ಹೈದರಾಬಾದ್: ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ದೇವರ' ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಜೂನಿಯರ್ ಎನ್‌ಟಿಆರ್ ಮುಖ್ಯಭೂಮಿಕೆಯ ಈ ಚಿತ್ರ ಬಹುತೇಕ ಮೆಚ್ಚುಗೆಯನ್ನೇ ಸ್ವೀಕರಿಸಿ, ಬಾಕ್ಸ್ ಆಫೀಸ್ನಲ್ಲೂ ಕಮಾಲ್ ಮಾಡಿದೆ. ಸಿನಿಪ್ರಿಯರ ಸಂಭ್ರಮ ಮುಗಿಲು ಮುಟ್ಟಿದೆ. ಆದ್ರೀಗ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಹೌದು, ಆಘಾತಕಾರಿ ಘಟನೆ ನಡೆದಿದೆ. ಜೂನಿಯರ್ ಎನ್‌ಟಿಆರ್ ಅವರ ಅಭಿಮಾನಿಯೊಬ್ಬರು ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಅಪ್ಸರಾ ಥಿಯೇಟರ್‌ನಲ್ಲಿ ದೇವರ ವಿಶೇಷ ಪ್ರದರ್ಶನದ ವೇಳೆ ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ, 35ರ ಹರೆಯದ ಮಸ್ತಾನ್ ಎಂಬ ಅಭಿಮಾನಿ ಚಿತ್ರದ ಪ್ರದರ್ಶನದ ಸಂದರ್ಭ ಬಹಳ ಉತ್ಸಾಹದಿಂದ ಚಪ್ಪಾಳೆ ತಟ್ಟುತ್ತಿದ್ದರು. ಅವರ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಿತು. ಆ ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಅದಾಗ್ಯೂ ಅವರು ಬದುಕಲು ಸಾಧ್ಯವಾಗಲಿಲ್ಲ. ಆಸ್ಪತ್ರೆಯಲ್ಲಿ ಮಸ್ತಾನ್ ಅವರ ಆಘಾತಕಾರಿ ಸಾವನ್ನು ವೈದ್ಯರು ದೃಢಪಡಿಸಿದರು.
ಕುಟುಂಬಕ್ಕೆ ಆಘಾತ ತಂದ ಸಾವು: ಮಸ್ತಾನ್ ಸಾವು ಅವರ ಸ್ನೇಹಿತರು ಮತ್ತು ಕುಟುಂಬಕ್ಕೆ ಆಘಾತ ಸೃಷ್ಟಿಸಿದೆ. ಮಸ್ತಾನ್ ಸಾವನ್ನು ನಂಬಲಾಗದ ಸ್ಥಿತಿಯಲ್ಲಿ ಹಲವರಿದ್ದಾರೆ. ತಮ್ಮ ಮೆಚ್ಚಿನ ನಟನ ಚಿತ್ರವನ್ನು ಆನಂದಿಸುತ್ತಿರುವಾಗ ಇಂಥ ಘಟನೆ ಸಂಭವಿಸುತ್ತದೆ ಎಂದು ಯಾರೂ ಊಹಿಸಿರಕ್ಕಿಲ್ಲ. ವರದಿಗಳ ಪ್ರಕಾರ, ಮಸ್ತಾನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
దేవర సినిమా చూస్తూ ఒక్కసారిగా కుప్పకూలి అభిమాని మృతి
— IMǍMẞÝEÐ✨ (@IMAMSYED0) September 27, 2024
కడప - అప్సర థియేటర్లో సినిమా చూస్తూ కేకలు వేస్తూ ఒక్కసారిగా కుప్పకూలిన మస్తాన్వలీ అనే అభిమాని.
వెంటనే ప్రైవేట్ ఆస్పత్రికి తరలించగా అప్పటికే మృతి.#DEVARA #DevaraStorm #DevaraCelebrations #NTR𓃵 #Ntrfans pic.twitter.com/UmlcRilt3Y
ಕೊರಟಾಲ ಶಿವ ಆ್ಯಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸೌತ್ ಸೂಪರ್ ಸ್ಟಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವರ ಮೂಲಕ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ತೆಲುಗು ಚಿತ್ರರಂಗ ಪ್ರವೇಶಿಸಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ.
ಇದನ್ನೂ ಓದಿ: 172 ಕೋಟಿ ಸಂಪಾದಿಸಿದ 'ದೇವರ': ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ನಾಲ್ಕನೇ ಸಿನಿಮಾ - Devara Collection
ಇನ್ನು ದೇವರ ಸಿನಿಮಾ ತನ್ನ ಮೊದಲ ದಿನ ಬರೋಬ್ಬರಿ 172 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈವರೆಗಿನ ಕಲೆಕ್ಷನ್ ವಿಷಯ ಗಮನಿಸೋದಾದ್ರೆ, ತೆರೆಕಂಡ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾಗಳ ಪೈಕಿ ದೇವರ ನಾಲ್ಕನೇ ಸ್ಥಾನದಲ್ಲಿದೆ.
- ಆರ್ಆರ್ಆರ್ - 223.5 ಕೋಟಿ ರೂಪಾಯಿ.
- ಬಾಹುಬಲಿ 2 - 214.5 ಕೋಟಿ ರೂಪಾಯಿ.
- ಕಲ್ಕಿ 2898 ಎಡಿ – 182.6 ಕೋಟಿ ರೂಪಾಯಿ.
- ದೇವರ - 172 ಕೋಟಿ ರೂಪಾಯಿ.
- ಸಲಾರ್ - 165.3 ಕೋಟಿ ರೂಪಾಯಿ.
- ಕೆಜಿಎಫ್ 2 - 162.9 ಕೋಟಿ ರೂಪಾಯಿ.
- ಲಿಯೋ - 142.8 ಕೋಟಿ ರೂಪಾಯಿ.
- ಆದಿಪುರುಷ್ - 136.8 ಕೋಟಿ ರೂಪಾಯಿ.
- ಜವಾನ್ - 129.6 ಕೋಟಿ ರೂಪಾಯಿ.
- ಸಾಹೋ - 125.6 ಕೋಟಿ ರೂಪಾಯಿ.
- ಅನಿಮಲ್ - 115.9 ಕೋಟಿ ರೂಪಾಯಿ.