡೆ. ಅವರು ಒಳ್ಳೆಯ ಕಥೆ ಸಿದ್ಧ ಮಾಡಿ, ಬಳಿಕ ನನಗೆ ಕಥೆ ಹೇಳಿದರು. ನಂತರ 'ಜೀನಿಯಸ್ ಮುತ್ತ' ಚಿತ್ರ ಆರಂಭವಾಯಿತು. ಸದ್ಯ ಬಿಡುಗಡೆ ಹಂತ ತಲುಪಿದ್ದು, ಖುಷಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: 'ಪರಪಂಚ ಘಮ ಘಮ' ಅಂತಿದ್ದಾರೆ ದಿಗಂತ್​ ಟೀಂ: 'ಪೌಡರ್' ಚಿತ್ರತಂಡಕ್ಕೆ ಗಾಯಕ ಆಂಟೋನಿ ದಾಸ್ ಸಾಥ್ - Parapancha Gama Gama Song

ಚಿತ್ರಕ್ಕೆ ಬಾಪು ಪದ್ಮನಾಭ ಸಂಗೀತ ನೀಡಿದ್ದಾರೆ‌. ಟೈಟಲ್​​ನಿಂದ ಗಮನ ಸೆಳೆಯುತ್ತಿರೋ 'ಜೀನಿಯಸ್ ಮುತ್ತ' ಚಿತ್ರ ಆಗಸ್ಟ್​​ನಲ್ಲಿ ತೆರೆಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.