ETV Bharat / entertainment

ಸಾಯಿ ಪಲ್ಲವಿ ಬರ್ತ್​ಡೇಗೆ 'ತಂಡೆಲ್' ಸ್ಪೆಷಲ್​​ ವಿಡಿಯೋ ಅನಾವರಣ​ - HBD Sai Pallavi - HBD SAI PALLAVI

ಸಾಯಿ ಪಲ್ಲವಿ ಜನ್ಮದಿನ ಹಿನ್ನೆಲೆ 'ತಂಡೆಲ್' ತಂಡ ಸ್ಪೆಷಲ್​​ ವಿಡಿಯೋ ಅನಾವರಣ​ಗೊಳಿಸಿದೆ.

Sai Pallavi
ಸಾಯಿ ಪಲ್ಲವಿ (X image)
author img

By ETV Bharat Karnataka Team

Published : May 9, 2024, 11:48 AM IST

ದಕ್ಷಿಣ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯರಾಗಿರುವ ಸಹಜ ಸುಂದರಿ ಸಾಯಿ ಪಲ್ಲವಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 32ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನ್ಯಾಚುರಲ್​​ ಬ್ಯೂಟಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಟಿಯ ಮುಂದಿನ ಬಹುನಿರೀಕ್ಷಿತ ಚಿತ್ರವಾದ 'ತಂಡೆಲ್' ತಂಡ ಸ್ಪೆಷಲ್​​ ವಿಡಿಯೋ ಅನಾವರಣ​ಗೊಳಿಸಿ ನಟಿಗೆ ವಿಶೇಷವಾಗಿ ಶುಭ ಕೋರಿದೆ.

ಚಂದು ಮೊಂಡೇಟಿ ನಿರ್ದೇಶನದ ತಂಡೆಲ್​​ ಚಿತ್ರದಲ್ಲಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರ ರಾಷ್ಟ್ರೀಯತೆಯಂತಹ ಅಂಶಗಳೊಂದಿಗೆ, ಗ್ರಾಮೀಣ ಹಿನ್ನೆಲೆಯಲ್ಲಿ ನಡೆಯುವ ಪ್ರೇಮಕಥೆಯನ್ನೂ ಹೇಳಲಿದೆ. ನಾಗ ಸಾಯಿ ಪ್ರೇಮ್​ಕಹಾನಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ತಂಡೆಲ್​​ ಚಿತ್ರತಂಡ ಶೇರ್ ಮಾಡಿರುವ ಹೃದಯಸ್ಪರ್ಶಿ ವಿಡಿಯೋ, ಬರ್ತ್​ ಡೇ ಗರ್ಲ್​​​​ನ ಹಿಂದಿನ ಪಾತ್ರಗಳನ್ನು, ನಟಿಯಾಗಿ ಅವರ ವೃತ್ತಿಜೀವನ ಪ್ರಯಾಣವನ್ನು ಪ್ರದರ್ಶಿಸಿದೆ. ನಂತರ ನಾಗ ಚೈತನ್ಯ ಜೊತೆಗಿನ ಪ್ರಸ್ತುತ ಚಿತ್ರಕ್ಕೆ ಎಂಟ್ರಿ ಕೊಡುತ್ತದೆ. ತೆರೆಮರೆ ದೃಶ್ಯಾವಳಿಗಳು ಸೆಟ್‌ನಲ್ಲಿನ ಸಾಯಿ ಪಲ್ಲವಿ ಅವರ ನಗು, ಅಳು, ಮೋಜು-ಮಸ್ತಿಯಂತಹ ಕ್ಷಣಗಳನ್ನು ತೋರಿಸುತ್ತದೆ. ವಿಡಿಯೋ ನಟಿಮಣಿಯ ಶೂಟಿಂಗ್​ ವೇಳೆಯ ಫನ್ನಿ ಮಿಸ್ಟೇಕ್ಸ್​​ (bloopers) ಅನ್ನೂ ಸಹ ಒಳಗೊಂಡಿದೆ. ನಟಿ ಅಭಿಮಾನಿಗಳನ್ನು ಅಪ್ಪಿಕೊಳ್ಳುವ ಮತ್ತು ಸೆಟ್‌ನಲ್ಲಿನ ಭಾವನಾತ್ಮಕ ಕ್ಷಣಗಳನ್ನು ಈ ವಿಡಿಯೋ ಒಳಗೊಂಡಿದೆ.

ಸೋಷಿಯಲ್​​ ಮೀಡಿಯಾ ಪ್ಲಾಟ್​ಫಾರ್ಮ್​​ಗಳಲ್ಲಿ ವಿಡಿಯೋ ಹಂಚಿಕೊಂಡ ಚಿತ್ರತಂಡ, ''ಅಭಿನಯ ನಿಮ್ಮದು, ಆಚರಣೆ ನಮ್ಮದು. ನೀವು ನಿರ್ವಹಿಸಿ, ನಾವು ಗೌರವಿಸುತ್ತೇವೆ. ಹ್ಯಾಪಿ ಬರ್ತ್​ ಡೇ 'ಬುಜ್ಜಿ ತಲ್ಲಿ'. ನಿಮ್ಮ ಈ ವಿಶೇಷ ದಿನದಂದು ನಮ್ಮ ತಂಡದ ವಿಶೇಷ ಉಡುಗೊರೆ ಇಲ್ಲಿದೆ'' ಎಂದು ಬರೆದುಕೊಂಡಿದೆ.

ಇದನ್ನೂ ಓದಿ: ಕೇನ್ಸ್​​ ಫೆಸ್ಟಿವಲ್​ನಲ್ಲಿ ಮಿಂಚು ಹರಿಸಲು ಸಜ್ಜಾದ ಐಶ್ವರ್ಯಾ ರೈ, ಅದಿತಿ ರಾವ್ ಹೈದರಿ - Cannes 2024

ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನ ಅಂದರೆ ನಿನ್ನೆ, ನಟಿಯ ವಿಶೇಷ ವಿಡಿಯೋ ಹಂಚಿಕೊಳ್ಳುವುದಾಗಿ ಚಿತ್ರತಂಡ ಘೋಷಿಸಿತ್ತು. ಸಾಯಿ ಪಲ್ಲವಿ ನೀರಿನ ಹಿನ್ನೆಲೆಯಲ್ಲಿರುವ ಕೋಟೆಯ ಬಳಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿತ್ತು. ನಟಿಯ 32ನೇ ಹುಟ್ಟುಹಬ್ಬದಂದು ಚಿತ್ರದಿಂದ ಅವರ ಪಾತ್ರ 'ಸತ್ಯ'ವನ್ನು ಒಳಗೊಂಡ ವಿಶೇಷ ವಿಡಿಯೋವನ್ನು ಬಿಡುಗಡೆ ಮಾಡಲು ಚಿತ್ರತಂಡದಿಂದ ತಯಾರಿ ನಡೆಯುತ್ತಿದೆ ಎಂದು ಪ್ರೀ ಬರ್ತ್​ಡೇ ಪೋಸ್ಟ್ ತಿಳಿಸಿತ್ತು. ಹೇಳಿದಂತೆ ಚಿತ್ರ ತಯಾರಕರು ಇಂದು ಬೆಳಗ್ಗೆ ವಿಡಿಯೋ ಅನಾವರಣಗೊಳಿಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಮನೆ ಹೊರಗೆ ಗುಂಡಿನ ದಾಳಿ ಪ್ರಕರಣ: ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ - Salman House Firing Case

ತಂಡೆಲ್ ಚಿತ್ರದ ಬಗ್ಗೆ ಗಮನಿಸುವುದಾದರೆ, ಚಂದೂ ಮೊಂಡೇಟಿ ನಿರ್ದೇಶನದ ಈ ಚಿತ್ರದಲ್ಲಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಪ್ರೇಮಿಗಳಾಗಿ ಅಭಿನಯಿಸಿದ್ದಾರೆ. ಚಿತ್ರದ ಹಿಂದಿನ ಪೋಸ್ಟರ್‌ನಲ್ಲಿ ನಾಗ ಚೈತನ್ಯ ಅವರನ್ನು ಮೀನುಗಾರನ ಪಾತ್ರದಲ್ಲಿ ತೋರಿಸಲಾಗಿದೆ. ನಟ ಈ ಚಿತ್ರಕ್ಕಾಗಿ ತಮ್ಮ ನೋಟದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.