ಕನ್ನಡ ಚಿತ್ರರಂಗದಲ್ಲಿ ಪ್ರೆಶ್ ಕಥೆಗಳೊಂದಿಗೆ ಪ್ರತಿಭೆ ಇರುವ ಯುವ ನಟ - ನಟಿಯರು, ನಿರ್ದೇಶಕರು ಹಾಗೂ ಟೆಕ್ನಿಶಿಯನ್ಗಳ ಆಗಮನವಾಗುತ್ತಿದೆ. ಈ ಸಾಲಿನಲ್ಲಿ ಈಗಾಗಲೇ ಹಲವು ಚಿತ್ರಗಳು ಗಮನ ಸೆಳೆದಿವೆ. ಇದೀಗ ನಿರ್ದೇಶಕ ಸುಕ್ಕ ಸೂರಿ ಗರಡಿಯಲ್ಲಿ ಪಳಗಿರುವ ಅಭಿ ಅವರ ಚೊಚ್ಚಲ ಪ್ರಯತ್ನದ ಪ್ರಾಜೆಕ್ಟ್ ಬಿಡುಗಡೆ ಹೊಸ್ತಿಲಿನಲ್ಲಿದೆ. ಅಭಿ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಿರುವ 'ಸೋಮು ಸೌಂಡ್ ಇಂಜಿನಿಯರ್' ಚಿತ್ರತಂಡ ಈಗಾಗಲೇ ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದೆ. ಇದೀಗ ಮನಮೋಹಕ ಗೀತೆಯೊಂದು ಅನಾವರಣಗೊಂಡಿದೆ.
ಧನಂಜನ್ ರಂಜನ್ ಸಾಹಿತ್ಯದ 'ಛಂದಸ್ಸಿನ ಚೆಂದದಲ್ಲಿ' ಎಂಬ ಪ್ರೇಮಗೀತೆ ಎ2 ಮ್ಯೂಸಿಕ್ ಮೂಲಕ ಅನಾವರಣಗೊಂಡಿದೆ. ಸಿದ್ದಾರ್ಥ್ ಬೆಳ್ಮಣ್ಣು ಹಾಗೂ ಮೇಘನಾ ಭಟ್ ಕಂಠಸಿರಿಯಲ್ಲಿ ಹಾಡು ಮೋಹಕವಾಗಿ ಮೂಡಿ ಬಂದಿದೆ. ಚರಣ್ ರಾಜ್ಯ ಸಂಗೀತ, ಶಿವ ಸೇನಾ ಛಾಯಾಗ್ರಹಣ 'ಛಂದಸ್ಸಿನ ಚೆಂದದಲ್ಲಿ' ಗೀತೆಯ ಶ್ರೀಮಂತಿಕೆ ಹೆಚ್ಚಿಸಿದೆ. ಈ ಹಾಡಿನಲ್ಲಿ ನಾಯಕ ಶ್ರೇಷ್ಠ ಹಾಗೂ ನಾಯಕಿ ನಿವಿಷ್ಕಾ ಪಾಟೀಲ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮೆಲುವಾದ ಸಾಹಿತ್ಯ, ಸಂಗೀತದ ಮಿಳಿತದೊಂದಿಗೆ 'ಛಂದಸ್ಸಿನ ಚೆಂದದಲ್ಲಿ' ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಿದೆ.
- " class="align-text-top noRightClick twitterSection" data="">
ಸಲಗ ಸಿನಿಮಾದಲ್ಲಿ ಕೆಂಡ ಪಾತ್ರದಲ್ಲಿ ಮಿಂಚಿದ್ದ ಶ್ರೇಷ್ಠ ಈ ಸಿನಿಮಾದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಬೆಳಗಾವಿ ಹುಡುಗಿ ನಿವಿಷ್ಕಾ ಪಾಟೀಲ್ ನಾಯಕಿಯಾಗಿ ನಟಿಸಿದ್ದಾರೆ. ಪಾಪ ಪಾಂಡು ಖ್ಯಾತಿಯ ಜಹಾಂಗೀರ್, ಅಪೂರ್ವ, ಯಶ್ ಶೆಟ್ಟಿ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ರಾಮ್ ಚರಣ್ ಮುಖ್ಯಭೂಮಿಕೆಯ 'ಗೇಮ್ ಚೇಂಜರ್' ಅಪ್ಡೇಟ್ಸ್
ವೈದ್ಯಕೀಯ ಹಿನ್ನೆಲೆಯುಳ್ಳ ಕ್ರಿಸ್ಟೋಪರ್ ಕಿಣಿ ಚಿತ್ರಕ್ಕೆ ಶಕ್ತಿಯಾಗಿ ನಿಂತಿದ್ದಾರೆ. ಸೋಮು ಸೌಂಡ್ ಇಂಜಿನಿಯರ್ ಹಿಂದೆ ಒಳ್ಳೆ ಟೆಕ್ನಿಷನ್ಗಳ ತಂಡವೇ ಇದೆ. ಚರಣ್ ರಾಜ್ ಸಂಗೀತ ಕೊಟ್ಟಿದ್ದಾರೆ. ಮಾಸ್ತಿ ಡೈಲಾಗ್ ಬರೆದುಕೊಟ್ಟಿದ್ದಾರೆ. ದೀಪು ಎಸ್.ಕುಮಾರ್ ಸಂಕಲನ ನಿರ್ವಹಿಸಿದ್ದಾರೆ.
ಇದನ್ನೂ ಓದಿ: AIನ ಪರಿಣಾಮ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ: ಅಮೀರ್ ಖಾನ್ ಆತಂಕ
'ಸೋಮು ಸೌಂಡ್ ಇಂಜಿನಿಯರ್' ಒಂದು ಪಕ್ಕಾ ಹಳ್ಳಿ ಕಥೆ. ಅದರಲ್ಲಿಯೂ ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ಇಳಕಲ್, ಗಂಜಿಹಾಳ, ಕೂಡಲ ಸಂಗಮಗಳಲ್ಲಿ ಚಿತ್ರೀಕರಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಂಸ್ಕೃತಿ, ಭಾಷೆ, ಜವಾರಿ ಸಂಗೀತ, ಸ್ಥಳೀಯ ಹಾಡುಗಳು ಜೊತೆಗೆ ಸ್ಥಳೀಯರನ್ನೇ ಬಳಸಿಕೊಂಡು ಸಿನಿಮಾ ಮಾಡಲಾಗಿದೆ. ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿರುವ ಸೋಮು ಬರುವ ತಿಂಗಳು ಮಾರ್ಚ್ 15ಕ್ಕೆ ರಾಜ್ಯಾದ್ಯಂತ ಸೌಂಡ್ ಮಾಡಲು ಸಜ್ಜಾಗಿದ್ದಾರೆ.