ತಮ್ಮ ವಿಶಿಷ್ಟ ಕಂಠ ಹಾಗೂ ಗಾಯನದ ಮೂಲಕ ಕನ್ನಡ ಸಿನಿರಸಿಕರು, ಸಂಗೀತ ಪ್ರೇಮಿಗಳ ಮನ ಗೆದ್ದಿರುವ 'ಲೂಸಿಯಾ' ಖ್ಯಾತಿಯ ಗಾಯಕ ನವೀನ್ ಸಜ್ಜು ಅವರೀಗ ನಾಯಕ ನಟನಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ನಟನಾಗಿ ನವೀನ್ ಅವರ ಈ ಹೊಸ ಪಯಣಕ್ಕೆ ಕನ್ನಡ ಚಿತ್ರರಂಗದ ತಾರೆಯರು ಸಾಥ್ ಕೊಟ್ಟಿದ್ದಾರೆ.
ಹೊಸ ಕನಸಿಗೆ ನಾಮಕರಣ ಮಾಡಿದ್ದೇವೆ.
— Naveen Sajju (@naveen_sajju) July 26, 2024
ಇನ್ನು ಆಶೀರ್ವಾದ ಮಾಡುವ ಸರದಿ ನಿಮ್ಮದು.😍🙏 pic.twitter.com/qqIrUSCmTe
'ಲೋ ನವೀನ' ಎಂಬುದು ಗಾಯಕ ನವೀನ್ ಸಜ್ಜು ಅವರ ಚೊಚ್ಚಲ ಚಿತ್ರದ ಶೀರ್ಷಿಕೆ. ಗಾಯಕನ ನಟನಾ ಪಯಣಕ್ಕೆ ಕನ್ನಡ ಚಿತ್ರರಂಗ ಸಾಥ್ ಕೊಟ್ಟಿದೆ. ಸಿನಿಮಾದ ಟೈಟಲ್ ಅನ್ನು ಸ್ಯಾಂಡಲ್ವುಡ್ ಹಾಗೂ ಕಿರುತೆರೆಯ 100 ನಟ - ನಟಿಯರು ತಮ್ಮ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ನವೀನ್ ಸಜ್ಜು ಚೊಚ್ಚಲ ಸಿನಿಮಾಗೆ ಶುಭ ಕೋರಿದ್ದಾರೆ.
ನವೀನ್ ಸಜ್ಜು ಪೋಸ್ಟ್: ಚಿತ್ರದ ಗ್ಲಿಂಪ್ಸ್ ಒಂದನ್ನು ತಮ್ಮ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಹಂಚಿಕೊಂಡಿರುವ ನವೀನ್ ಸಜ್ಜು, ''ಹೊಸ ಕನಸಿಗೆ ನಾಮಕರಣ ಮಾಡಿದ್ದೇವೆ. ಇನ್ನು ಆಶೀರ್ವಾದ ಮಾಡುವ ಸರದಿ ನಿಮ್ಮದು'' ಎಂದು ಬರೆದುಕೊಂಡಿದ್ದಾರೆ.
'ಲೋ ನವೀನ' ಒಂದು ಹಳ್ಳಿ ಸೊಗಡಿನ ಚಿತ್ರ. ಸ್ವತಃ ನವೀನ್ ಸಜ್ಜು ಅವರೇ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಧನುರ್ದಾರಿ ಪವನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಮೂವರು ಸಿನಿಮಾಟೋಗ್ರಾಫರ್ ಗಳಿರುವುದು ವಿಶೇಷ. ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಹಾಗೂ ಪ್ರಸನ್ನ ಸಾಗರ ಅವರ ವಸ್ತ್ರ ವಿನ್ಯಾಸ ಚಿತ್ರಕ್ಕಿದೆ. ಎನ್.ಎಸ್ ನವೀನ್ ಸಜ್ಜು ಸ್ಟುಡಿಯೋ ಬ್ಯಾನರ್ ಅಡಿ ತಯಾರಾರಗುತ್ತಿರುವ ಸಿನಿಮಾಗೆ ಅನಿವಾಸಿ ಭಾರತೀಯರಾದ ವರ್ಜೀನಿಯಾ ನಿವಾಸಿ ಕೀರ್ತಿ ಸ್ವಾಮಿ ಬಂಡವಾಳ ಹೂಡುತ್ತಿದ್ದಾರೆ.
ಇದನ್ನೂ ಓದಿ: ಅನಧಿಕೃತವಾಗಿ ಸೆಟ್ ನಿರ್ಮಾಣ ಆರೋಪ: ಯಶ್ 'ಟಾಕ್ಸಿಕ್' ನಿರ್ಮಾಣ ಸಂಸ್ಥೆಗೆ ಹೈಕೋರ್ಟ್ ನೋಟಿಸ್ - Toxic Set Issue
ಮೈಸೂರು, ಮಂಡ್ಯ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಸಹ ನಟರು ಹಾಗೂ ತಂತ್ರಜ್ಞರ ಪಟ್ಟಿ ಅಂತಿಮಗೊಂಡಿದೆ. ಚಿತ್ರದ ನಾಯಕಿಯಾಗಿ ಹೊಸಬರನ್ನು ಈ ಚಿತ್ರದ ಮೂಲಕ ಚಂದನವನಕ್ಕೆ ಚಿತ್ರತಂಡ ಪರಿಚಯ ಮಾಡಲಿದೆ. ನವೀನ್ ಸಜ್ಜು ಮುಖ್ಯಪಾತ್ರವೊಂದರಲ್ಲಿ ನಟಿಸಿರುವ ಮ್ಯಾನ್ ಷನ್ ಹೌಸ್ ಮುತ್ತು ಚಿತ್ರವು ಬಿಡುಗಡೆಗೆ ಸಿದ್ಧಗೊಂಡಿರುವ ಹೊತ್ತಿನಲ್ಲೇ ಲೋ ನವೀನ ಚಿತ್ರ ಸೆಟ್ಟೇರಿದೆ. ಕಲರ್ಸ್ ಕನ್ನಡದ ಚುಕ್ಕಿ ತಾರೆ ಧಾರಾವಾಹಿಯಲ್ಲಿ ಮಾಗಡಿ ರೋಡ್ ಮಲ್ಲಿಕಾರ್ಜುನನಾಗಿ ತಮ್ಮ ನಟನಾ ಕೌಶಲ್ಯದಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಸಿಂಗರ್ ನವೀನ್ ಸಜ್ಜು ಬೆಳ್ಳಿ ತೆರೆಯ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇದನ್ನೂ ಓದಿ: ಶೂಟಿಂಗ್ ವೇಳೆ ಕಾರ್ ಆಕ್ಸಿಡೆಂಟ್: ಇಬ್ಬರು ನಟರು ಸೇರಿ ನಾಲ್ವರಿಗೆ ಗಾಯ - Actors Injured