ETV Bharat / entertainment

'ಸಿಂಹರೂಪಿಣಿ' ಕಥೆ ಹೇಳಿದ ಕೆಜಿಎಫ್ ಖ್ಯಾತಿಯ ಕಿನ್ನಾಳ್‌ರಾಜ್: ಹೇಗಿದೆ ಸಿನಿಮಾ? - MOVIE REVIEW

ಅಂಕಿತಾಗೌಡ, ಯಶಸ್ವಿನಿ ಸುಬ್ಬೆಗೌಡ, ಖುಷಿ ಬಸ್ರೂರು, ಹರೀಶ್‌ ರಾಯ್, ಯಶ್‌ ಶೆಟ್ಟಿ, ದಿನೇಶ್‌ ಮಂಗಳೂರು, ಪುನೀತ್‌ ರುದ್ರನಾಗ್, ನೀನಾಸಂ ಅಶ್ವತ್ಥ್, ಸುಮನ್, ತಬಲನಾಣಿ ಸೇರಿದಂತೆ ಹಲವರು ಸೇರಿ ನಟಿಸಿರುವ 'ಸಿಂಹರೂಪಿಣಿ' ಚಿತ್ರ ಬಿಡುಗಡೆಯಾಗಿದೆ.

Sinharupini Movie Review
ಸಿಂಹರೂಪಿಣಿ ಚಿತ್ರದ ಪೋಸ್ಟರ್​ (Cinema Team)
author img

By ETV Bharat Karnataka Team

Published : Oct 18, 2024, 4:49 PM IST

ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾಗಳ ನಡುವೆ ಭಕ್ತಿ ಪ್ರಧಾನ ಚಿತ್ರಗಳು ಇತ್ತೀಚೆಗೆ ತೆರೆಗೆ ಬರುತ್ತಿರುವುದು ಬಹಳ ಕಡಿಮೆ. ಈ ಮಧ್ಯೆ 'ಸಿಂಹರೂಪಿಣಿ' ಎಂಬ ಟೈಟಲ್ ಇಟ್ಟುಕೊಂಡು ಚಿತ್ರವೊಂದು ಬಿಡುಗಡೆಯಾಗಿದೆ. ಕೆಜಿಎಫ್ ಚಿತ್ರದಲ್ಲಿ ತಾಯಿಯ ಹಾಡು ಬರೆದು ಪ್ರಖ್ಯಾತಿ ಹೊಂದಿದ್ದ ಗೀತ ರಚನೆಕಾರ ಕಿನ್ನಾಳ್ ರಾಜ್ ಈ ಹಾಡುಗಳನ್ನು ಬರೆಯುವ ಜೊತೆಗೆ ಚಿತ್ರದ ನಿರ್ದೇಶನಕ್ಕೂ ಕೈಹಾಕಿದ್ದಾರೆ.

ಈ ಚಿತ್ರದಲ್ಲಿ ದೇವಿಯು ಮಹಾಲಕ್ಷ್ಮೀ ರೂಪದಲ್ಲಿ ಮಾರಮ್ಮ ಏಕೆ ಆಗ್ತಾಳೆ ಎಂಬುದು ಒಂದು ಭಾಗವಾದರೆ, ರಾಕ್ಷಸರನ್ನು ಸಂಹಾರ ಮಾಡಲು ಪಾರ್ವತಿ ದೇವಿ ಏಳು ಅವತಾರಗಳಲ್ಲಿ ಬರುತ್ತಾಳೆ ಅನ್ನೋದು ಎರಡನೇ ಭಾಗ. ಕೊನೆಯ ಅವತಾರವೇ ಈ ಮಾರಮ್ಮ ದೇವಿ. ದುಷ್ಟರನ್ನು ಸಂಹಾರ ಮಾಡಿದರೆ, ನಂಬಿದ ಭಕ್ತರಿಗೆ ಅಭಯ ನೀಡುತ್ತಾಳೆ. ಭೂಮಿಗೆ ದೇವಾನುದೇವತೆಗಳು ಬರಲು ಕಾರಣವೂ ಇದೆ. ಅದೇ ರೀತಿ ಮಾರಮ್ಮ ಯರಪ್ಪನ ಹಳ್ಳಿಗೆ ಬರಲು ಕಾರಣವೇನು? ಅಲ್ಲಿನ ಜನರ ಸಂಸ್ಕೃತಿ, ಆಚಾರ ವಿಚಾರ ಇದೆಲ್ಲಾವನ್ನು 'ಸಿಂಹರೂಪಿಣಿ' ಚಿತ್ರದ ಮೂಲಕ ಹೇಳಲಾಗಿದೆ.

Sinharupini Movie Review
ಸಿಂಹರೂಪಿಣಿ ಚಿತ್ರದ ಪೋಸ್ಟರ್​ (Cinema Team)

ದೇವಿಗೆ ಏತಕ್ಕಾಗಿ ಕೋಣ ಬಲಿ ಕೊಡುತ್ತಾರೆ? ಭಕ್ತಿ ಆಧರಿತ ಸಿನಿಮಾದಲ್ಲಿ ಪವಾಡ, ಮಹಿಮೆಗಳು ಇರುವುದು ಸಹಜ. ಅದರಂತೆ ಇದರಲ್ಲೂ ಎಲ್ಲವನ್ನೂ ಸಂದರ್ಭಕ್ಕೆ ತಕ್ಕಂತೆ ತೋರಿಸಲಾಗಿದೆ. ಎಲ್ಲಿಯೂ ಅಸಹಜ ಎನ್ನುವಂತ ದೃಶ್ಯಗಳು ಇರದೇ, ಪ್ರೇಕ್ಷಕರಿಗೆ ಮಾರಮ್ಮನ ಮೇಲೆ ಇನ್ನಷ್ಟು ಭಕ್ತಿ ಹೆಚ್ಚಾಗುವಂತಹ ಅಂಶಗಳು ಇರುವುದು ಪ್ಲಸ್ ಪಾಯಿಂಟ್. ಇದರ ಜೊತೆಗೆ ಪ್ರೀತಿಯ ಸನ್ನಿವೇಶಗಳು ಇದ್ದರೂ, ಇಬ್ಬರನ್ನು ದೇವಿಯ ಭಕ್ತರೆಂದು ಬಿಂಬಿಸಲಾಗಿದೆ. ಊರ ಗೌಡ ದೇವಿಯ ವಿರುದ್ಧ ಸಂಚನ್ನು ರೂಪಿಸಲು ಹೋದಾಗ ಏನಾಗುತ್ತೆ? ಇದರಿಂದ ಕ್ಲೈಮಾಕ್ಸ್‌ದಲ್ಲಿ ದೇವಿ ಏನು ಮಾಡುತ್ತಾಳೆ? ಇವೆಲ್ಲವೂ ಅಚ್ಚುಕಟ್ಟಾಗಿ ಸೆರೆ ಹಿಡಿಯಲಾಗಿದೆ.

ಕಿನ್ನಾಳ್‌ರಾಜ್ ಅವರ ಶ್ರಮ ಪ್ರತಿಯೊಂದು ಸೀನ್‌ದಲ್ಲಿ ಕಂಡುಬರುತ್ತದೆ. ಆಕಾಶ್‌ಪರ್ವ ಸಂಗೀತದ ಎರಡು ಹಾಡುಗಳು ಗಮನ ಸೆಳೆಯುತ್ತವೆ. ಕಥೆ ಬರೆದು ನಿರ್ಮಾಣ ಮಾಡಿರುವ ಕೆ.ಎಂ.ನಂಜುಡೇಶ್ವರ, ಅಮ್ಮನ ಭಕ್ತನಾಗಿರುವುದರಿಂದ ದೇವಿಯ ಕುರಿತಂತೆ ಒಂದಷ್ಟು ತಿಳಿಯದ ವಿಷಯಗಳನ್ನು ಚಿತ್ರರೂಪದಲ್ಲಿ ತೋರಿಸಲು ಸಹಕಾರಿಯಾಗಿದ್ದಾರೆ.

ಅಂಕಿತಾ ಗೌಡ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದು, ಮಾರಮ್ಮ ದೇವಿ ಅವತಾರದಲ್ಲಿ ಯಶಸ್ವಿನಿ ಸುಬ್ಬೆಗೌಡ ಗಮನ‌ ಸೆಳೆಯುತ್ತಾರೆ. ಮೋಸಗಾರನಾಗಿ ಸುಮನ್, ದೇವಿಯ ಆರಾಧಕರಾಗಿ ಹರೀಶ್‌ ರೈ, ವಿಜಯ್‌ ಚೆಂಡೂರು, ತಬಲಾ ನಾಣಿ, ದಿವ್ಯಾ ಆಲೂರು, ಸಾಗರ್, ಗೌಡನಾಗಿ ದಿನೇಶ್‌ ಮಂಗಳೂರು, ದೇವಿಯ ಪತಿಯಾಗಿ ಯಶ್‌ಶೆಟ್ಟಿ, ತಂದೆಯಾಗಿ ನೀನಾಸಂ ಅಶ್ವಥ್, ಬಾಲದೇವಿಯಾಗಿ ಖುಷಿಬಸ್ರೂರು, ಖಳನಾಗಿ ಆರವ್‌ಲೋಹಿತ್ ಸೇರಿದಂತೆ 24 ಪೋಷಕ ಕಲಾವಿದರು ನಟಿಸಿದ್ದಾರೆ.

ಒಂದು ಹಾಡಿನಲ್ಲಿ ಪ್ಯಾನ್ ಇಂಡಿಯಾ ಸಂಗೀತ ಸಂಯೋಜಕ ರವಿಬಸ್ರೂರು ಕಾಣಿಸಿಕೊಂಡಿದ್ದು ಮತ್ತೊಂದು ವಿಶೇಷ. ಎಲ್ಲರೂ ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಿರಣ್‌ ಕುಮಾರ್ ಛಾಯಾಗ್ರಹಣ ಇದೆಲ್ಲದಕ್ಕೂ ಪೂರಕವಾಗಿದೆ. ಕೊನೆಗೆ ಭಾಗ-2 ಬರುತ್ತದೆ ಎಂಬ ಸುಳಿವುನೊಂದಿಗೆ ನೋಡುಗರಿಗೆ ಕುತೂಹಲ ಹುಟ್ಟಿಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.