ETV Bharat / entertainment

'ಕೇನ್ಸ್'ನಲ್ಲಿ 1.8 ಲಕ್ಷ ಮೌಲ್ಯದ ದಿರಿಸಿನಲ್ಲಿ ಮಿಂಚಿದ ನಟಿ ಶೋಭಿತಾ! - Sobhita Makes Cannes Debut - SOBHITA MAKES CANNES DEBUT

77ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಟಿ ಶೋಭಿತಾ ಧೂಳಿಪಾಲ ಬಹು ನಿರೀಕ್ಷಿತ ಚೊಚ್ಚಲ ಪ್ರವೇಶದಲ್ಲೇ ಮಿಂಚು ಹರಿಸಿದ್ದಾರೆ.

Sobhita Dhulipala at Cannes Film Festival 2024
2024 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಶೋಭಿತಾ ಧೂಳಿಪಾಲ ((Getty))
author img

By ETV Bharat Karnataka Team

Published : May 17, 2024, 6:48 PM IST

ಹೈದರಾಬಾದ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ 77ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಹೆಜ್ಜೆ ಹಾಕುವ ಮೂಲಕ ನಟಿ ಶೋಭಿತಾ ಧೂಳಿಪಾಲ ಗಮನ ಸೆಳೆದರು. ನೇರಳೆ ಬಣ್ಣದ ಕಾರ್ಡೆಲಿಯಾ ಜಂಪ್‌ಸೂಟ್​ ದಿರಿಸಿನಲ್ಲಿ ನಟಿಮಣಿ ಮಿಂಚು ಹರಿಸಿದರು.

ಕೇನ್ಸ್‌ಗೆ ಹೊರಡುವ ಮೊದಲು ಶೋಭಿತಾ ಧೂಳಿಪಾಲ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಫೋಟೋಸ್​ಗೆ ಮನೋಹರವಾದ ಪೋಸ್ ನೀಡಿದರು. ಅಲ್ಲಿಂದ 77ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ತಮ್ಮ ಬಹು ನಿರೀಕ್ಷಿತ ಚೊಚ್ಚಲ ಪ್ರವೇಶ ಪಡೆದರು. ನೇರಳೆ ಬಣ್ಣದ ಸುಂದರ ದಿರಿಸಿನಲ್ಲಿ ತಮ್ಮ ಸೌಂದರ್ಯ ಪ್ರದರ್ಶಿಸಿದರು.

ಶೋಭಿತಾ ಧೂಳಿಪಾಲ ಧರಿಸಿದ್ದ ಆಕರ್ಷಕವಾದ ಜಂಪ್‌ಸೂಟ್​ ಅನ್ನು ವಿನ್ಯಾಸಕಿ ನಮ್ರತಾ ಜೋಶಿಪುರ ವಿನ್ಯಾಸ ಮಾಡಿದ್ದಾರೆ. ಇಂತಹದ್ದೇ ದಿರಿಸನ್ನು ಕಳೆದ ವರ್ಷದ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ನಟಿ ಅಥಿಯಾ ಶೆಟ್ಟಿ ಪ್ರದರ್ಶಿಸಿದ್ದರು. ಈ ಉಡುಪಿನ ಬೆಲೆ 1.8 ಲಕ್ಷ ರೂಪಾಯಿ ಆಗಿದೆ. ಕ್ಯಾನೆಸ್​ ಫಿಲ್ಮ್​ ಫೆಸ್ಟ್​ನಲ್ಲಿ ಶೋಭಿತಾ ಮ್ಯಾಗ್ನಮ್ ಇಂಡಿಯಾ ಐಸ್ ಕ್ರೀಮ್ ಬ್ರ್ಯಾಂಡ್​ ಅನ್ನು ಪ್ರತಿನಿಧಿಸಿದರು.

ಪ್ರತಿ ವರ್ಷ ಕೇನ್ಸ್ ಚಲನಚಿತ್ರೋತ್ಸವವು ಸೆಲೆಬ್ರಿಟಿಗಳು, ಚಲನಚಿತ್ರ ನಿರ್ಮಾಪಕರು ಮತ್ತು ಸಿನಿಪ್ರಿಯರನ್ನು ಪಲೈಸ್ ಡೆಸ್ ಫೆಸ್ಟಿವಲ್ಸ್ ಎಟ್ ಡೆಸ್ ಕಾಂಗ್ರೆಸ್‌ನಲ್ಲಿ ಒಂದುಗೂಡಿಸುತ್ತದೆ. ಈ ವರ್ಷ ಐಶ್ವರ್ಯಾ ರೈ ಮತ್ತು ಅದಿತಿ ರಾವ್ ಹೈದರಿ, ಶೋಭಿತಾ ಧೂಳಿಪಾಲ, ಕಿಯಾರಾ ಅಡ್ವಾಣಿ, ಜಾಕ್ವೆಲಿನ್ ಫರ್ನಾಂಡಿಸ್ ಸೇರಿ ಭಾರತೀಯ ತಾರೆಯರು ಈ ಪ್ರತಿಷ್ಠಿತ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

ಈಗಾಗಲೇ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಮೆರುಗು ಹೆಚ್ಚಿಸಿದರು. ಬ್ಲ್ಯಾಕ್​, ವೈಟ್​, ಗೋಲ್ಡನ್​​ ಕಾಂಬಿನೆಶನ್​ನ ಗೌನ್‌ನಲ್ಲಿ ಐಶ್ವರ್ಯಾ ಮಿಂಚು ಹರಿಸಿದರು. ಕೈಗೆ ಪೆಟ್ಟಾಗಿದ್ದರೂ ಖ್ಯಾತಿ ನಟಿ ಐಶ್ವರ್ಯ ಬ್ಯಾಂಡೇಜ್​​ ಸುತ್ತಿಕೊಂಡೇ ರೆಡ್​ ಕಾರ್ಪೆಟ್​​ ಮೇಲೆ ತಮ್ಮ ಸೌಂದರ್ಯರಾಶಿ ಪ್ರದರ್ಶಿಸಿದರು. ಐಶ್ವರ್ಯಾ ರೈ ಮತ್ತು ಶೋಭಿತಾ ಧೂಳಿಪಾಲ ಸೇರಿ ಭಾರತೀಯ ತಾರೆಯರ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಅಭಿಮಾನಿಗಳು ಮನಗೆದ್ದಿರುವ ನಟಿಯರ ಬಗ್ಗೆ ಅದ್ಭುತವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಕೈಗೆ ಬ್ಯಾಂಡೇಜ್​​ ಸುತ್ತಿಕೊಂಡೇ ರೆಡ್​ ಕಾರ್ಪೆಟ್​​ ಮೇಲೆ ಐಶ್ವರ್ಯಾ ಮಿಂಚು: ರೈ ಆತ್ಮವಿಶ್ವಾಸಕ್ಕೆ ಜೈ ಎಂದ ಫ್ಯಾನ್ಸ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.