ETV Bharat / entertainment

ಜೂನ್ ಕೊನೆಗೆ ಗೆಳೆಯ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ವಿವಾಹ - Sonakshi Sinha

author img

By PTI

Published : Jun 11, 2024, 9:42 PM IST

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗು ಅವರ ಗೆಳೆಯ, ನಟ ಜಹೀರ್ ಇಕ್ಬಾಲ್ ಇದೇ ತಿಂಗಳಾಂತ್ಯದಲ್ಲಿ ಮುಂಬೈನಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ.

Sonakshi Sinha and Zaheer Iqbal
ಸೋನಾಕ್ಷಿ ಸಿನ್ಹಾ, ಜಹೀರ್ ಇಕ್ಬಾಲ್ (Photo: Instagram/Zaheer Iqbal)

ಹೈದರಾಬಾದ್: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮದುವೆಯಾಗಲು ಸಜ್ಜಾಗಿದ್ದಾರೆ. ತಮ್ಮ ದೀರ್ಘಾವಧಿಯ ಗೆಳೆಯ, ನಟ ಜಹೀರ್ ಇಕ್ಬಾಲ್ ಅವರನ್ನು ಜೂನ್​ ತಿಂಗಳ ಕೊನೆಯಲ್ಲಿ ನಡೆಯಲಿರುವ ಖಾಸಗಿ ಸಮಾರಂಭದಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿ 'ಹೀರಾಮಂಡಿ: ದಿ ಡೈಮಂಡ್ ಬಜಾರ್‌'ನ ಟಿವಿ ಸರಣಿ ಬಿಡುಗಡೆಯಾದ ಬೆನ್ನಲ್ಲೇ ಸೋನಾಕ್ಷಿ ಮದುವೆ ಸುದ್ದಿ ಜೋರಾಗಿದೆ. ಇದರಲ್ಲಿ ಅವರು ರೆಹಾನಾ ಮತ್ತು ಫರೀದನ್‌ ಎಂಬ ದ್ವಿಪಾತ್ರಗಳನ್ನು ಕಾಣಿಸಿಕೊಂಡಿದ್ದಾರೆ.

ಮದುವೆ ಬಗ್ಗೆ ಸಿನ್ಹಾ ಕುಟುಂಬ ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ. ಆದರೂ, ಕುಟುಂಬದ ಆಪ್ತರು ಮದುವೆಯ ವರದಿಗಳು ನಿಜವೆಂದು ಹೇಳಿದ್ದಾರೆ.

ಜೂನ್ 23ರಂದು ಮುಂಬೈನ ಐಷಾರಾಮಿ ರೆಸ್ಟೋರೆಂಟ್‌ನಲ್ಲಿ ಸೋನಾಕ್ಷಿ ಹಾಗೂ ಇಕ್ಬಾಲ್ ವಿವಾಹ ಸಮಾರಂಭ ನಡೆಯಲಿದೆ. ಕೇವಲ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಈ ಸಮಾರಂಭದಲ್ಲಿ ಹಾಜರಿರುತ್ತಾರೆ ಎಂದು ಕುಟುಂಬದ ನಿಕಟವರ್ತಿಗಳು ತಿಳಿಸಿದ್ದಾರೆ.

ಸೋನಾಕ್ಷಿ ಮತ್ತು ಇಕ್ಬಾಲ್ ಪ್ರೇಮ ಸಂಬಂಧ ಹೊಂದಿದ್ದಾರೆ. 2022ರಲ್ಲಿ ಬಿಡುಗಡೆಯಾದ 'ಡಬಲ್ ಎಕ್ಸ್‌ಎಲ್‌' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಇಬ್ಬರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿಯೂ ಇದುವರೆಗೂ ದೃಢೀಕರಿಸಿಲ್ಲ. ಆದರೆ, ಈ ಜೋಡಿಯ ಸಾಮಾಜಿಕ ಪೋಸ್ಟ್‌ಗಳು ಪರಸ್ಪರರ ಫೋಟೋಗಳಿಂದ ತುಂಬಿವೆ. ಆಗಾಗ್ಗೆ ಗಣ್ಯರು ಸಮಾರಂಭಗಳು ಮತ್ತು ಔತಣಕೂಟಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇದರ ನಡುವೆ ಈ ಹಿಂದೆ ಸಂದರ್ಶನವೊಂದರಲ್ಲಿ ಇಕ್ಬಾಲ್ ತಮ್ಮ ಸಂಬಂಧದ ಕುರಿತು ಊಹಾಪೋಹಗಳನ್ನು ತಳ್ಳಿಹಾಕಿದ್ದರು. ಇತರರು ಏನು ಯೋಚಿಸುತ್ತಾರೆ ಎಂಬುದರ ಕುರಿತು ಇನ್ಮುಂದೆ ನಾನು ಚಿಂತಿಸಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: ಉಮಾಪತಿ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್​ ಸರ್ಜಾ ಪುತ್ರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.