ETV Bharat / entertainment

''ಜನರಿಂದಲೇ ದೇಶ, ಜನರಿಂದಲೇ ಸಿನಿಮಾ; ಜನರೇ ದೇಶ - ಜನರೇ ಸಿನಿಮಾ'': ಬ್ಲಿಂಕ್ ಚಿತ್ರತಂಡ

Blink movie team: ಗಣರಾಜ್ಯೋತ್ಸವದ ಮಹತ್ವದ ದಿನದಂದು ಮಹತ್ವದ ಸಂದೇಶ ಸಾರುವ ವಿಡಿಯೋವೊಂದನ್ನು ಬ್ಲಿಂಕ್ ಚಿತ್ರತಂಡ ಅನಾವರಣಗೊಳಿಸಿದೆ.

Dheekshith Shetty
ನಟ ದೀಕ್ಷಿತ್ ಶೆಟ್ಟಿ
author img

By ETV Bharat Karnataka Team

Published : Jan 26, 2024, 4:53 PM IST

ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಈ ವಿಶೇಷ ದಿನಕ್ಕೆ ದಿಯಾ ಹಾಗೂ ದಸರಾ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯದ 'ಬ್ಲಿಂಕ್' ಚಿತ್ರತಂಡ ವಿಶೇಷವಾಗಿ ಶುಭಕೋರಿದೆ.

'ಬ್ಲಿಂಕ್' ಚಿತ್ರತಂಡ ಚಿತ್ರೀಕರಣದ ದಿನದಿಂದಲೂ ತಮ್ಮ ವಿನೂತನ ಪ್ರಚಾರ ತಂತ್ರಗಳಿಂದ ಚಂದನವನದಲ್ಲಿ ಗಮನ ಸೆಳೆದಿದೆ. ತಮ್ಮ ಸಿನಿಮಾವನ್ನು ಜನರಿಗೆ ಮುಟ್ಟಿಸುವಲ್ಲಿ ಗೆಲ್ಲಲೇಬೇಕು ಎಂದು ಶಪಥ ಮಾಡಿರುವ ಈ ತಂಡ, ಯಾವುದೇ ಮುಚ್ಚುಮರೆ ಇಲ್ಲದೇ, 'ನೂತನ ಚಿತ್ರಗಳನ್ನು ಕಟ್ಟುವಲ್ಲಿ, ಜನರಿಗೆ ತಲುಪಿಸುವಲ್ಲಿ ಇರುವ ಸಮಸ್ಯೆ'ಗಳನ್ನು ತಿಳಿಸಲು ವಿನೂತನ ಪ್ರಯೋಗ ಮಾಡಿದೆ. "ಜನರಿಂದಲೇ ಸಿನಿಮಾ, ಜನರೇ ಸಿನಿಮಾ" ಎಂಬ ವಿಶಿಷ್ಟ ಸಾಲುಗಳೀಗ ಜನರ ಮನಸ್ಸನ್ನು ಗೆಲ್ಲುತ್ತಿವೆ. ಚಿತ್ರಮಂದಿರದಿಂದ ದೂರ ಉಳಿದಿರುವ ಜನರಿಗೆ, ಆ ಮಾಂತ್ರಿಕ ಜಗತ್ತಿನ ವಿಶೇಷತೆಯನ್ನು ಮನ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ.

  • ಜನರಿಂದಲೇ ದೇಶ ಜನರಿಂದಲೇ ಸಿನೆಮಾ , ಜನರೇ ದೇಶ ಜನರೇ ಸಿನೆಮಾ. ಚಿತ್ರಮಂದಿರದಲ್ಲಿ ಸಿಗೋಣ ✨

    ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

    Happy Republic Day 🇮🇳

    Blink Movie releasing on March 8th !!! See you in theatres .

    Initiative by Team Blink

    #kannadacinema #dheekshithshetty #RepublicDay2024 pic.twitter.com/OqxmSOmGgJ

    — Dheekshith Shetty (@Dheekshiths) January 26, 2024 " class="align-text-top noRightClick twitterSection" data=" ">

'ಬ್ಲಿಂಕ್' ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ವಿಡಿಯೋ ಹಂಚಿಕೊಂಡಿದೆ. ನಟ ದೀಕ್ಷಿತ್ ಶೆಟ್ಟಿ ಕುಳಿತು ಮಾತನಾಡಿರುವ ಈ ವಿಡಿಯೋ ಬಹಳ ಅದ್ಭುತವಾಗಿದೆ. ಪ್ರತೀ ಸಾಲುಗಳು, ನಟನ ದನಿ, ವಿಷಯವನ್ನು ರವಾನಿಸಿರುವ ರೀತಿ ಬಹಳ ಚೆನ್ನಾಗಿದೆ ಅಂತಾರೆ ನೆಟ್ಟಿಗರು. ಈ ವಿಡಿಯೋವನ್ನು ದೀಕ್ಷಿತ್ ಶೆಟ್ಟಿ ಸಹ ತಮ್ಮ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​​ಗಳಲ್ಲಿ ಹಂಚಿಕೊಂಡಿದ್ದು, ''ಜನರಿಂದಲೇ ದೇಶ, ಜನರಿಂದಲೇ ಸಿನಿಮಾ. ಜನರೇ ದೇಶ, ಜನರೇ ಸಿನಿಮಾ. ಚಿತ್ರಮಂದಿರದಲ್ಲಿ ಸಿಗೋಣ. ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ.

ಶ್ರೀನಿಧಿ ಬೆಂಗಳೂರು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರ. ಟೀಸರ್ ಹಾಗೂ ಹಾಡುಗಳ ಮೂಲಕ ಜನಮನ ಗೆದ್ದಿರುವ ನಿರ್ದೇಶಕ ಶ್ರೀನಿಧಿ ಬೆಂಗಳೂರು, ಇದೊಂದು ಕಾಲ್ಪನಿಕ ಕಥೆ. ಕನ್ನಡ ಚಿತ್ರರಂಗದಲ್ಲಿ ಈ ಪ್ರಕಾರದ ಚಿತ್ರಗಳು ತೀರಾ ಕಡಿಮೆ ಸಂಖ್ಯೆಯಲ್ಲಿ ತೆರೆಕಂಡಿವೆ. ಈ ಚಿತ್ರವು ನೋಡುಗರಲ್ಲಿ ಹೊಸತನ ಮೂಡಿಸುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಜಯ್​​ ರಾಘವೇಂದ್ರ ನಟನೆಯ 'ಕೇಸ್ ಆಫ್ ಕೊಂಡಾಣ'ಗೆ ಉತ್ತಮ ಪ್ರತಿಕ್ರಿಯೆ

ದೀಕ್ಷಿತ್ ಶೆಟ್ಟಿ ಈ ಚಿತ್ರದ ನಾಯಕ ನಟ. ಹೊಸ ದಿನಚರಿ ಖ್ಯಾತಿಯ ಮಂದಾರ ಬಟ್ಟಲಹಳ್ಳಿ ನಾಯಕ ನಟಿ. ಇತ್ತೀಚಿಗೆ ತೆರೆಕಂಡ ಟೋಬಿ ಮತ್ತು ಸಪ್ತಸಾಗರದಾಚೆ ಎಲ್ಲೋ 2 ಚಿತ್ರದ ಸುರಭಿ ಪಾತ್ರಧಾರಿ ಚೈತ್ರಾ ಜೆ ಆಚಾರ್ ಕೂಡ ಬ್ಲಿಂಕ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ, ವಜ್ರಧೀರ್ ಜೈನ್, ಗೋಪಾಲಕೃಷ್ಣ ದೇಶಪಾಂಡೆ , ಕಿರಣ್ ನಾಯ್ಕ್ , ಮುರುಳಿ ಶೃಂಗೇರಿ, ಸುರೇಶ್ ಅನಗಹಳ್ಳಿ ಸೇರಿದಂತೆ ದೊಡ್ಡ ತಾರಾ ಬಳಗವಿದೆ.

ಇದನ್ನೂ ಓದಿ: ಚಿರಂಜೀವಿಗೆ 'ಪದ್ಮವಿಭೂಷಣ': ಧನ್ಯವಾದ ಅರ್ಪಿಸಿದ ಮೆಗಾಸ್ಟಾರ್‌

ಜನನಿ ಪಿಕ್ಚರ್ಸ್ ನಿರ್ಮಾಣದ 'ಬ್ಲಿಂಕ್' ಸೈನ್ಸ್ ಫಿಕ್ಷನ್​​ ಪ್ರಕಾರದ ಚಿತ್ರವಾಗಿದ್ದು, ಪ್ರೇಕ್ಷಕರನ್ನು ಸೆಳಿದಿಟ್ಟುಕೊಳ್ಳುವುದು ಶತಸಿದ್ಧ ಎಂದು ನಿರ್ಮಾಪಕ ರವಿಚಂದ್ರ ಎ ಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ​. ಈ ಚಿತ್ರಕ್ಕೆ ಪ್ರಸನ್ನ ಕುಮಾರ್ ಎಂ.ಎಸ್ ಅವರ ಸಂಗೀತ ನಿರ್ದೇಶನವಿದ್ದು, ಅವಿನಾಶ್​​ ಶಾಸ್ತ್ರಿ ಅವರ ಕ್ಯಾಮರಾ ಕೈಚಳಕವಿದೆ. ಸಂಜೀವ್ ಜಾಗೀರ್ದಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಹಾಡುಗಳು ಹಾಗೂ ಟೀಸರ್​ನಿಂದ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರೋ ಬ್ಲಿಂಕ್ ಚಿತ್ರ ಮಾರ್ಚ್ 8ಕ್ಕೆ ತೆರೆಗಪ್ಪಳಿಸಲು ಸಜ್ಜಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.