ಹೈದರಾಬಾದ್: ಭಾನುವಾರ (ಫೆ.25ರಂದು) ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ 1994ರಲ್ಲಿ ತೆರೆ ಕಂಡಿದ್ದ ಚಿತ್ರ ಕಭಿ ಹಾ ಕಭಿ ನಾ 30ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಚಿತ್ರವನ್ನು ನಿರ್ಮಿಸಿದ್ದಕ್ಕಾಗಿ ನಿರ್ದೇಶಕ ಕುಂದನ್ ಶಾ ಸೇರಿದಂತೆ ಇಡೀ ತಾರಾ ಬಳಗ ಮತ್ತು ಸಿಬ್ಬಂದಿಗೆ ಶಾರುಖ್ ಖಾನ್ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಧನ್ಯವಾದ ತಿಳಿಸಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಕೆಲಸ ಮಾಡಿದ 'ಸಿಹಿ, ಸಂತೋಷದ ಚಿತ್ರ' ಎಂದು ಅವರು ಬಣ್ಣಿಸಿದ್ದಾರೆ.
ಶಾರುಖ್ ಖಾನ್ ಅವರ ನಿರ್ಮಾಣ ಕಂಪನಿ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬಿಡುಗಡೆ ಮಾಡಿದ ಪುಟ್ಟ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಮರು ಪೋಸ್ಟ್ ಮಾಡಿದ್ದಾರೆ. "30 ವರ್ಷಗಳು ಕಳೆದಿವೆ. ಆದರೂ 'ಕಭಿ ಹಾನ್ ಕಭಿ ನಾ' ಎವರ್ಗ್ರೀನ್ ಚಿತ್ರ, ಎಲ್ಲರ ಅಚ್ಚುಮೆಚ್ಚಿನ ಸಿನಿಮಾ ಆಗಿದ್ದು, ಹೆಚ್ಚು ಜನರು ಇಷ್ಟಪಟ್ಟಿದ್ದಾರೆ ಮತ್ತು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ನಾವು ಯಾವುದೇ ಅವಧಿಯಲ್ಲೂ ಈ ಚಲನಚಿತ್ರವನ್ನು ಮತ್ತೆ ಮತ್ತೆ ವೀಕ್ಷಿಸಲು ನನಗೆ ಯಾವಾಗಲೂ ಹೆಮ್ಮೆ ಅನಿಸುತ್ತದೆ" ಎಂದು ಅವರು ತಿಳಿಸಿದ್ದಾರೆ.
"ಇದು ನಾನು ಮಾಡಿದ ಅತ್ಯಂತ ಸಿಹಿಯಾದ ಮತ್ತು ಸಂತೋಷದ ಚಿತ್ರ ಎಂದು ನನಗೆ ನಿಜವಾಗಿಯೂ ಅನಿಸುತ್ತದೆ. ನಾನು ಅದನ್ನು ನೋಡುತ್ತೇನೆ ಮತ್ತು ಚಿತ್ರದಲ್ಲಿ ಪ್ರತಿಯೊಬ್ಬರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ, ವಿಶೇಷವಾಗಿ ನನ್ನ ಸ್ನೇಹಿತ ಮತ್ತು ಶಿಕ್ಷಕ ಕುಂದನ್ ಶಾ. ಇಡೀ ಚಿತ್ರತಂಡಕ್ಕೆ ಮತ್ತು ಸಿಬ್ಬಂದಿಗೆ ಧನ್ಯವಾದಗಳು ಮತ್ತು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ" ಎಂದು ಶಾರುಖ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರೊಮ್ಯಾಂಟಿಕ್ ಕಾಮಿಡಿ ಸಿನಿಮಾ: ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಕಭಿ ಹಾ ಕಭಿ ನಾ'ನಲ್ಲಿ ಶಾರುಖ್, ದೀಪಕ್ ತಿಜೋರಿ ಮತ್ತು ನಾಸಿರುದ್ದೀನ್ ಶಾ ನಟಿಸಿದ್ದಾರೆ. ಈ ಸಿನಿಮಾದ ಮೂಲಕ ಸುಚಿತ್ರಾ ಕೃಷ್ಣಮೂರ್ತಿ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಪ್ರಣಯದ ತ್ರಿಕೋನ ಚಿತ್ರಣ ಮತ್ತು ಅದರ ಆಕರ್ಷಕ ಹಾಡುಗಳಿಂದಾಗಿ ಕಭಿ ಹಾ ಕಭಿ ನಾ ಚಿತ್ರವು ಜನರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.
- " class="align-text-top noRightClick twitterSection" data="">
ಕುಂದನ್ ಶಾ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಜತಿನ್- ಲಲಿತ್ ಸಂಗೀತ ಸಂಯೋಜಿಸಿದ್ದಾರೆ. ಶಾರುಖ್ ಹೊರತುಪಡಿಸಿ, ಚಿತ್ರದಲ್ಲಿ ಜೂಹಿ ಚಾವ್ಲಾ, ಅಶುತೋಷ್ ಗೋವಾರಿಕರ್, ಸತೀಶ್ ಶಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಸುನಿಲ್ ಎಂಬ ಸುಂದರ ಯುವಕನು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುತ್ತಾನೆ. ಅವನಿಗೆ ಹಲವಾರು ಅಡೆತಡೆಗಳು ಎದುರಾಗುತ್ತವೆ. ಆದ್ರೆ, ಅವೆಲ್ಲವುಗಳನ್ನು ಬದಗಿಟ್ಟು ಆ ಯುವಕ ತಾನು ಪ್ರೀತಿಸುವ ಹುಡುಗಿಯ ಹೃದಯವನ್ನು ಕದಿಯಲು ಪ್ರಯತ್ನಿಸುತ್ತಾನೆ.
2023ರಲ್ಲಿ ಕಿಂಗ್ ಖಾನ್ಗೆ ಸಿದ್ಧಾರ್ಥ್ ಆನಂದ್ ಅವರ ಪಠಾಣ್, ಅಟ್ಲೀ ಅವರ ಜವಾನ್ ಮತ್ತು ರಾಜ್‌ಕುಮಾರ್ ಹಿರಾನಿಯ ಡಂಕಿ ಚಿತ್ರ ಯಶಸ್ಸು ತಂದುಕೊಟ್ಟಿವೆ. ಶಾರುಖ್ ಖಾನ್ ತಮ್ಮ ಮುಂದಿನ ಚಿತ್ರವನ್ನು ಇನ್ನೂ ಘೋಷಿಸಬೇಕಿದೆ.
ಇದನ್ನೂ ಓದಿ: ಕ್ರೀಡಾಂಗಣದಲ್ಲಿ ಎಸ್ಆರ್ಕೆಯ 'ಕಲ್ ಹೋ ನಾ ಹೋ' ಟೈಟಲ್ ಟ್ರ್ಯಾಕ್ ನುಡಿಸಿದ ವಿದೇಶಿಗ: ವಿಡಿಯೋ