ETV Bharat / entertainment

ಕುಡುಬಿ ಜನಾಂಗದ ಕಥೆ ಹೇಳಲಿದೆ 'ಗುಂಮ್ಟಿ' ಸಿನಿಮಾ - Movie On Kudubi Community - MOVIE ON KUDUBI COMMUNITY

ವಿಭಿನ್ನ ಶೀರ್ಷಿಕೆಯ 'ಗುಂಮ್ಟಿ' ಸಿನಿಮಾ ಕುಡುಬಿ ಜನಾಂಗದ ಕಥೆಯನ್ನು ಆಧರಿಸಿದೆ.

'Gumti' Song Release Event
'ಗುಂಮ್ಟಿ' ಸಾಂಗ್​ ರಿಲೀಸ್​ ಈವೆಂಟ್​​ (ETV Bharat)
author img

By ETV Bharat Karnataka Team

Published : Jul 26, 2024, 2:33 PM IST

ತನ್ನ ವಿಭಿನ್ನ ಶೀರ್ಷಿಕೆ ಮತ್ತು ಕಥಾಹಂದರದ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ 'ಗುಂಮ್ಟಿ' ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ 'ಹಾಡುವ ಹಕ್ಕಿ ಹಾಡುತೈತಿ ಮನುಸಾ, ಕಾಯಕ ಮಾಡಿ ಕಾಣೋ ನೀನು ಕನಸಾ' ಎಂಬ ಹಾಡನ್ನು ಇತ್ತೀಚೆಗೆ ಅನಾವರಣಗೊಳಿಸಿದೆ.

'ಗುಂಮ್ಟಿ' ಚಿತ್ರದ ಈ ಗೀತೆಗೆ ಮೆಹಬೂಬ್ ಸಾಬ್ ಧ್ವನಿಯಾಗಿದ್ದು, ಡೊಂಡಿ ಮೋಹನ್ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಕತ್ತಲೆ ಕೋಣೆ ಮತ್ತು ಇನಾಮ್ದಾರ್ ಸಿನಿಮಾಗಳನ್ನು ನಿರ್ದೇಶಿಸಿ, ಕಂಟೆಂಟ್ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶ್​​​ ಶೆಟ್ಟಿ ಆಜ್ರಿ, 'ಗುಂಮ್ಟಿ' ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿರುವುದರ ಜೊತೆಗೆ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಗುಂಮ್ಟಿ ಚಿತ್ರದ ಹಾಡೊಂದು ಬಿಡುಗಡೆ ಆಗಿದ್ದು, ಚಿತ್ರತಂಡ ಈ ಚಿತ್ರದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

'Gumti' Movie team
'ಗುಂಮ್ಟಿ' ಚಿತ್ರತಂಡ (ETV Bharat)

'ಗುಂಮ್ಟಿ' ಕಥಾಹಂದರ: ಮೊದಲಿಗೆ 'ಗುಂಮ್ಟಿ' ಬಗ್ಗೆ ಮಾತಿಗಿಳಿದ ನಿರ್ದೇಶಕ ಕಮ್ ನಾಯಕ ನಟ ಸಂದೇಶ್ ಶೆಟ್ಟಿ ಆಜ್ರಿ, ಇದೊಂದು ಕಲಾತ್ಮಕ ಸಿನಿಮಾ. ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯನ್ನು ತೆರೆಮೇಲೆ ಹೇಳಲು ಹೊರಟಿದ್ದೇವೆ. ಗುಂಮ್ಟಿ ಎಂಬುದು ಕುಡುಬಿ ಸಮುದಾಯದ ಕಲಾಪ್ರಕಾರದ ಸಾಂಪ್ರದಾಯಿಕ ವಾದ್ಯವಾಗಿದ್ದು, ಅದನ್ನೇ ಸಿನಿಮಾದ ಟೈಟಲ್ ಆಗಿ ಇಟ್ಟುಕೊಂಡಿದ್ದೇವೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷದ ಕಥೆ ಈ ಚಿತ್ರದ ಮೂಲಕ ಅನಾವರಣಗೊಳ್ಲಲಿದೆ ಎಂದು ನಿರ್ದೇಶಕರು ಶೀರ್ಷಿಕೆ ಮತ್ತು ಕಥಾಹಂದರದ ಬಗ್ಗೆ ವಿವರಿಸಿದರು.

'Gumti' Movie team
'ಗುಂಮ್ಟಿ' ಕಲಾವಿದರು (ETV Bharat)

ಇದನ್ನೂ ಓದಿ: ಜು.29ಕ್ಕೆ 'ಕೆಡಿ' ಸಿನಿಮಾದಿಂದ ಸಿಗಲಿದೆ ಬಿಗ್​ ಅಪ್ಡೇಟ್​​: ಧ್ರುವ ಅರ್ಜಾ ಅಭಿಮಾನಿಗಳಲ್ಲಿ ಕಾತರ - KD Movie

ಸಂದೇಶ್ ಜೋಡಿಯಾಗಿ ವೈಷ್ಣವಿ ನಾಡಿಗ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮಲ್ಲಿ ಎಂಬ ಹೆಸರಿನ ಕುಡುಬಿ ಸಮುದಾಯದ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಉಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಸಿನಿಮಾದ ಭಾಗವಾಗಿದ್ದಾರೆ.

ಇದನ್ನೂ ಓದಿ: ಲಂಡನ್‌ನಲ್ಲಿ ಅಂಬಾನಿ ಗ್ರ್ಯಾಂಡ್​​​ ಪ್ರೋಗ್ರಾಮ್​: ಸೆಪ್ಟೆಂಬರ್​ವರೆಗೆ ಸೆವೆನ್ ಸ್ಟಾರ್ ಹೋಟೆಲ್​ ರಿಸರ್ವೇಶನ್ - Anant Radhika

ಇನ್ನೂ, ಗುಂಮ್ಟಿ ಸಿನಿಮಾವನ್ನು ಉಡುಪಿ, ಕುಂದಾಪುರ, ಕಾರವಾರ, ಶಿರಸಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 30ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಸದ್ಯ ಯಶಸ್ವಿಯಾಗಿ ತನ್ನೆಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿರುವ ಗುಂಮ್ಟಿ ಸೆನ್ಸಾರ್ ಮುಂದಿದೆ. ತಸ್ಮೈ ಪ್ರೊಡಕ್ಷನ್ಸ್ ಮತ್ತು ಜ್ಯೋತಿ ಪ್ರೊಡಕ್ಷನ್ಸ್ ಬ್ಯಾನರ್​​ ಅಡಿ ವಿಕಾಸ್ ಎಸ್. ಶೆಟ್ಟಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅನೀಶ್ ಡಿಸೋಜಾ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಶಿವರಾಜ ಮೇಹು ಅವರ ಸಂಕಲನವಿದೆ. ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಿ, ಪ್ರೇಕ್ಷಕರ ಎದುರು ಬರಲಿದೆ.

'Gumti' Movie team
ಕುಡುಬಿ ಜನಾಂಗದ ಕಥೆಯೇಳಲಿದೆ 'ಗುಂಮ್ಟಿ' (ETV Bharat)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.