ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರ 'ಬಘೀರ' ತೆರೆಗಪ್ಪಳಿಸಿ ಎರಡು ವಾರಗಳಾಗಿವೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಚೆಂದುಳ್ಳಿ ಚೆಲುವೆ ರುಕ್ಮಿಣಿ ವಸಂತ್ ನಟನೆಯ ಚಿತ್ರ ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದ್ದು, ಬಾಕ್ಸ್ ಆಫೀಸ್ ಅಂಕಿಅಂಶಗಳೂ ಉತ್ತಮವಾಗಿವೆ.
'ಬಘೀರ' ಕಲೆಕ್ಷನ್: ಡಾ.ಸೂರಿ ನಿರ್ದೇಶನದ 'ಬಘೀರ' ಅಕ್ಟೋಬರ್ 31ರ ದೀಪಾವಳಿ ಸಂದರ್ಭದಲ್ಲಿ ಚಿತ್ರಮಂದಿರಗಳನ್ನು ಪ್ರವೇಶಿಸಿತ್ತು. ದಕ್ಷಿಣ ಚಿತ್ರರಂಗದ ಜನಪ್ರಿಯ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಕಳೆದ 13 ದಿನಗಳಲ್ಲಿ 22.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾರತದ ನೆಟ್ ಕಲೆಕ್ಷನ್ - 19.78 ಕೋಟಿ ರೂಪಾಯಿ. ಈ ಅಂಕಿಅಂಶಗಳು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯನ್ನು ಆಧರಿಸಿದೆ.
'ಬಘೀರ' ಕಲೆಕ್ಷನ್ (ಕನ್ನಡ ಆವೃತ್ತಿ, ನೆಟ್ ಕಲೆಕ್ಷನ್):
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, 'ಬಘೀರ' 2.55 ಕೋಟಿ ರೂಪಾಯಿಯೊಂದಿಗೆ ಮೊದಲ ದಿನದ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿದೆ.
- ಎರಡನೇ ದಿನ - 2.9 ಕೋಟಿ ರೂಪಾಯಿ.
- ಮೂರನೇ ದಿನ - 3.2 ಕೋಟಿ ರೂಪಾಯಿ.
- ನಾಲ್ಕನೇ ದಿನ - 2.85 ಕೋಟಿ ರೂಪಾಯಿ.
- ಐದನೇ ದಿನ - 0.97 ಕೋಟಿ ರೂಪಾಯಿ.
- ಆರನೇ ದಿನ - 0.9 ಕೋಟಿ ರೂಪಾಯಿ.
- ಏಳನೇ ದಿನ - 0.7 ಕೋಟಿ ರೂಪಾಯಿ.
- ಎಂಟನೇ ದಿನ - 0.6 ಕೋಟಿ ರೂಪಾಯಿ.
- ಒಂಭತ್ತನೇ ದಿನ - 0.6 ಕೋಟಿ ರೂಪಾಯಿ.
- ಹತ್ತನೇ ದಿನ - 1.05 ಕೋಟಿ ರೂಪಾಯಿ.
- ಹನ್ನೊಂದನೇ ದಿನ - 1.15 ಕೋಟಿ ರೂಪಾಯಿ.
- ಹನ್ನೆರಡನೇ ದಿನ - 0.25 ಕೋಟಿ ರೂಪಾಯಿ.
- ಹದಿಮೂರನೇ ದಿನ - 0.23 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಈವರೆಗೆ 17.95 ಕೋಟಿ ರೂ. ಸಂಪಾದಿಸಿದೆ.
ಇದನ್ನೂ ಓದಿ: 'ಅವನಲ್ಲ ಅವಳು': ಲಿಂಗ ಬದಲಿಸಿಕೊಂಡ ಸಿನಿ ಸೆಲೆಬ್ರಿಟಿಗಳಿವರು; ಒಮ್ಮೆ ನೋಡಿಬಿಡಿ
'ಬಘೀರ' ಕಲೆಕ್ಷನ್ (ತೆಲುಗು ಆವೃತ್ತಿ, ನೆಟ್ ಕಲೆಕ್ಷನ್): ತೆಲುಗು ಭಾಷೆಯಲ್ಲಿ 'ಬಘೀರ' ಮೊದಲ ದಿನ 0.5 ಕೋಟಿ ರೂಪಾಯಿ ವ್ಯವಹಾರ ನಡೆಸುವ ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತು.
- ಎರಡನೇ ದಿನ - 0.4 ಕೋಟಿ ರೂಪಾಯಿ.
- ಮೂರನೇ ದಿನ - 0.3 ಕೋಟಿ ರೂಪಾಯಿ.
- ನಾಲ್ಕನೇ ದಿನ - 0.2 ಕೋಟಿ ರೂಪಾಯಿ.
- ಐದನೇ ದಿನ - 0.13 ಕೋಟಿ ರೂಪಾಯಿ.
- ಆರನೇ ದಿನ - 0.15 ಕೋಟಿ ರೂಪಾಯಿ.
- ಏಳನೇ ದಿನ - 0.1 ಕೋಟಿ ರೂಪಾಯಿ.
- ಎಂಟನೇ ದಿನ - 0.05 ಕೋಟಿ ರೂ. ಸೇರಿದಂತೆ ಈವರೆಗೆ ಒಟ್ಟು 1.83 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ಮಿಸ್ ಟೀನ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡ ತ್ರಿಷ್ಣಾ ರೇ; ಒಡಿಶಾ ಚೆಲುವೆಗೆ ಒಲಿದ ಪಟ್ಟ