ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 10' ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರುವ ಈ ಶೋ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದು, ಫಿನಾಲೆ ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ವಾರಾಂತ್ಯ ಪ್ರಸಾರವಾಗುವ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ಸಪರೇಟ್ ಫ್ಯಾನ್ ಬೇಸ್ ಇದ್ದು, ಇಂದಿನ ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕುತೂಹಲಭರಿತರಾಗಿದ್ದಾರೆ.
-
ಮಾಜಿ ಸ್ಪರ್ಧಿಗಳ ನಡೆಗೆ ಕಿಚ್ಚ ಗರಂ ಆಗಿದ್ದು ಯಾಕೆ?
— Colors Kannada (@ColorsKannada) January 20, 2024 " class="align-text-top noRightClick twitterSection" data="
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/FgeJ0ket1D
">ಮಾಜಿ ಸ್ಪರ್ಧಿಗಳ ನಡೆಗೆ ಕಿಚ್ಚ ಗರಂ ಆಗಿದ್ದು ಯಾಕೆ?
— Colors Kannada (@ColorsKannada) January 20, 2024
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/FgeJ0ket1Dಮಾಜಿ ಸ್ಪರ್ಧಿಗಳ ನಡೆಗೆ ಕಿಚ್ಚ ಗರಂ ಆಗಿದ್ದು ಯಾಕೆ?
— Colors Kannada (@ColorsKannada) January 20, 2024
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/FgeJ0ket1D
ಬಿಗ್ ಬಾಸ್ ಪ್ರೋಮೋ: ''ಮಾಜಿ ಸ್ಪರ್ಧಿಗಳ ನಡೆಗೆ ಕಿಚ್ಚ ಗರಂ ಆಗಿದ್ದು ಯಾಕೆ?'' ಶೀರ್ಷಿಕೆಯಡಿ ಬಿಗ್ ಬಾಸ್ ಪ್ರೋಮೋ ಅನಾವರಣಗೊಂಡಿದೆ. ಈ ವಿಡಿಯೋದಲ್ಲಿ ಕಿಚ್ಚ ಸುದೀಪ್ ಗರಂ ಆಗಿರೋದನ್ನು ಕಾಣಬಹುದು. ಮುಂದೇನಾಗಬಹುದು? ಎಂಬ ಕುತೂಹಲ ಪ್ರೋಮೋ ವೀಕ್ಷಿಸಿದ ನೆಟ್ಟಿಗರದ್ದು.
ಮಂಗಳವಾರ ಬಿಗ್ ಬಾಸ್ ಮನೆಗೆ ಮಾಜಿ ಸ್ಪರ್ಧಿಗಳು ಎಂಟ್ರಿ ಕೊಟ್ಟು ಹೋಗಿದ್ದರು. ಅಂತಿಮ ಘಟ್ಟ ತಲುಪಿದ ಹಿನ್ನೆಲೆ, ಕೆಲ ದಿನಗಳಿಂದ 'ಬಿಗ್ ಬಾಸ್' ಮನೆ ಮಂದಿಗೆ ಸರ್ಪ್ರೈಸ್ ಕೊಡುತ್ತಲೇ ಇದ್ದಾರೆ. ಸ್ಪರ್ಧಿಗಳ ಕುಟುಂಬಸ್ಥರು, ಜನಪ್ರಿಯ ವ್ಯಕ್ತಿಗಳು ಬಂದು ಹೋಗಿದ್ದಾರೆ. ಅದರಂತೆ ಈ ಸೀಸನ್ನಲ್ಲಿ ಭಾಗವಹಿಸಿ ಎಲಿಮಿನೇಟ್ ಆದವ್ರೂ ಕೂಡ ಮಂಗಳವಾರ ಆಗಮಿಸಿದ್ದರು. ಮನೆಯಲ್ಲಿ ಉಳಿದುಕೊಂಡಿರೋ ಸ್ಪರ್ಧಿಗಳ ಆತ್ಮವಿಶ್ವಾಸ ತುಂಬೋ ನಿಟ್ಟಿನಲ್ಲಿ ಎಲಿಮಿನೇಟೆಡ್ ಕಂಟಸ್ಟೆಂಟ್ಗಳನ್ನು ಮನೆಯೊಳಗೆ ಕಳುಹಿಸಲಾಗಿತ್ತು. ಆದ್ರೆ ಆಗಿದ್ದೇ ಬೇರೆ.
ತನಿಶಾ, ರಕ್ಷಕ್, ಪ್ರತಾಪ್ ವರ್ತನೆ ಮನೆಯಲ್ಲಿ ಉಳಿದುಕೊಂಡಿರೋ ಕೆಲ ಸ್ಪರ್ಧಿಗಳಿಗೆ ಘಾಸಿ ಮಾಡಿದೆ ಎಂಬ ಆರೋಪವಿದೆ. ತನಿಶಾ ಅವರಂತೂ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಪ್ರೇಕ್ಷಕರು ಮಾತ್ರವಲ್ಲ, ಬಿಗ್ ಬಾಸ್ ತಂಡಕ್ಕೂ, ನಿರೂಪಕ ಸುದೀಪ್ ಅವರಿಗೂ ಅಸಮಾಧಾನ ಆದಂತೆ ತೋರುತ್ತಿದೆ. ಅದರ ಸುಳಿವು ಇಂದು ಅನಾವರಣಗೊಂಡಿರುವ ಪ್ರೋಮೋದಲ್ಲಿ ಕಂಡುಬಂದಿದೆ.
-
ಮಾಜಿ ಸ್ಪರ್ಧಿಗಳ ಭೇಟಿಯ ನಂತರ…
— Colors Kannada (@ColorsKannada) January 20, 2024 " class="align-text-top noRightClick twitterSection" data="
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/12yvZGgaY1
">ಮಾಜಿ ಸ್ಪರ್ಧಿಗಳ ಭೇಟಿಯ ನಂತರ…
— Colors Kannada (@ColorsKannada) January 20, 2024
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/12yvZGgaY1ಮಾಜಿ ಸ್ಪರ್ಧಿಗಳ ಭೇಟಿಯ ನಂತರ…
— Colors Kannada (@ColorsKannada) January 20, 2024
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/12yvZGgaY1
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಸೃಷ್ಟಿಕರ್ತ ಅರೆಸ್ಟ್: ದೆಹಲಿ ಪೊಲೀಸರು
ಕಿಚ್ಚ ಸುದೀಪ್ ಗರಂ ಆಗಿರೋದನ್ನು ಪ್ರೋಮೋದಲ್ಲಿ ಕಾಣಬಹುದು. 'ಕಾಗೆ ಕ... ಮಾಡ್ಕೊಂಡು, ಸಿಂಪಥಿಯಿಂದ ಗೆದ್ದುಕೊಂಡು ಬಂದಿದೆ' ಎಂದು ಇಶಾನಿ ಹೇಳಿದ್ದ ಡೈಲಾಗ್ ಹೇಳಿದ ಕಿಚ್ಚ, ವಾವ್ ಇಶಾನಿ ಎಂದು ಕೈ ತೋರಿಸಿದ್ದಾರೆ. 'ಯಾವ ಆ್ಯಂಗಲ್ನಲ್ಲಿ ನೀವು ಸೋತು ಹೊರಹೋಗಿ, ಕಲ್ತು ಒಳಗೆ ಬಂದಿದ್ದೀರಿ ಅನಿಸುತ್ತೆ ಎಂದು ಹೇಳಿ' ಅಂತಾ ಸುದೀಪ್ ಪ್ರಶ್ನಿಸಿದ್ದಾರೆ. 'ಸ್ನೇಹಿತ್ ಏನಂದ್ರು' ಅಂತಾ ನಮ್ರತಾರಲ್ಲಿ ಸುದೀಪ್ ಪ್ರಶ್ನಿಸಿದ್ದಾರೆ. 'ಹೊರಗೆ ನಿಮಗಾಗಿ ಹೋರಾಡುತ್ತಿರುವೆ' ಎಂದು ಸ್ನೇಹಿತ್ ತಿಳಿಸಿದ್ರು ಅಂತಾ ನಮ್ರತಾ ಉತ್ತರಿಸಿದ್ದಾರೆ. 'ಏನ್ ನಡೆದಿದೆ ಹೊರಗಡೆ?' ಎಂದು ಸುದೀಪ್ ಮತ್ತೆ ಕೈ ತೋರಿಸಿದ್ದಾರೆ. ಇನ್ನೊಬ್ರು ಬರ್ತಾರೆ, ರಕ್ಷಕ್ ಅಲ್ವಾ ಆ ಸ್ಪರ್ಧಿ ಹೆಸ್ರು? ಅಂತಾ ತಮ್ಮದೇ ಸ್ಟೈಲ್ನಲ್ಲಿ ಕಿಚ್ಚ ಟಾಂಟ್ ಇಟ್ಟಿದ್ದಾರೆ. ಚೆನ್ನಾಗಿ ಇಟ್ಟಿರ್ಲಿ ಆ ದೇವ್ರು ನಿಮ್ಮನ್ನ ಎಂದು ಹೇಳಿರೋದನ್ನು ಪ್ರೋಮೋದಲ್ಲಿ ಕಾಣಬಹುದು.
ಇದನ್ನೂ ಓದಿ: ಶ್ರೀ ಅಭಿನಯದ 'ಜಸ್ಟ್ ಪಾಸ್' ಸಿನಿಮಾಗೆ ಶಾಸಕ ಪ್ರದೀಪ್ ಈಶ್ವರ್ ಸಾಥ್