ETV Bharat / entertainment

'ಸಾರಾಂಶ'ದ ನಶೆಯೋ ನಕಾಶೆಯೋ ಹಾಡಿಗೆ ಶೃತಿ ಹರಿಹರನ್ ನೃತ್ಯ - Shruti Hariharan

'ಸಾರಾಂಶ' ಸಿನಿಮಾದ ನಶೆಯೋ ನಕಾಶೆಯೋ ಹಾಡಿಗೆ ಶೃತಿ ಹರಿಹರನ್ ಹೆಜ್ಜೆ ಹಾಕಿದ್ದಾರೆ.

Saaransha movie  ಸಾರಾಂಶ ಸಿನಿಮಾ  ಶೃತಿ ಹರಿಹರನ್  ಸಖತ್ ಡ್ಯಾನ್ಸ್  Shruti Hariharan  Nasheya Nakashe song
'ಸಾರಾಂಶ' ಸಿನಿಮಾದ ನಶೆಯೋ ನಕಾಶೆಯೋ ಹಾಡಿಗೆ ಶೃತಿ ಹರಿಹರನ್ ಸಖತ್ ಡ್ಯಾನ್ಸ್
author img

By ETV Bharat Karnataka Team

Published : Jan 30, 2024, 8:07 AM IST

ಶೃತಿ ಹರಿಹರನ್ ಮುಖ್ಯ ಪಾತ್ರದಲ್ಲಿರುವ ಹಾಗೂ ಸೂರ್ಯ ವಸಿಷ್ಠ ನಿರ್ದೇಶನದ 'ಸಾರಾಂಶ' ಚಿತ್ರದ ಮತ್ತೊಂದು ವಿಡಿಯೋ ಹಾಡು ಬಿಡುಗಡೆಯಾಗಿದೆ. ಇದು ವಿಶೇಷ ಕಥಾ ಹಂದರದೊಳಗೆ ನಾನಾ ಬೆರಗುಗಳನ್ನು ಬಚ್ಚಿಟ್ಟುಕೊಂಡಿರುವ ಸಿನಿಮಾ ಎಂಬುದು ಚಿತ್ರತಂಡದವರ ಮಾತು. ಇದೀಗ ಈ ಹಾಡಿನ ಮೂಲಕ ಸಮ್ಮೋಹಕವಾಗಿ ಈ ವಿಚಾರಕ್ಕೆ ಬಲ ಬಂದಿದೆ. ಸೂರ್ಯ ವಸಿಷ್ಠ ಕನಸಿಗೆ ಸಂಗೀತ ನಿರ್ದೇಶಕ ಉದಿತ್ ಹರಿತಾಸ್ ಸಾಥ್ ಸಿಕ್ಕಿದೆ.

ನಶೆಯೋ ನಕಾಶೆಯೋ ಹಾಡು ಮಾಧುರಿ ಶೇಷಾದ್ರಿ ಅವರ ಕಂಠಸಿರಿಯಲ್ಲಿ ಮೂಡಿಬಂದಿದೆ. 'ಕಾಂತಾರ' ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ರಾಮ್ ಕುಮಾರ್ ನೃತ್ಯ ನಿರ್ದೇಶನವಿದೆ. ಈ ಹಾಡಿನ ಮೂಲಕ ಶೃತಿ ಹರಿಹರನ್ ಪಾತ್ರದ ಝಲಕ್ ಅನಾವರಣಗೊಂಡಿದೆ.

  • " class="align-text-top noRightClick twitterSection" data="">

ವಿಡಿಯೋ ಹಾಡು ಸಂಗೀತ, ಸಾಹಿತ್ಯದಾಚೆಗೂ ವಿಶೇಷತೆಗಳನ್ನೊಳಗೊಂಡಿದೆ. ಸಾಮಾನ್ಯವಾಗಿ ಒನ್ ಟೇಕ್ ಸಾಂಗ್ ಎಂಬ ಪರಿಕಲ್ಪನೆಯನ್ನು ದೃಶ್ಯಕ್ಕೆ ಒಗ್ಗಿಸುವುದು ವಿರಳ. ಅಂಥದ್ದೊಂದು ಅಪರೂಪದ ಚೌಕಟ್ಟಿನಲ್ಲಿ ಹಾಡು ರೂಪ ಪಡೆದಿದೆ. ಪ್ರತಿಯೊಬ್ಬರನ್ನೂ ಕಾಡುವ, ಪುಳಕಗೊಳಿಸುವ, ಸಾಹಸಗಳಿಗೆ ಒಡ್ಡಿಕೊಳ್ಳುವಂತೆ ಮಾಡುವ ಕನಸೆಂಬ ಮಾಯಾವಿ ಈ ಹಾಡಿನ ಹಿಂದಿರುವ ಮುಖ್ಯ ಮಾಯೆ.

ನಾವು ಸವಾಲು ಬಂದಾಗ ಕಳೆದುಕೊಳ್ಳುವ ಭಯದಿಂದ ಹಿಂದಡಿ ಇಡುವುದಿದೆ. ಆದರೆ, ಕನಸಿಗಾಗಿ ಮಾತ್ರ ಎಂತಹ ತ್ಯಾಗಕ್ಕಾದರೂ ಸಿದ್ಧವಾಗಿ ಬಿಡುತ್ತೇವೆ. ಯಾಕೆ ಹೀಗೆ ಎಂಬಂತೆ ನಮ್ಮೊಳಗೇ ನಾವು ಪ್ರಶ್ನೆಯಾಗುತ್ತೇವೆ, ಅಚ್ಚರಿಗೊಳ್ಳುತ್ತೇವೆ. ಇದಕ್ಕೆ ಪೂರಕವೆಂಬಂತೆ ಅಂತಹ ಎಲ್ಲ ಭಾವಗಳೂ ಎರಕ ಹೊಯ್ದಂತೆ ಈ ಹಾಡು ಮೂಡಿಬಂದಿದೆ.

ಚಿತ್ರದಲ್ಲಿ ದೀಪಕ್ ಸುಬ್ರಹ್ಮಣ್ಯ, ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರು ಅಭಿನಯಿಸಿದ್ದಾರೆ. ಸುಮೇಶ್ ವಿ.ಎಂ. ಮತ್ತು ಐಶ್ವರ್ಯಾ ಪ್ರತಾಪ್ ಕೂಡಾ ಹಾಡಿನ ಭಾಗವಾಗಿದ್ದಾರೆ. ರವಿ ಕಶ್ಯಪ್ ಮತ್ತು ಆರ್.ಕೆ.ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ಮೂಲಕ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನವಿದೆ.

ಇದನ್ನೂ ಓದಿ: ಅಭಿದಾಸ್ ನಟನೆಯ​​ 'ನಗುವಿನ ಹೂಗಳ ಮೇಲೆ' ಚಿತ್ರಕ್ಕೆ ನಿರ್ದೇಶಕ ಹರ್ಷ ಸಾಥ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.