ಟಾಲಿವುಡ್, ಕಾಲಿವುಡ್, ಮಾಲಿವುಡ್ ಕನ್ನಡ ಹೀಗೆ ದಕ್ಷಿಣ ಚಿತ್ರರಂಗದಲ್ಲಿ ತ್ರಿಷಾಗೆ ವಿಶೇಷ ಕ್ರೇಜ್ ಇದೆ. ಈ ಸುಂದರ ತಾರೆ ತನ್ನ ಸೌಂದರ್ಯ ಮತ್ತು ಅದ್ಭುತ ನಟನೆಯಿಂದ ದಶಕಗಳಿಂದ ಪ್ರಮುಖ ತಾರೆಯಾಗಿ ಗುರುತಿಸಿಕೊಂಡಿದ್ದು, ಸೌತ್ ಇಂಡಸ್ಟ್ರಿಯಲ್ಲಿ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಮತ್ತು ಕದಿಯುತ್ತಲೇ ಇದ್ದಾರೆ.
ತ್ರಿಷಾ ಅಭಿನಯದ ಸಿನಿಮಾಗಳಿವು: 1999ರಲ್ಲಿ ತೆರೆಕಂಡ 'ಜೋಡಿ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ತ್ರಿಶಾ ಅವರ ವೃತ್ತಿ ಜೀವನದಲ್ಲಿ ಇದುವರೆಗೆ ಸಾಕಷ್ಟು ಹಿಟ್ ಚಿತ್ರಗಳಿವೆ. 'ಸಾಮಿ', 'ಆರು', 'ಪೌರ್ಣಮಿ', 'ಬುಜ್ಜಿಗಾಡು', 'ಕಿಂಗ್', 'ಕೋಡಿ', 'ಅಭಿಯುಂ, ನಾನು', 'ವಿನ್ನೈ ತಂದಿ ವರುವಾಯಾ' ಮುಂತಾದ ಬ್ಲಾಕ್‌ಬಸ್ಟರ್ ಹಿಟ್ ಚಿತ್ರಗಳಲ್ಲಿ ತಮ್ಮ ಮುದ್ದಾದ ಅಭಿನಯದಿಂದ ಗಮನ ಸೆಳೆದಿದ್ದಾರೆ.
’ಇನ್ನಾಳ್ಲಕು ಗುರ್ತೋಚ್ಚನಾ ವಾನ’ ಎಂದು ಮಳೆಯ ಸುರಿಮಳೆಯನ್ನೇ ಸುರಿಸಿದ ಈ ಮುದ್ದುಗೊಂಬೆ, ಮಹಿಳಾ ಪ್ರಧಾನ ಸಿನಿಮಾ, ಆ್ಯಕ್ಷನ್ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರಲ್ಲಿ ವಿಶೇಷ ಇಮೇಜ್ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರು 'ಬೃಂದಾ' ವೆಬ್ ಸರಣಿಯೊಂದಿಗೆ OTT ಜಗತ್ತನ್ನು ಪ್ರವೇಶಿಸಿದ್ದಾರೆ.
ತ್ರಿಷಾ ಸಂಭಾವನೆ ಎಷ್ಟು?: ಕಾಲಿವುಡ್ ಸ್ಟಾರ್ ಡೈರೆಕ್ಟರ್ ಮಣಿರತ್ನಂ ಅವರ 'ಪೊನ್ನಿಯನ್ ಸೆಲ್ವನ್' ಚಿತ್ರದಲ್ಲಿ ಯುವರಾಣಿ ಕುಂದವೈ ಪಾತ್ರದಲ್ಲಿ ತ್ರಿಶಾ ನಟಿಸಿದ್ದರು. ಇದಕ್ಕಾಗಿ ವಿಮರ್ಶಕರಿಂದ ಪ್ರಶಂಸೆಯನ್ನೂ ಪಡೆದುಕೊಂಡಿದ್ದಾರೆ. ಆದರೆ, ಈ ಸಿನಿಮಾದ ನಂತರವೇ ತ್ರಿಷಾ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. 'ಲಿಯೋ' ಚಿತ್ರಕ್ಕಾಗಿ ಇವರು ಸುಮಾರು 5 ಕೋಟಿ ರೂ, ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಚಿತ್ರರಂಗದಲ್ಲಿ ಹರಿದಾಡುತ್ತಿವೆ.
ದಕ್ಷಿಣದ ಜೊತೆಗೆ ಉತ್ತರದಲ್ಲೂ ಉತ್ತಮ ಅಭಿಮಾನಿಗಳನ್ನು ಬೆಳೆಸಿಕೊಂಡಿರುವ ತ್ರಿಷಾ ಆರ್ಥಿಕವಾಗಿಯೂ ಉತ್ತಮ ಸ್ಥಿತಿಯಲ್ಲಿದ್ದಾರೆ. ಚಿತ್ರರಂಗದ ವಲಯಗಳ ಪ್ರಕಾರ, ದಕ್ಷಿಣ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ತ್ರಿಷಾ ಕೂಡ ಒಬ್ಬರು ಎಂದು ಹೇಳಲಾಗುತ್ತಿದೆ. ಇತ್ತೀಚಿನ ಮಾಹಿತಿಯ ಪ್ರಕಾರ ತ್ರಿಷಾ ಅವರ ಆಸ್ತಿ 85 ಕೋಟಿ ರೂ. ಎನ್ನಲಾಗುತ್ತಿದೆ.
ಇವರ ಬಳಿ ಇರುವ ಕಾರುಗಳಾವವು ಗೊತ್ತಾ?: ಸಿನಿಮಾಗಳ ಹೊರತಾಗಿ, ತ್ರಿಶಾ ಅನೇಕ ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳು ಮತ್ತು ಪ್ರಚಾರ ಪೋಸ್ಟ್‌ಗಳ ಮೂಲಕವೂ ಆದಾಯ ಗಳಿಸುತ್ತಿದ್ದಾರೆ. ಇವರ ಬಳಿ Mercedes-Benz S-Class BMW-5 ಸರಣಿಯ ಕಾರು, ರೇಂಜ್ ರೋವರ್ Evoque ಮತ್ತು Mercedes-Benz-E ಕಾರುಗಳಿವೆ ಎಂದು ತಿಳಿದು ಬಂದಿದೆ.