ETV Bharat / entertainment

ಜೂ.ಎನ್​ಟಿಆರ್‌ಗೆ ಗಾಯ​​: ನೋವಿನ ನಡುವೆಯೂ 'ದೇವರ' ಚಿತ್ರೀಕರಣ ಮುಗಿಸಿದ ನಟ - Jr NTR Injured - JR NTR INJURED

ದಕ್ಷಿಣ ಚಿತ್ರರಂಗದ ಖ್ಯಾತ ನಟ ಜೂನಿಯರ್​ ಎನ್​ಟಿಆರ್​​ ಗಾಯಗೊಂಡಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿದ್ದು, ನೋವಿನ ನಡುವೆಯೂ ತಮ್ಮ 'ದೇವರ' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಸಿನಿಮಾ ಸೆಪ್ಟೆಂಬರ್​ 27ಕ್ಕೆ ತೆರೆಕಾಣಲಿದೆ.

Jr NTR injured
ಗಾಯಗೊಂಡ ನಟ ಜೂ.ಎನ್​ಟಿಆರ್ (ETV Bharat)
author img

By ETV Bharat Entertainment Team

Published : Aug 14, 2024, 4:00 PM IST

'ದೇವರ' ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ದಕ್ಷಿಣ ಚಿತ್ರರಂಗದ ಖ್ಯಾತ ನಟ ಜೂನಿಯರ್​ ಎನ್​ಟಿಆರ್​​ ಗಾಯಗೊಂಡಿದ್ದಾರೆ. ಕೆಲ ದಿನಗಳ ಹಿಂದೆ ಜಿಮ್‌ನಲ್ಲಿದ್ದ ಸಂದರ್ಭದಲ್ಲಿ ಎಡಗೈ ಮಣಿಕಟ್ಟು ಸಣ್ಣ ಮಟ್ಟದಲ್ಲಿ ಉಳುಕಿದೆ. ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಗಾಯದ ನಡುವೆಯೂ ಜೂ.ಎನ್​​ಟಿಆರ್ ನಿನ್ನೆ ರಾತ್ರಿ 'ದೇವರ' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ನಟ ಶೀಘ್ರದಲ್ಲೇ ಕೆಲಸಕ್ಕೆ ಮರಳಲಿದ್ದಾರೆ ಎಂದು ಜೂ.ಎನ್‌ಟಿಆರ್ ಅವರ ಕಚೇರಿಯಿಂದ ಹೇಳಿಕೆ ಹೊರಡಿಸಲಾಗಿದೆ.

ಟಾಲಿವುಡ್​ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟನನ್ನು ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಯಂಗ್ ಟೈಗರ್ ಅಂತಾ ಕರೆಯೋದುಂಟು. ಇತ್ತೀಚಿನ ದಿನಗಳಲ್ಲಿ 'ದೇವರ' ಸಿನಿಮಾ ಸಲುವಾಗಿ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿರುವ ಇವರು ತಮ್ಮ ಪಾತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಆರ್‌ಆರ್‌ಆರ್ ಮೂಲಕ ವಿಶ್ವದಾದ್ಯಂತದ ಸಿನಿಪ್ರಿಯರ ಗಮನ ಸೆಳೆದಿರುವ ಇವರು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದಾರೆ. ಆದ್ರೆ ಇತ್ತೀಚೆಗೆ ಗಾಯಗೊಂಡಿದ್ದಾರೆ ಎಂಬ ಸುದ್ದಿ ಅವರ ತಂಡದಿಂದ ಬಂದಿದ್ದು, ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಕೆಲವು ದಿನಗಳ ಹಿಂದೆ ಜಿಮ್‌ನಲ್ಲಿ ವ್ಯಾಯಾಮ ಮಾಡುವ ವೇಳೆ ಕೈ ಉಳುಕಿದೆ. ಮುನ್ನೆಚ್ಚರಿಕೆಯಾಗಿ ಪ್ಲಾಸ್ಟರ್ ಬಳಸಲು ನಟನಿಗೆ ಸೂಚಿಸಲಾಯಿತು. ಗಾಯದ ಹೊರತಾಗಿಯೂ ತಮ್ಮ ಶೂಟಿಂಗ್ ಅನ್ನು ಮುಂದುವರೆಸಿದರು. ಅದರಂತೆ ತಮ್ಮ ದೇವರಾ ಚಿತ್ರೀಕರಣವನ್ನು ನಿನ್ನೆ ರಾತ್ರಿ ಪೂರ್ಣಗೊಳಿಸಿದ್ದಾರೆ. ನಟ ಸಿನಿಮಾಗೆ ತಮ್ಮನ್ನು ಎಷ್ಟು ಸಮರ್ಪಿಸಿಕೊಂಡಿದ್ದಾರೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ.

ಕಳೆದ ಸಂಜೆ ಸ್ಪೆಷಲ್​​ ಪೋಸ್ಟ್ ಒಂದನ್ನು ಶೇರ್ ಮಾಡಿದ ಜೂನಿಯರ್​​ ಎನ್​ಟಿಆರ್​​, ದೇವರ ಭಾಗ 1ರ ಶೂಟಿಂಗ್​​ ಪೂರ್ಣಗೊಂಡಿದೆ. ಇದೊಂದು ಅದ್ಭುತ ಪ್ರಯಾಣ. ನಾನು ಪ್ರೀತಿಯ ಸಾಗರ ಮತ್ತು ಅದ್ಭುತ ತಂಡವನ್ನು ಮಿಸ್​ ಮಾಡಿಕೊಳ್ಲಲಿದ್ದೇನೆ. ಸೆಪ್ಟೆಂಬರ್ 27ರಂದು ಶಿವನಿಂದ (ನಿರ್ದೇಶಕ) ರಚಿಸಲ್ಪಟ್ಟ ಜಗತ್ತಿನಲ್ಲಿ ಪ್ರಯಾಣಿಸುವುದನ್ನು ನೋಡಲು ಹೆಚ್ಚು ಕಾಯಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಏಳಿಗೆಗಾಗಿ ಕಲಾವಿದರ ಸಂಘದಲ್ಲಿ ಹೋಮ-ಹವನ: ತಾರೆಯರು ಭಾಗಿ, ವಿಡಿಯೋ ನೋಡಿ - Pooja for Prosperity of Sandalwood

ಜೂನಿಯರ್ ಎನ್​ಟಿಆರ್​​ ಕೊನೆಯದಾಗಿ ರಾಜಮೌಳಿ ನಿರ್ದೆಶನದ ಆರ್​ಅರ್​ಆರ್​​ನಲ್ಲಿ ಕಾಣಿಸಿಕೊಂಡರು. 2022ರಲ್ಲಿ ತೆರೆಕಂಡ ಈ ಚಿತ್ರ ಬ್ಲಾಕ್​ಬಸ್ಟರ್ ಹಿಟ್​ ಆಗಿದೆ. ಈ ಮೂಲಕ ನಟನ ಖ್ಯಾತಿ ಗಡಿದಾಟಿದೆ. ಮುಂದೆ ದೇವರ ಭಾಗ 1, ವಾರ್​​ 2 ಮತ್ತು ಎನ್​ಟಿಆರ್​​​ 31ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ನಾಳೆ ಸಿನಿಸುಗ್ಗಿ: ಒಂದೇ ದಿನ 10ಕ್ಕೂ ಹೆಚ್ಚು ಚಿತ್ರಗಳು ತೆರೆಗೆ; ಬಾಕ್ಸ್​ ಆಫೀಸ್​​ ಫೈಟ್​ ಪಕ್ಕಾ - Independence Day Box Office Clash

ಸೆಪ್ಟೆಂಬರ್​ 27ಕ್ಕೆ ತೆರೆಕಾಣಲಿರುವ ದೇವರ ಚಿತ್ರಕ್ಕೆ ಕೊರಟಾಲ ಶಿವ ಆ್ಯಕ್ಷನ್​ ಕಟ್ ಹೇಳಿದ್ದಾರೆ. ಬಾಲಿವುಡ್ ನಟಿ ಜಾಹ್ನವಿ ಕಪೂರ್​​ ಇದೇ ಮೊದಲ ಬಾರಿಗೆ ಜೂ.ಎನ್​ಟಿಆರ್​ ಜೊತೆ ಸ್ಕ್ರೀನ್​​ ಶೇರ್ ಮಾಡಿದ್ದಾರೆ. ಸ್ಟಾರ್ ಹಿರೋ ಸೈಫ್ ಅಲಿ ಖಾನ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.