ETV Bharat / entertainment

'ನಾಲ್ಗೆ ಮೇಲೆ ನಿಗಾ ಇರ್ಲಿ, ನೀವೇನು ಮನುಷ್ಯರೋ ಪ್ರಾಣಿಗಳೋ': ರಜತ್, ಧನರಾಜ್​​ಗೆ ಕಿಚ್ಚನ ಕ್ಲಾಸ್​​ - BIGG BOSS KANNADA 11

ಈ ವಾರ ರಜತ್, ಧನರಾಜ್​​ ಗಲಾಟೆ ಸದ್ದು ಮಾಡಿದ್ದು. ಇಂದಿನ ಸಂಚಿಕೆಯಲ್ಲಿ ಈ ಇಬ್ಬರಿಗೂ ಕಿಚ್ಚ ಬಿಸಿ ಮುಟ್ಟಿಸಿದ್ದಾರೆ.

Sudeep class for Rajat and Dhanaraj
ರಜತ್, ಧನರಾಜ್​​ಗೆ ಕಿಚ್ಚನ ಕ್ಲಾಸ್​​ (Photo: ANI, Bigg Boss Team)
author img

By ETV Bharat Entertainment Team

Published : 3 hours ago

ಕನ್ನಡದ ಬಿಗ್​ ಬಾಸ್​ನಲ್ಲಿ ವೀಕೆಂಡ್​​ ಎಪಿಸೋಡ್​ಗಳು ಬಹಳಾನೇ ಫೇಮಸ್​. ಅದರಲ್ಲೂ ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಗೆ ಸಪರೇಟ್​ ಫ್ಯಾನ್​​ ಬೇಸ್​ ಇದೆ. ಅಭಿನಯ ಚಕ್ರವರ್ತಿಯ ವಾಕ್ಚಾತುರ್ಯ ಅಂಥದ್ದು. ವಾರವಿಡೀ ಸ್ಪರ್ಧಿಗಳು ಮಾಡಿರುವ ಸರಿತಪ್ಪುಗಳ ಬಗ್ಗೆ ಚರ್ಚೆ ನಡೆಸಿ, ಅವರನ್ನು ತಿದ್ದಿ ತೀಡುವ ಕೆಲಸ ಮಾಡುತ್ತಾರೆ. ನಿರೀಕ್ಷಿಸಿದಂತೆ ಇಂದು ರಜತ್​ ಕಿಶನ್​ ಮತ್ತು ಧನರಾಜ್​​ ಆಚಾರ್​ ಅವರಿಗೆ ಕಿಚ್ಚನ ಕ್ಲಾಸ್​ ಸಿಕ್ಕಿದೆ. ಅದರಲ್ಲೂ ವೈಲ್ಡ್​​​ ಕಾರ್ಡ್ ಸ್ಪರ್ಧಿಯ ಆರ್ಭಟಕ್ಕೆ ಸುದೀಪ್​​​ ಫುಲ್​ ಸ್ಟಾಪ್​ ಇಟ್ಟಿದ್ದಾರೆ.

''ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು!'' ವಾರದ ಕಥೆ ಕಿಚ್ಚನ ಜೊತೆ, ಇಂದು ರಾತ್ರಿ 9ಕ್ಕೆ ಎಂಬ ಕ್ಯಾಪ್ಷನ್​ನೊಂದಿಗೆ ಅನಾವರಣಗೊಂಡಿರುವ ಪ್ರೋಮೋ ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕಾತರ ಹೆಚ್ಚಿಸಿದೆ. ಬಿಗ್​ ಬಾಸ್​ ಮನೆಯಲ್ಲಿ ಮಾಡಿದ ತಪ್ಪಿಗೆ ಸ್ಪರ್ಧಿಗಳು ಶಿಕ್ಷೆ ಅನುಭವಿಸುವಂತಾಗಿದೆ.

ಪ್ರೋಮೋದಲ್ಲಿ, 'ಧನರಾಜ್​, ರಜತ್ ಅವ್ರೇ ಏನು ಹುಲಿ ಸಿಂಹ ಆಗೋಕ್​​ ಹೋಗಿದ್ದೀರಾ? ಅಥವಾ ಮನುಷ್ಯರಾಗಿರೋಕ್​ ಹೋಗಿದ್ದೀರೋ?' ಎಂದು ಸುದೀಪ್​ ಪ್ರಶ್ನಿಸಿದ್ದಾರೆ. ನಂತರ, ನಿಮ್ಗೆ ಅವಶ್ಯಕತೆ ಇತ್ತಾ ಅವರ ಕೆನ್ನೆ ಮುಟ್ಟೋದು ಎಂದು ಧನರಾಜ್​ ಬಳಿ ಪ್ರಶ್ನಿಸಿದ್ದಾರೆ. ನಂತರ, ನಾಲ್ಗೆ ಮೇಲೆ ನಿಗಾ ಇರ್ಲಿ ರಜತ್ ಅವ್ರೆ ಎಂದು ತಿಳಿಸಿದ್ದು, ಸರ್ ನಾನೇನು ಕೆಟ್ಟ ಮಾತು ಬಳಸಿಲ್ಲ ಎಂದು ರಜತ್​ ತಿಳಿಸಿದ್ದಾರೆ. ನಿಮ್ಮ ಪ್ರಕಾರ ಕೆಟ್ಟ ಮಾತುಗಳೇನು ಎಂದು ಹೇಳ್ಬಿಡಿ, ನಾವು ಒಂದು ಬುಕ್​ ಮಾಡಿ ಇಡ್ತೀವಿ​​ ಎಂದು ಸುದೀಪ್​ ತಿಳಿಸಿದ್ದಾರೆ. ನಿಮಗೆ ಟೈಮ್​ ಕೊಡ್ತೀವಿ ಫೈಟ್​ ಮಾಡೋಕೆ ಫಿಸಿಕಲಿ ಎಂದು ಕಿಚ್ಚ ಪ್ರಶ್ನಿಸಿದ್ದಾರೆ. ಇದಕ್ಕೆ ಒಂದು ಪನೀಷ್​ಮೆಂಟ್​ ಇದ್ದೇ ಇರುತ್ತೆ ಎಂದು ಒಂದು ಸಣ್ಣ ಜೈಲನ್ನು ಮನೆಯೊಳಗೆ ತರಿಸಿದ್ದಾರೆ. ರಜತ್​ ಅವರನ್ನು ಒಳಗೆ ಹಾಕಿದ್ದು, ಅವರೆಲ್ಲೇ ಹೋಗಬೇಕೆಂದರೂ ಎಳೆದು ಕರೆದುಕೊಂಡು ಹೋಗಬೇಕೆಂದು ಧನರಾಜ್​ರಲ್ಲಿ ಸೂಚಿಸಿದ್ದಾರೆ.

ಇದನ್ನೂ ಓದಿ: ವಿಡಿಯೋ: ಜೈಲಿನಿಂದ ಹೊರಬಂದ ಅಲ್ಲು ಅರ್ಜುನ್​​ ಭೇಟಿಯಾದ ಉಪೇಂದ್ರ; ಐಕಾನ್​ ಸ್ಟಾರ್​ ಬಿಗಿದಪ್ಪಿದ​​ ರಿಯಲ್​ ಸ್ಟಾರ್​​​

ಕಳೆದ ಸಂಚಿಕೆಯಲ್ಲಿ ಉತ್ತಮ ಮತ್ತು ಕಳಪೆ ಕೊಡುವ ಸಂದರ್ಭ, ರಜತ್​ ಕಿಶನ್​ ಮತ್ತು ಧನರಾಜ್​ ಆಚಾರ್​ ನಡುವೆ ಗಲಾಟೆ ನಡೆದೇ ಹೋಯ್ತು. ಇದಕ್ಕೂ ಮುನ್ನ, ವಾದ ವಿವಾದ ನಡೆದಿತ್ತು. ಸಂಭಾವ್ಯ ಅನಾಹುತವನ್ನು ಗೌತಮಿ ಜಾಧವ್​ ಮತ್ತು ಉಗ್ರಂ ಮಂಜು ತಡೆದಿದ್ದರು. ಆದ್ರೆ ಕಳೆದ ಸಂಚಿಕೆಯಲ್ಲಿ ಧನರಾಜ್​ ಅವರು ಕಳಪೆ ಕೊಟ್ಟ ಕೂಡಲೇ ರಜತ್​ ಮೇಲೆ ಫುಲ್​ ರಾಂಗ್​ ಆದ್ರು. ಮಾತಿಗೆ ಮಾತು ಬೆಳೆದು ರಜತ್​ ಕುಳಿತಲ್ಲಿಂದ ಎದ್ದು ಧನರಾಜ್​ ಮೇಲೆ ಎಗರಿದ್ದಾರೆ. ಈ ಪರಿಸ್ಥಿತಿ ನಿಭಾಯಿಸಲು ಇಡೀ ಮನೆ ಹರಸಾಹಸಪಟ್ಟಿದೆ.

ಇದನ್ನೂ ಓದಿ: Watch- 'ನಾನು ಯಾವುದೇ ಕಾಮೆಂಟ್​ ಮಾಡುವುದಿಲ್ಲ, ಏಕೆಂದರೆ..': ನಟ ಅಲ್ಲು ಅರ್ಜುನ್​

ಇನ್ನು, ಗೌತಮಿ ಕ್ಯಾಪ್ಟನ್​ ಆಗಿದ್ದರು. ಆದ್ರೆ ಮಂಜು ಹೈಲೆಟ್​ ಆಗುತ್ತಿದ್ರು. ಈ ಬಗ್ಗೆ ಗೌತಮಿ ಮಂಜು ಅವರಲ್ಲಿ ಚರ್ಚೆ ನಡೆಸಿದ್ದರು. ನಾನು ಕ್ಯಾಪ್ಟನ್​ ಆಗಿದ್ದಾಗ ನನ್ನನ್ನು ನೀವು ಲೀಡ್​ ಮಾಡ್ಬೇಡಿ, ಇನ್ಮುಂದೆ ಗೆಳೆಯ ಗೆಳತಿ ಅನ್ನೋದು ಇರೋದಿಲ್ಲ. ಆಟ ಮುಖ್ಯ ಎಂಬುದಾಗಿ ತಿಳಿಸಿದ್ದರು. ಈ ಬಗ್ಗೆ ಕೂಡಾ ಕಿಚ್ಚನ ಪಂಚಾಯ್ತಿಯಲ್ಲಿ ಚರ್ಚೆ ನಡೆಯಲಿದೆ. ಇದರ ಸುಳಿವನ್ನು 'ದಿಕ್ಕು ತಪ್ಪಿರೋರಿಗೆ ಕಿಚ್ಚ ಯಾವ ದಾರಿ ತೋರಿಸ್ತಾರೆ?' ಎಂಬ ಕ್ಯಾಪ್ಷನ್​ನೊಂದಿಗೆ ಅನಾವರಣಗೊಂಡಿರುವ ಪ್ರೋಮೋ ಬಿಟ್ಟುಕೊಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.