ETV Bharat / entertainment

ಅಭಿಮಾನಿ ದೇವರುಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಮನವಿ​: ಏನದು ಗೊತ್ತಾ? - Shiva Rajukumar Birthday

'ಅಭಿಮಾನಿ ದೇವರುಗಳಲ್ಲಿ ವಿನಂತಿ' ಎಂಬ ಕ್ಯಾಪ್ಷನ್​ ಹೊಂದಿರುವ ಮನವಿ ಪತ್ರವೊಂದನ್ನು ನಟ ಶಿವ ರಾಜ್​ಕುಮಾರ್ ತಮ್ಮ ಅಧಿಕೃತ​ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Super star Shivarajkumar
ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ (ETV Bharat)
author img

By ETV Bharat Karnataka Team

Published : Jul 12, 2024, 8:29 AM IST

'ಜುಲೈ 12' ಬಂತಂದ್ರೆ ಸಾಕು ಕನ್ನಡ ಚಿತ್ರರಂಗ, ಅಭಿಮಾನಿ ಬಳಗದಲ್ಲಿ ಹಬ್ಬದ ಸಂಭ್ರಮ. ಯಾಕೆ ಅಂತೀರಾ?. ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಹೀಗೆ ನಾನಾ ಬಿರುದುಗಳನ್ನು ಹೊಂದಿರುವ ಕನ್ನಡದ ಖ್ಯಾತ ನಟ ಡಾ.ಶಿವ ರಾಜ್​​ಕುಮಾರ್ ಜನ್ಮದಿನ. ಗಾಜನೂರು ಗಂಡು ಹುಟ್ಟಿದ ದಿನವನ್ನು ಕೋಟ್ಯಂತರ ಅಭಿಮಾನಿಗಳು ಹಬ್ಬದಂತೆ ಆಚರಿಸಿ ಸಂಭ್ರಮಿಸುತ್ತಾರೆ. ಆದ್ರೆ ಇಂದು ಅಪಾರ ಸಂಖ್ಯೆಯ ಅಭಿಮಾನಿಗಳ ಆಸೆ ಈಡೇರುವುದಿಲ್ಲ. ಈ ಬಗ್ಗೆ ಸ್ವತಃ ಶಿವಣ್ಣನೇ ಪೋಸ್ಟ್ ಶೇರ್ ಮಾಡಿದ್ದಾರೆ.

ಪ್ರತೀ ಜುಲೈ 12ರಂದು ನಾಗವಾರದ ಶಿವ ರಾಜ್‌ಕುಮಾರ್ ನಿವಾಸದೆದುರು ಅಭಿಮಾನಿಗಳು ಬಂದು ಜಾತ್ರೆ ರೀತಿ ಸೇರುತ್ತಿದ್ದರು. ಆದರೆ, ಈ ವರ್ಷ ಕಾರಣಾಂತರಗಳಿಂದ ನಟ ಹುಟ್ಟು ಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಅವರು ಅಭಿಮಾನಿಗಳಲ್ಲಿ ಸೋಷಿಯಲ್​ ಮೀಡಿಯಾ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಶಿವ ರಾಜ್​ಕುಮಾರ್​ ಟ್ವೀಟ್: ''ಅಭಿಮಾನಿ ದೇವರುಗಳಿಗೆ, ಪ್ರತೀ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ್ಮ ಜೊತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡುವ ಹ್ಯಾಂಡ್ ಶೇಕ್, ಪ್ರೀತಿಯ ಅಪ್ಪುಗೆ, ನೀವು ನೀಡೋ ಆರ್ಶೀವಾದ ನಿಮ್ಮ ಶಿವುಗೆ ಶ್ರೀರಕ್ಷೆ. ಆದರೆ ಈ ವರ್ಷದ ಹುಟ್ಟು ಹಬ್ಬದದಿನ ನಿಮ್ಮ ಜೊತೆ ಇರೋದಿಕ್ಕೆ ಆಗೋದಿಲ್ಲ. ಆದರೆ ವರ್ಷವಿಡೀ ಒಟ್ಟಿಗೆ ಪ್ರತಿದಿನ ಸೆಲೆಬ್ರೇಟ್ ಮಾಡೋಣ. ನಾನು ಬರ್ತ್ ಡೇಗೆ ಇಲ್ಲದೇ ಇದ್ರೂ ನಿಮ್ಮ ಜೊತೆ ರಣಗಲ್ ಇರ್ತಾನೆ. ನಿಮ್ಮ ಆರ್ಶೀವಾದ ಸದಾ ಇರಲಿ'' ಎಂದು ಎಕ್ಸ್ ಪೋಸ್ಟ್ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಪೋಸ್ಟ್​​ಗೆ 'ಅಭಿಮಾನಿ ದೇವರುಗಳಲ್ಲಿ ವಿನಂತಿ..' ಎಂಬ ಕ್ಯಾಪ್ಷನ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ಉತ್ತರಕಾಂಡದ 'ಮಾಲೀಕ'ನಾದ ಶಿವ ರಾಜ್​ಕುಮಾರ್: ಬರ್ತ್​​ಡೇಗೂ ಮುನ್ನ ಫಸ್ಟ್ ಲುಕ್ ರಿಲೀಸ್​​ - Shiva Rajkumar Maalika Poster

ಕನ್ನಡ ಚಿತ್ರರಂಗದಲ್ಲಿ 35 ವರ್ಷಗಳನ್ನು ಪೂರೈಸಿ 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶಿವ ರಾಜ್‌ಕುಮಾರ್ ತಮ್ಮ ಈ ಪಯಣದಲ್ಲಿ ಸಾಕಷ್ಟು ಸೋಲು, ಗೆಲುವುಗಳನ್ನು ಕಂಡಿದ್ದಾರೆ. ಡಾ.ರಾಜ್​ಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಬಳಿಕ ಕನ್ನಡ ಚಿತ್ರರಂಗದಲ್ಲೇ ನಾಯಕತ್ವದ ಗುಣ ಹೊಂದಿದ್ದಾರೆ. ಸಖತ್​ ಸ್ಟಾರ್ ಡಮ್​ ಗಳಿಸಿರುವ ಇವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ತಮ್ಮ 62ನೇ ವಯಸ್ಸಿನಲ್ಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

ಇದನ್ನೂ ಓದಿ: ನಾಳೆ ಶಿವ ರಾಜ್​ಕುಮಾರ್​​ ಬರ್ತ್​ಡೇ: ಅಭಿಮಾನಿಗಳಿಗೆ '45' ಪ್ರೇಮದ ಕಾಣಿಕೆ - 45 Cinema First Look

ಬಹುಬೇಡಿಕೆಯ ನಟನ ಹುಟ್ಟುಹಬ್ಬಕ್ಕೆ ಹೆಸರಿಡದ ಸಾಲು ಸಾಲು ಚಿತ್ರಗಳು ಅನೌನ್ಸ್ ಆಗಲಿವೆ. ಈಗಾಗಲೇ ನಿರ್ದೇಶಕ ಹೇಮಂತ್ ರಾವ್ ನಿರ್ದೇಶನದ ಭೈರವನ ಕೊನೆ ಪಾಠ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ. ಉತ್ತರಕಾಂಡ ಚಿತ್ರದಲ್ಲಿ ಮಾಲೀಕನಾಗಿ ವಿಜೃಂಭಿಸಿದ್ದಾರೆ. ಹುಟ್ಟುಹಬ್ಬದ ಸಲುವಾಗಿ ಭೈರತಿ ರಣಗಲ್ ಚಿತ್ರದ ಟೀಸಲ್ ಹಾಗೂ 45 ಸಿನಿಮಾದ ಫಸ್ಟ್ ಲುಕ್ ಅನಾವರಣಗೊಳ್ಳಲಿವೆ. ಒಟ್ಟಾರೆ ಈ ವರ್ಷ ಸೆಂಚುರಿ ಸ್ಟಾರ್ 62ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳೊಟ್ಟಿಗೆ ಆಚರಿಸಿಕೊಳ್ಳದೇ ಇರೋ ಬೇಸರವಿದ್ದರೂ, ಸಿನಿಮಾಗಳ ಅಪ್​ಡೇಟ್ಸ್ ಕೊಡುವ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ತರಿಸಲಿದ್ದಾರೆ ಸೆಂಚುರಿ ಸ್ಟಾರ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.