ETV Bharat / entertainment

ರಾಜಮೌಳಿ-ಮಹೇಶ್​ ಬಾಬು ಸಿನಿಮಾ​ ಸುತ್ತ ಅಂತೆಕಂತೆಗಳ ಸಂತೆ: ಏನದು? ಪ್ರೊಡಕ್ಷನ್ ಹೌಸ್ ಹೇಳಿದ್ದಿಷ್ಟು - Mahesh Babu Rajamouli Film

'ಎಸ್‌ಎಸ್‌ಎಂಬಿ 29' ಚಿತ್ರದ ಸುತ್ತ ಹರಡಿರುವ ವದಂತಿಗಳಿಗೆ ನಿರ್ಮಾಣ ಸಂಸ್ಥೆ ಫುಲ್​​ ಸ್ಟಾಪ್​ ಇಟ್ಟಿದೆ.

Mahesh Babu
ಮಹೇಶ್ ಬಾಬು (IANS)
author img

By ETV Bharat Karnataka Team

Published : May 17, 2024, 12:12 PM IST

ಸೌತ್​ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಸ್ಟಾರ್ ಡೈರೆಕ್ಟರ್ ಎಸ್​.ಎಸ್.ರಾಜಮೌಳಿ ಕಾಂಬಿನೇಶನ್​ನ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಎಸ್‌ಎಸ್‌ಎಂಬಿ 29'. ಇತ್ತೀಚೆಗೆ ಚಿತ್ರದ ಸುತ್ತ ಸಾಕಷ್ಟು ವದಂತಿಗಳು ಹರಡಿದ್ದವು. ಚಿತ್ರಕ್ಕಾಗಿ ಕಾಸ್ಟಿಂಗ್ ಡೈರೆಕ್ಟರ್ ವಿರೇನ್ ಸ್ವಾಮಿ ಅವರನ್ನು ಸಂಪರ್ಕಿಸಲಾಗಿದೆ ಎಂದು ವರದಿಗಳಾಗಿತ್ತು. ಹಾಗಾಗಿ ಸಿನಿಮಾ ಸುತ್ತಲಿನ ಅಂತೆಕಂತೆಗಳು ಜೋರಾಗಿವೆ. ಆದ್ರೀಗ ಚಿತ್ರದ ಹಿಂದಿರುವ 'ದುರ್ಗಾ ಆರ್ಟ್ಸ್‌' ಇಂಥ ವದಂತಿಗಳಿಗೆ ಫುಲ್​ಸ್ಟಾಪ್​ ಇಟ್ಟಿದೆ. ವಿರೇನ್ ಸ್ವಾಮಿ 'ಎಸ್‌ಎಸ್‌ಎಂಬಿ 29'ರ ಭಾಗವಾಗಿದ್ದಾರೆ ಎಂಬ ತಪ್ಪು ವರದಿ ಉದ್ದೇಶಿಸಿ ಮಾತನಾಡಿರುವ ಚಲನಚಿತ್ರ ನಿರ್ಮಾಣ ಸಂಸ್ಥೆ, ಪ್ರೊಜೆಕ್ಟ್​​​​ನಲ್ಲಿ ಅವರ ಪಾತ್ರವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚಿತ್ರತಂಡ ಪ್ರತಿಕ್ರಿಯಿಸಿ, "ವಿರೇನ್ ಸ್ವಾಮಿ ನಮ್ಮ ಚಿತ್ರದ ಭಾಗವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇವೆ. ಸೂಕ್ತ ಸಮಯಕ್ಕೆ ಎಲ್ಲದರ ಕುರಿತು ಅಧಿಕೃತ ಪ್ರಕಟಣೆಗಳನ್ನು ಪ್ರೊಡಕ್ಷನ್ ಹೌಸ್ ಕೊಡಲಿದೆ'' ಎಂದು ತಿಳಿಸಿದೆ.

SSMB29 Makers Announcement
ನಿರ್ಮಾಣ ಸಂಸ್ಥೆಯ ಅನೌನ್ಸ್​​ಮೆಂಟ್​​ (ETV Bharat)

ಬಹುನಿರೀಕ್ಷಿತ ಚಿತ್ರದ ಅಪ್ಡೇಟ್ಸ್​​ಗಾಗಿ ಸಾಕಷ್ಟು ಸಂಖ್ಯೆಯ ಸಿನಿಪ್ರಿಯರು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇದೊಂದು ಎಪಿಕ್​ ಅಡ್ವೆಂಚರ್​ ಎಂದು ಹೇಳಲಾಗುತ್ತಿದೆ. ಮಹೇಶ್ ಬಾಬು ಅವರ ಇತ್ತೀಚಿನ ನೋಟ, 90ರ ದಶಕದ ತಾರೆಯರನ್ನು ನೆನಪಿಸಿದೆ. ಮತ ಚಲಾಯಿಸಲು ಬಂದ ಸಂದರ್ಭದಲ್ಲಿ ಕ್ಯಾಪ್ ಸಹಾಯದಿಂದ ತಮ್ಮ ಹೊಸ ನೋಟವನ್ನು ಮರೆಮಾಚುವ ಪ್ರಯತ್ನ ನಡೆಸಿದರೂ, ಅಭಿಮಾನಿಗಳಿಗೆ ಒಂದು ಸಣ್ಣ ನೋಟ ಸಿಕ್ಕಿದೆ. ಬ್ಲ್ಯೂ ಟಿ ಶರ್ಟ್ ಮತ್ತು ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದು, ಮಹೇಶ್ ಹೊಸ ಲುಕ್ 'ಎಸ್‌ಎಸ್‌ಎಂಬಿ 29'ರಲ್ಲಿ ಚಿತ್ರಿಸಬಹುದಾದ ಪಾತ್ರದ ಬಗ್ಗೆ ಸುಳಿವು ನೀಡಿತು.

ಇದನ್ನೂ ಓದಿ: ಜೂ.ಎನ್​ಟಿಆರ್​ ಹುಟ್ಟುಹಬ್ಬದಂದು ಪ್ರಶಾಂತ್​​ ನೀಲ್​ ನಿರ್ದೇಶನದ ಸಿನಿಮಾ ಟೈಟಲ್​ ಘೋಷಣೆ - Jr NTR

ಆಗಸ್ಟ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ವರದಿಗಳು ಸುಳಿವು ನೀಡಿದ್ದರೂ, ಚಿತ್ರ ತಯಾರಕರಿಂದ ಇನ್ನೂ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಮೊದಲೇ ವರದಿ ಮಾಡಿದಂತೆ, ಚಿತ್ರ ಒಂದು ಆ್ಯಕ್ಷನ್ ಥ್ರಿಲ್ಲರ್. ಚಿತ್ರದಲ್ಲಿನ ಅವರ ಪಾತ್ರ ರಾಮಾಯಣದ ಭಗವಾನ್ ಹನುಮಂತನ ಗುಣಲಕ್ಷಣಗಳಿಂದ ಪ್ರೇರಿತವಾಗಿದೆಯಂತೆ.

ಇದನ್ನೂ ಓದಿ: ಕೈಗೆ ಬ್ಯಾಂಡೇಜ್​​ ಸುತ್ತಿಕೊಂಡೇ ರೆಡ್​ ಕಾರ್ಪೆಟ್​​ ಮೇಲೆ ಐಶ್ವರ್ಯಾ ಮಿಂಚು: ರೈ ಆತ್ಮವಿಶ್ವಾಸಕ್ಕೆ ಜೈ ಎಂದ ಫ್ಯಾನ್ಸ್‌ - Aishwarya Rai At Cannes

ಕೆ.ಎಲ್.ನಾರಾಯಣ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಚಿತ್ರ ಎಂದು ಹೇಳಲಾಗಿದೆ. ಬಾಹುಬಲಿ ಮತ್ತು ಆರ್‌ಆರ್‌ಆರ್‌ನಂತಹ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ರಾಜಮೌಳಿ, ಅದ್ಭುತ ಸಿನಿಮೀಯ ಅನುಭವ ನೀಡಲಿದ್ದಾರೆ ಎಂಬ ಭರವಸೆ ಇದೆ. ಮಹೇಶ್ ಬಾಬು 8 ವಿಭಿನ್ನ ನೋಟದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿರುವ ಈ ಚಿತ್ರದ ಅಪ್​ಡೇಟ್ಸ್​​ಗಾಗಿ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.