ಸಿನಿಮಾ ಎಂಬ ಬಣ್ಣದ ಲೋಕದ ಪ್ರೇಮಪಕ್ಷಿಗಳಾದ ನಟ ಸಿದ್ಧಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮೊದಲು ಮದುವೆ ಎಂದೇ ಹೇಳಲಾಗಿತ್ತು. ನಂತರ, ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದರು. ಇತ್ತೀಚೆಗೆ ನಟ ತಮ್ಮ ಮ್ಯಾರೇಜ್ ಪ್ಲ್ಯಾನ್ಸ್ ಬಗ್ಗೆ ಸುಳಿವು ನೀಡಿದರು. ತಮ್ಮ ಚಿತ್ತ (Chithha) ಚಿತ್ರಕ್ಕಾಗಿ ಬೆಸ್ಟ್ ಎಂಟರ್ಟೈನರ್ ಪ್ರಶಸ್ತಿಯನ್ನು ಪಡೆದಿದ್ದು, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿದ್ಧಾರ್ಥ್ ಮದುವೆಯ ದಿನಾಂಕವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.
ತಮ್ಮ ವಿವಾಹದ ಬಗೆಗಿನ ಪ್ರಶ್ನೆಗಳನ್ನು ಉದ್ದೇಶಿಸಿ ಮಾತನಾಡಿದ ಸಿದ್ಧಾರ್ಥ್, ಆಪ್ತರೊಂದಿಗೆ ನಡೆಯುವ ಖಾಸಗಿ ಸಮಾರಂಭಕ್ಕೂ ರಹಸ್ಯ ಕಾರ್ಯಕ್ಕೂ ವ್ಯತ್ಯಾಸವಿದೆ ಎಂಬುದನ್ನು ಒತ್ತಿ ಹೇಳಿದರು. ಎಂಗೇಜ್ಮೆಂಟ್ ಈವೆಂಟ್‌ನ ಗೌಪ್ಯತೆಯ ಬಗ್ಗೆ ಕೆಲವರು ನಾನಾ ತರನಾಗಿ ಊಹೆ ಮಾಡುತ್ತಿದ್ದರೆ, ಇದು ಆತ್ಮೀಯ, ಖಾಸಗಿ ಸಮಾರಂಭ ಎಂಬುದನ್ನು ಸಿದ್ಧಾರ್ಥ್ ಸ್ಪಷ್ಟಪಡಿಸಿದ್ದಾರೆ. ಸಮಯ ಮತ್ತು ನಿರ್ಧಾರಗಳು ಹಿರಿಯರ ಕೈಯಲ್ಲಿದೆ ಎಂಬುದಾಗಿಯೂ ತಿಳಿಸಿದರು. ಮದುವೆ ಎಂಬ ಲೈಫ್ಲಾಂಗ್ ಕಮಿಟ್ಮೆಂಟ್ಗೆ ಹಿರಿಯರ ಅನುಮತಿಯ ಮಹತ್ವವನ್ನು ಎತ್ತಿ ತೋರಿಸಿದರು.
ನಟನ ಪ್ರಪೋಸಲ್ ಅನ್ನು ಅದಿತಿ ರಾವ್ ಹೈದರಿ ಒಪ್ಪಿಕೊಳ್ಳಲು ತೆಗೆದುಕೊಂಡ ಅವಧಿಯ ಕುರಿತಾದ ಪ್ರಶ್ನೆಗಳು ಎದುರಾದವು. ಪ್ರೊಸೆಸ್ ತೆಗೆದುಕೊಂಡ ಸಮಯಕ್ಕಿಂತ ಫಲಿತಾಂಶ ಬಹಳ ಮುಖ್ಯ. ಅದಿತಿ ಒಪ್ಪಿದ್ದು ಬಹಳ ಸಂತೋಷವಾಯಿತೆಂದು ಸಮಾಧಾನ ವ್ಯಕ್ತಪಡಿಸಿದರು.
"ಎಷ್ಟು ಸಮಯ ತೆಗೆದುಕೊಂಡಿತು ಎಂಬ ಪ್ರಶ್ನೆಗಳನ್ನು ಕೇಳಬಾರದು. ಯೆಸ್ ಅಥವಾ ನೋ ಎಂಬ ಅಂತಿಮ ಫಲಿತಾಂಶವು ಬಹಳ ಮುಖ್ಯವಾಗಿರುತ್ತದೆ. ಫಲಿತಾಂಶ - ಪಾಸ್ ಅಥವಾ ಫೇಲ್ ಎಂಬುದನ್ನು ನಾನು ನೋಡುತ್ತೇನೆ. ಎಷ್ಟು ಅಂಕಗಳನ್ನು ಪಡೆದಿದ್ದೇನೆ ಎಂಬುದನ್ನು ನಾನೆಂದಿಗೂ ನೋಡಿಲ್ಲ. ಯೆಸ್ ಅಥವಾ ನೋ ಎಂಬ ಬಗ್ಗೆ ನಾನು ಟೆನ್ಷನ್‌ನಲ್ಲಿದ್ದೆ. ಕೊನೆಗೆ ನನ್ನ ಹೆಸರು ಪಾಸ್ ಲಿಸ್ಟ್‌ನಲ್ಲಿದೆ" ಎಂದು ಸಿದ್ಧಾರ್ಥ್ ತಿಳಿಸಿದರು.
ಇದನ್ನೂ ಓದಿ: ನಾಳೆ 'ಪುಷ್ಪ 2' ಟೀಸರ್ ರಿಲೀಸ್: ಎಡಿಟಿಂಗ್ ರೂಂನಿಂದ ಫೋಟೋ ಹಂಚಿಕೊಂಡ ಅಲ್ಲು ಅರ್ಜುನ್ - Pushpa 2
ಕಾರ್ಯಕ್ರಮದಲ್ಲಿ, ಸಿದ್ಧಾರ್ಥ್ ಅವರು ಅದಿತಿಗಾಗಿ ಕಮಲ್ ಹಾಸನ್ ಅಭಿನಯದ ಗುಣ ಚಿತ್ರದ 'ಕಣ್ಮಣಿ ಅನ್ಬೋದು' ಹಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. 2021ರಲ್ಲಿ ಬಿಡುಗಡೆ ಆದ ಮಹಾ ಸಮುದ್ರಂ ಚಿತ್ರದಲ್ಲಿ ತೆರೆ ಹಂಚಿಕೊಂಡ ಸಂದರ್ಭ ಸಿದ್ಧಾರ್ಥ್ - ಅದಿತಿ ನಡುವೆ ಪ್ರೇಮಾಂಕುರವಾಯಿತು. ನಂತರ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ವಿವಾಹ ಆಗಲಿದ್ದಾರೆ. ಈ ದಿನಕ್ಕಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿ ಮಗಳ ಫೋಟೋ ಹಂಚಿಕೊಂಡ ರಾಮ್ ಚರಣ್ ಪತ್ನಿ ಉಪಾಸನಾ - Ram Charan Family