ETV Bharat / entertainment

ನನ್ನ ಸೂರ್ಯ- ಚಂದ್ರ ನೀನು, ಒಂದು ದಿನ ತಡವಾಗಿ ಪತಿಯ ಜನ್ಮದಿನದ ಶುಭಾಶಯ ಕೋರಿದ ಪತ್ನಿ - ಶಾಹಿದ್​ ಕಪೂರ್​ ಜನ್ಮದಿನ

ಫೆಬ್ರವರಿ 25ರಂದು ಬಾಲಿವುಡ್ ಹ್ಯಾಂಡ್ಸಮ್​ ಶಾಹಿದ್​ ಕಪೂರ್​ ಅವರ ಜನ್ಮದಿನ. ಈ ಹಿನ್ನೆಲೆ ಶಾಹಿದ್​ ಅವರ ಪತ್ನಿ ರೊಮ್ಯಾಂಟಿಕ್ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

Shahid Kapoor  Shahid Kapoor Birthday  Mira Kapoor on Shahid Birthday  ಶಾಹಿದ್​ ಕಪೂರ್​ ಜನ್ಮದಿನ  ಮೀರಾ ರಜಪೂತ್
ಮೀರಾ ರಜಪೂತ್
author img

By ETV Bharat Karnataka Team

Published : Feb 26, 2024, 1:43 PM IST

ಮುಂಬೈ, ಮಹಾರಾಷ್ಟ್ರ: ಬಾಲಿವುಡ್‌ನ ಹ್ಯಾಂಡ್ಸಮ್​ ನಟ ಶಾಹಿದ್ ಕಪೂರ್ ಫೆಬ್ರವರಿ 25 ರಂದು ತಮ್ಮ 43 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ, ಸೋಮವಾರ ಅವರ ಪತ್ನಿ ಮೀರಾ ರಜಪೂತ್ ರೊಮ್ಯಾಂಟಿಕ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಮೀರಾ ರಜಪೂತ್ ಅವರು ಶಾಹಿದ್ ಕಪೂರ್ ಜೊತೆಗಿನ ಸುಂದರವಾದ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಇದರೊಂದಿಗೆ ಪ್ರೀತಿ ತುಂಬಿದ ಬರಹವನ್ನು ಸಹ ಬರೆದಿದ್ದಾರೆ. ಶಾಹಿದ್‌ನನ್ನು ಸೂರ್ಯ-ಚಂದ್ರ ಎಂದು ಬಣ್ಣಿಸಿರುವ ಮೀರಾ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಮೀರಾ ರಜಪೂತ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಶಾಹಿದ್ ಕಪೂರ್ ಅವರ ಹುಟ್ಟುಹಬ್ಬದ ವಿಶೇಷ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಮೀರಾ ಮೂರು ಫೋಟೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಮೊದಲನೆಯದು ಗಂಡ ಮತ್ತು ಹೆಂಡತಿ ನಗುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಎರಡನೇ ಮತ್ತು ಮೂರನೇ ಚಿತ್ರದಲ್ಲಿ ಸುಂದರ ಸಂಜೆಯ ಒಂದು ನೋಟವೊಂದನ್ನು ಮೀರಾ ತೋರಿಸಿದ್ದಾರೆ. ಅದರಲ್ಲಿನ ಒಂದು ಫೋಟೋದಲ್ಲಿ ಚಂದ್ರ ಮತ್ತು ಸೂರ್ಯ ಒಟ್ಟಿಗೆ ಇರುವುದನ್ನು ಕಾಣಬಹುದಾಗಿದೆ. ನನ್ನ ಚಂದ್ರ ಮತ್ತು ಸೂರ್ಯನಿಗೆ ಜನ್ಮದಿನದ ಶುಭಾಶಯಗಳು, ಸುಂದರವಾದ ಮೀನ ಸೂರ್ಯ ಮತ್ತು ಪೂರ್ಣ ಕನ್ಯಾರಾಶಿ ಚಂದ್ರ... ಈ ವಿಶ್ವವು ನಿಮ್ಮೊಂದಿಗೆ ಹೊಳೆಯುತ್ತದೆ ಎಂದು ಅವರು ಅಡಿ ಬರಹವಾಗಿ ಬರೆದಿದ್ದಾರೆ. ಇಲ್ಲಿ ಮೀರಾ ಅವರಿಬ್ಬರ ರಾಶಿಗಳ ಬಗ್ಗೆ ಕೂಡಾ ಹೇಳಿದ್ದಾರೆ.

Shahid Kapoor  Shahid Kapoor Birthday  Mira Kapoor on Shahid Birthday  ಶಾಹಿದ್​ ಕಪೂರ್​ ಜನ್ಮದಿನ  ಮೀರಾ ರಜಪೂತ್
ಮೀರಾ ರಜಪೂತ್

ಇನ್ನು ಶಾಹಿದ್ ಕಪೂರ್​ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ. ಅವರು ಕಬೀರ್ ಸಿಂಗ್ ಸಹನಟಿ ಕಿಯಾರಾ ಅಡ್ವಾಣಿ, ಕೃತಿ ಸನೋನ್​ ಅವರಿಂದ ಹಿಡಿದು ಉದ್ಯಮದ ಬಹುತೇಕ ಖ್ಯಾತ ಗಣ್ಯರು ಶಾಹಿದ್ ಕಪೂರ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸಿದ್ದಾರೆ. ಇತ್ತೀಚೆಗೆ ಶಾಹಿದ್ ಕಪೂರ್ 'ತೇರಿ ಬ್ಯಾತ್​ ಮೇ ಉಲ್ಜಾ ಜಿಯಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಕೃತಿ ಸನೋನ್​​ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರ ಪ್ರೇಕ್ಷಕರಿಂದ ಬಹಳ ಮೆಚ್ಚುಗೆ ಪಡೆದಿದೆ. ತೇರಿ ಬಾತ್ ಮೇ ಐಸಿ ಉಲ್ಜಾ ಜಿಯಾ ಚಿತ್ರ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಇದುವರೆಗೆ 73.54 ಕೋಟಿ ಗಳಿಸಿದೆ. ಆದರೆ ಚಿತ್ರದ ಒಟ್ಟು ಕಲೆಕ್ಷನ್ 84.85 ಕೋಟಿ ತಲುಪಿದೆ. ವಿಶ್ವಾದ್ಯಂತ 120 ಕೋಟಿ ಗಳಿಸುವ ಮೂಲಕ 100 ಕೋಟಿ ಕ್ಲಬ್ ಸೇರಿದೆ.

ಓದಿ: ವರುಣ್​ ತೇಜ್​​ ಸಿನಿಮಾ ಆಯ್ಕೆ ಬಗ್ಗೆ ಚಿರಂಜೀವಿ ಮೆಚ್ಚುಗೆ; ಸೋದರಳಿಯನ ದಶಕದ ಜರ್ನಿ ಮೆಲುಕು ಹಾಕಿದ ಮೆಗಾಸ್ಟಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.