ETV Bharat / entertainment

ಮಾಧ್ಯಮ ಕ್ಷೇತ್ರದ ದಿಗ್ಗಜ ರಾಮೋಜಿ ರಾವ್​ಗೆ ಭಾರತ ರತ್ನ ನೀಡುವಂತೆ ನಿರ್ದೇಶಕ ರಾಜಮೌಳಿ ಒತ್ತಾಯ - Ramoji Rao

ನಿರ್ದೇಶಕ ಎಸ್‌.ಎಸ್ ರಾಜಮೌಳಿ, ರಾಮೋಜಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ರಾಮೋಜಿ ರಾವ್ ಅವರಿಗೆ 'ಭಾರತ ರತ್ನ' ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ, ಇಂದು ಬೆಳಗ್ಗೆ ರಾಮೋಜಿ ರಾವ್​ ಅವರ ಅಂತಿಮ ದರ್ಶನ ಪಡೆದಿದ್ದಾರೆ.

Ramoji Rao, SS Rajamouli
ರಾಮೋಜಿ ರಾವ್​, ಎಸ್​ಎಸ್​ ರಾಜಮೌಳಿ (ETV Bharat/ANI)
author img

By ETV Bharat Karnataka Team

Published : Jun 8, 2024, 12:24 PM IST

Updated : Jun 8, 2024, 1:06 PM IST

ರಾಮೋಜಿ ರಾವ್​ ಅಂತಿಮ ದರ್ಶನ (ANI)

ರಾಮೋಜಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ರಾಮೋಜಿ ರಾವ್ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದು, ತೆಲುಗು ರಾಜ್ಯಗಳು ತೀವ್ರ ದುಃಖ ತಪ್ತವಾಗಿವೆ. ಟಾಲಿವುಡ್​ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಚಿರಂಜೀವಿ, ಜೂನಿಯರ್ ಎನ್‌ಟಿಆರ್, ರಾಮ್ ಗೋಪಾಲ್ ವರ್ಮಾ, ವಿಷ್ಣು ಮಂಚು, ಮನೋಜ್ ಮಂಚು ಅವರಂತಹ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.

ರಾಜಮೌಳಿ ಟ್ವೀಟ್​: ಟಾಲಿವುಡ್​ನ ಹೆಸರಾಂತ ನಿರ್ದೇಶಕ ಎಸ್‌.ಎಸ್ ರಾಜಮೌಳಿ ತಮ್ಮ ಪೋಸ್ಟ್​​ನಲ್ಲಿ, ಮಾಧ್ಯಮ ಕ್ಷೇತ್ರದ ದಿಗ್ಗಜರಿಗೆ ಭಾರತ ರತ್ನ ನೀಡುವಂತೆ ಒತ್ತಾಯಿಸಿದ್ದಾರೆ. ರಾಜಮೌಳಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, "ಓರ್ವ ವ್ಯಕ್ತಿ ತಮ್ಮ 50 ವರ್ಷದ ಪಯಣದಲ್ಲಿ, ಕಠಿಣ ಪರಿಶ್ರಮ ಮತ್ತು ಹೊಸತನದೊಂದಿಗೆ ಲಕ್ಷಾಂತರ ಜನರಿಗೆ ಉದ್ಯೋಗ, ಜೀವನೋಪಾಯ ಮತ್ತು ಭರವಸೆ ಒದಗಿಸಿದ್ದಾರೆ. ರಾಮೋಜಿ ರಾವ್ ಅವರಿಗೆ ನಾವು ಗೌರವ ಸಲ್ಲಿಸುವ ಏಕೈಕ ಮಾರ್ಗವೆಂದರೆ ಅವರಿಗೆ 'ಭಾರತ ರತ್ನ' ಪ್ರಶಸ್ತಿಯನ್ನು ನೀಡುವುದು" ಎಂದು ಬರೆದುಕೊಂಡಿದ್ದಾರೆ.

ರಾಮೋಜಿ ರಾವ್​ ಅಂತಿಮ ದರ್ಶನ: ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ರಾಮೋಜಿ ರಾವ್ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ ನಿರ್ದೇಶಕರು ಆಗಮಿಸಿ ಅಂತಿಮ ದರ್ಶನ ಪಡೆದರು. ಆಸ್ಕರ್​​ ವಿಜೇತ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಕೂಡ ಜೊತೆಗಿದ್ದರು. ನಿರ್ದೇಶಕರ ಬೆನ್ನಲ್ಲೇ ಕೆಲ ನಟರು ಆಗಮಿಸಿದ್ದಾರೆ. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಚಿರಂಜೀವಿ, ಆರ್‌ಆರ್‌ಆರ್ ಸ್ಟಾರ್ ಜೂನಿಯರ್ ಎನ್‌ಟಿಆರ್, ಮಂಚು ಮನೋಜ್ ಸೇರಿದಂತೆ ಹಲವರು ರಾಮೋಜಿ ರಾವ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿ, "ರಾಮೋಜಿ ರಾವ್ ಅವರ ನಿಧನವನ್ನು ನಂಬಲಾಗುತ್ತಿಲ್ಲ. ಅವರು ಓರ್ವ ವ್ಯಕ್ತಿಯಿಂದ ಸಂಸ್ಥೆಯಾಗಿ ರೂಪಾಂತರಗೊಂಡವರು. ಈ ಅದ್ಭುತ ವ್ಯಕ್ತಿತ್ವವನ್ನು ಕಳೆದುಕೊಂಡ ತೆಲುಗು ರಾಜ್ಯ ಕಂಬನಿ ಮಿಡಿಯುತ್ತಿದೆ. ಮನುಷ್ಯನಿಗಿಂತ ಹೆಚ್ಚಾಗಿ ಅವರೊಂದು ಶಕ್ತಿ. ಆ ಶಕ್ತಿಯ ಸಾವನ್ನು ಕಲ್ಪಿಸಲು ನನಗೆ ಕಷ್ಟವಾಗುತ್ತಿದೆ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮಾಧ್ಯಮ ಕ್ಷೇತ್ರದ ಬೆಳವಣಿಗೆಗೆ ಸರ್ವಸ್ವ ಅರ್ಪಿಸಿದ್ದ ರಾಮೋಜಿ ರಾವ್: ಯುವ ಪೀಳಿಗೆಗೆ ಸ್ಫೂರ್ತಿಯ ಸಾಧಕ - Ramoji Rao

ಕೃಷಿ ಕುಟುಂಬದಲ್ಲಿ ಜನಿಸಿದ ಚೆರುಕುರಿ ರಾಮೋಜಿ ರಾವ್ ಅವರು ಉದ್ಯಮಿಯಾದರು, ಮಾಧ್ಯಮ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದರು. ಚಲನಚಿತ್ರ ನಿರ್ಮಾಪಕರಾದರು. ರಾಮೋಜಿ ಗ್ರೂಪ್‌ನ ಮುಖ್ಯಸ್ಥರಾಗಿದ್ದರು. ರಾಮೋಜಿ ಫಿಲ್ಮ್ ಸಿಟಿ, ಈನಾಡು ಪತ್ರಿಕೆ, ಈಟಿವಿ ನೆಟ್‌ವರ್ಕ್, ಚಲನಚಿತ್ರ ನಿರ್ಮಾಣ ಕಂಪನಿ ಉಷಾ ಕಿರಣ್ ಮೂವೀಸ್ ಮತ್ತು ಚಲನಚಿತ್ರ ವಿತರಣಾ ಘಟಕ ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಸೇರಿದಂತೆ ಅವರ ಕ್ಷೇತ್ರ ಸಾಕಷ್ಟು ವಿಸ್ತರಣೆಗೊಂಡಿದೆ.

ಇದನ್ನೂ ಓದಿ: ರಾಮೋಜಿ ರಾವ್​​​​​​ ಅವರ ನಿಧನಕ್ಕೆ ಪ್ರಧಾನಿ, ಮೆಗಾಸ್ಟಾರ್​ ಚಿರಂಜೀವಿ ಸಂತಾಪ - Media and Indian Cinema Giant

Last Updated : Jun 8, 2024, 1:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.