ETV Bharat / entertainment

ಮಾಸ್ಟರ್ ಕ್ಲಾಸ್‌ಗೆ ಅಮೆರಿಕದಲ್ಲಿ ತರಬೇತಿ ಪಡೆಯುತ್ತಿರುವ ನಟ ಶ್ರೇಯರ್‌ ಮಂಜು - Shreyas Manju - SHREYAS MANJU

ಕನ್ನಡ ಚಿತ್ರರಂಗದ ಭರವಸೆಯ ನಟ ಶ್ರೇಯಸ್ ಮಂಜು ಚಿಕಾಗೋ ಮತ್ತು ನ್ಯೂಯಾರ್ಕ್‌ನ ವಿವಿಧ ನಟನಾ ಶಾಲೆಗಳಲ್ಲಿ ಮಾಸ್ಟರ್ ಕ್ಲಾಸ್ ತರಬೇತಿ ಪಡೆಯುತ್ತಿದ್ದಾರೆ.

Shreyas Manju
ನಟ ಶ್ರೇಯಸ್ ಮಂಜು (ETV Bharat)
author img

By ETV Bharat Entertainment Team

Published : Aug 2, 2024, 7:24 PM IST

ಶ್ರೇಯಸ್ ಮಂಜು, ಕನ್ನಡ ಚಿತ್ರರಂಗದ ಭರವಸೆಯ ನಟ. ಪಡ್ಡೆಹುಲಿ ಹಾಗೂ ರಾಣಾ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ಯುವ ನಟ. ತಮ್ಮ ಮೊದಲ ಸಿನಿಮಾಗಳಲ್ಲಿ ನಟನಾ ಸಾಮರ್ಥ್ಯ ಪ್ರದರ್ಶಿಸಿರುವ ಶ್ರೇಯಸ್, ಸದ್ಯ ವಿಷ್ಣು ಪ್ರಿಯ ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದಾರೆ. ಈ ಮಧ್ಯೆ ಹೆಸರಿಡದ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.

ಕಳೆದೆರಡು ವಾರಗಳಿಂದ ಅಮೆರಿಕದ ಚಿಕಾಗೋ ಮತ್ತು ನ್ಯೂಯಾರ್ಕ್‌ನ ವಿವಿಧ ನಟನಾ ಶಾಲೆಗಳಲ್ಲಿ ಮಾಸ್ಟರ್ ಕ್ಲಾಸ್‌ಗಾಗಿ ತರಬೇತಿ ಪಡೆಯುತ್ತಿದ್ದಾರೆ. ಕೆಲ ಪಾರ್ಕರ್ ಮತ್ತು ಹೊಸ ಆ್ಯಕ್ಷನ್ ತಂತ್ರಗಳ ಬಗ್ಗೆ ತರಬೇತಿ ಪಡೆಯುತ್ತಿರುವ ಶ್ರೇಯಸ್, ಅಲ್ಲಿನ ಹೊಸ ಜಾಗ, ಜನರ ಜೊತೆಗಿನ ಅನುಭವಗಳನ್ನು ತಮ್ಮ ಅಧಿಕೃತ ಸೊಷಿಯಲ್​​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್​ಸ್ಟಾದಲ್ಲಿ ಶೇರ್ ಮಾಡಿರುವ ಸ್ಟೈಲಿಶ್​​ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಮಾಸ್ಟರ್ ಕ್ಲಾಸ್ ತರಬೇತಿ ಕುರಿತು ಮಾತನಾಡಿರುವ ಶ್ರೇಯಸ್ ಮಂಜು, ಹೊಸ ವ್ಯಕ್ತಿಗಳ ಭೇಟಿ, ಅವರ ಜೊತೆಗಿನ ಚರ್ಚೆಗಳಿಂದ ಹೊಸ ಉತ್ಸಾಹ ಬಂದಿದೆ. ಚಿತ್ರರಂಗದಲ್ಲಿ ದಿನೇ ದಿನೇ ಹೊಸತನದ ಆವಿಷ್ಕಾರವಾಗುತ್ತಿದೆ. ಕಲಾವಿದರಾಗಿ ನಾವೂ ಕೂಡ ಹೊಸತನವನ್ನು ಕಲಿಯಬೇಕಿದೆ. ಆ ನಿಟ್ಟಿನಲ್ಲಿ ಬಹಳ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ವಿಡಿ 12' ರಿಲೀಸ್​ ಡೇಟ್​​, ಫಸ್ಟ್​​ ಲುಕ್​​ ರಿವೀಲ್​​: ದೇವರಕೊಂಡ ಮೊದಲ ನೋಟ 'ಬೆಂಕಿ' ಎಂದ ರಶ್ಮಿಕಾ - Rashmika Mandanna On VD12 Poster

ಎಸ್.ನಾರಾಯಣ್ ನಿರ್ದೇಶನದಲ್ಲಿ ದುನಿಯಾ ವಿಜಯ್ ಮತ್ತು ಶ್ರೇಯಸ್ ಮಂಜು ಕಾಂಬಿನೇಶನ್​​ನ ಚಿತ್ರದ ಕೆಲಸವೂ ಪ್ರಗತಿಯಲ್ಲಿದೆ. ಇದರೊಂದಿಗೆ ವಿಷ್ಣು ಪ್ರಿಯಾ ಚಿತ್ರ ಬಿಡುಗಡೆ ಆದ್ಮೇಲೆ ಈ ಹೊಸ ಸಿನಿಮಾ ಅನೌನ್ಸ್‌ಗೆ​ ಶ್ರೇಯಸ್ ಮಂಜು ಸಿದ್ಧತೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.