ETV Bharat / entertainment

'ಭೈರತಿ ರಣಗಲ್' ಜಾಗಕ್ಕೆ 'ಭೀಮ'ನ ಎಂಟ್ರಿ:‌ ಹ್ಯಾಟ್ರಿಕ್ ಹೀರೋನ ಸಿನಿಮಾ ಮುಂದೂಡಿಕೆ - Bhairathi Ranagal Postponed - BHAIRATHI RANAGAL POSTPONED

ಆಗಸ್ಟ್ 15ಕ್ಕೆ ತೆರೆಕಾಣಬೇಕಿದ್ದ ಶಿವರಾಜ್​ಕುಮಾರ್ ಅಭಿನಯದ 'ಭೈರತಿ ರಣಗಲ್' ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದೆ ಎಂದು ಹೇಳಲಾಗಿದ್ದು, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

Bhairathi Ranagal postponed
'ಭೈರತಿ ರಣಗಲ್' ತಂಡ, ಸಿನಿಮಾ ಮುಂದೂಡಿಕೆ ಸಾಧ್ಯತೆ (ETV Bharat)
author img

By ETV Bharat Karnataka Team

Published : Jun 19, 2024, 12:47 PM IST

'ಭೈರತಿ ರಣಗಲ್', ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಚಿತ್ರ. ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​​​ ಭೈರತಿ ರಣಗಲ್ ಆಗಿ ಬೆಳ್ಳಿ ತೆರೆ ಮೇಲೆ ಯಾವ ರೀತಿ ಕಾಣಿಸಿಕೊಳ್ಳುತ್ತಾರೆ ಅನ್ನೋ ಕುತೂಹಲ ಹುಟ್ಟಿಸಿರೋ ಚಿತ್ರ. 'ಮಫ್ತಿ' ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಪೋಸ್ಟರ್​ನಿಂದಲೇ ಸಖತ್​​ ಕ್ರೇಜ್ ಕ್ರಿಯೇಟ್​ ಮಾಡಿದೆ. ಈ ಹಿಂದೆ, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅನೌನ್ಸ್​​​ ಮಾಡಿತ್ತು. ಆದರೆ ಭೈರತಿ ರಣಗಲ್ ಆಗಸ್ಟ್​​ಗೆ ಬಿಡುಗಡೆಯಾಗುತ್ತಿಲ್ಲ.‌ ಆ ಜಾಗಕ್ಕೆ ದುನಿಯಾ ವಿಜಯ್ ಅಭಿನಯಿಸಿ,‌ ನಿರ್ದೇಶಿಸುತ್ತಿರುವ 'ಭೀಮ' ಚಿತ್ರ ಬರುತ್ತಿದೆ.

Bheema Poster
ಭೀಮ ಪೋಸ್ಟರ್ (ETV Bharat)

'ಭೈರತಿ ರಣಗಲ್' ಚಿತ್ರದಲ್ಲಿ ಶಿವರಾಜ್​​​ಕುಮಾರ್ ಜೊತೆ‌ ರುಕ್ಮಿಣಿ ವಸಂತ್‍, ರಾಹುಲ್ ಬೋಸ್‍, ಅವಿನಾಶ್‍ , ದೇವರಾಜ್‍, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ ಸೇರಿದಂತೆ ಮುಂತಾದವರು ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ.

Bheema Poster
ಭೀಮ ಪೋಸ್ಟರ್ (ETV Bharat)

ಈ ಬಹುನಿರೀಕ್ಷಿತ ಚಿತ್ರವನ್ನು ನಿರ್ಮಾಪಕಿ ಗೀತಾ ಶಿವರಾಜ್​​ಕುಮಾರ್ ಆಗಸ್ಟ್ 15 ರಂದು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು‌. ಕಾರಣ, ಆಗಸ್ಟ್​​ನಲ್ಲಿ ಸಾಲುಸಾಲು ರಜೆಗಳಿವೆ. ಸಾಮಾನ್ಯವಾಗಿ ಸತತವಾಗಿ ರಜೆ ಸಿಕ್ಕರೆ, ಜನ ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ದೃಷ್ಟಿಯಿಂದ ಆಗಸ್ಟ್ 15 ರಂದು ಚಿತ್ರವನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದರು. ಆದ್ರೀಗ ಭೈರತಿ ರಣಗಲ್ ಆಗಸ್ಟ್ 15ರಂದು ಬಿಡುಗಡೆ ಆಗುತ್ತಿಲ್ಲ. ಕಾರಣ, ಶಿವಣ್ಣ ಪತ್ನಿ ಗೀತಾ ಪರ ಚುನಾವಣಾ ಪ್ರಚಾರಕ್ಕೆ ಹೋದ ಕಾರಣ ಚಿತ್ರೀಕರಣ ಬಾಕಿ ಉಳಿದಿದೆ. ಈ ಕಾರಣಕ್ಕೆ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ‌. ಈ ವಿಚಾರ ಶಿವಣ್ಣನ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಮುಂದಿನ ಅಧಿಕೃತ ದಿನಾಂಕವನ್ನು ಚಿತ್ರತಂಡ ಇನ್ನಷ್ಟೇ ಘೋಷಿಸಬೇಕಿದೆ.

Bhairathi Ranagal poster
ಭೈರತಿ ರಣಗಲ್ ಪೋಸ್ಟರ್ (ETV Bharat)

ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ಅಭಿನಯದ ಮಾಫಿಯಾ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ - Mafia Movie Release Date Fix

ಇನ್ನೂ, ಭೀಮ ಸಿನಿಮಾ ಸೆಟ್ಟೇರಿದಾಗಿನಿಂದಲೂ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿದೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರೋ ಭೀಮ ಚಿತ್ರ ಸಾಕಷ್ಟು ವಿಚಾರಗಳಿಂದ ಗಮನ ಸೆಳೆಯುತ್ತಿದೆ. ಸಲಗ ಚಿತ್ರದ ಬಳಿಕ ದುನಿಯಾ ವಿಜಯ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಮಾಸ್ ಕಮರ್ಷಿಯಲ್ ಎಂಟರ್​ಟೈನರ್​​​ ಸಿನಿಮಾ. ಸಲಗದಂತಹ ಬ್ಲಾಕ್ ಬಸ್ಟರ್ ಕೊಟ್ಟ ಬಳಿಕ ದುನಿಯಾ ವಿಜಯ್ ಮತ್ತೆ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಲೀಡ್ ರೋಲ್​​ ಪ್ಲೇ ಮಾಡಿರೋ ಸಿನಿಮಾ.

ಇದನ್ನೂ ಓದಿ: ಪುಷ್ಪ 2 ರಿಲೀಸ್​ ಡೇಟ್ ಮುಂದೂಡಿಕೆ: ಕಾನೂನು ಕ್ರಮದ ಎಚ್ಚರಿಕೆ ನೀಡಿದ ಅಭಿಮಾನಿ - Frustrated over Pushpa 2 Delay

ಪ್ರಚಂಡ ಪ್ರತಿಭಾವಂತರ ದಂಡು ಕಟ್ಟಿಕೊಂಡು ವಿಜಯ್ ಈ ಬಾರಿ ಮತ್ತೊಂದು ಔಟ್ ಅಂಡ್ ಔಟ್ ಎಂಟರ್​ಟೈನ್ಮೆಂಟ್​​​ ಪ್ಯಾಕೇಜ್ ಮಾಡಿದ್ದಾರೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸಿರೋ ಈ ಚಿತ್ರಕ್ಕೆ ಶಿವಸೇನಾ ಕ್ಯಾಮರಾವರ್ಕ್ ಇದೆ. ಚಿತ್ರತಂಡ ಈಗಾಗಲೇ ಶೂಟಿಂಗ್ ಮುಗಿಸಿರೋ ಕಾರಣ ಆಗಸ್ಟ್ 15ರಂದು ಬಿಡುಗಡೆ ಆಗುತ್ತಿದೆ ಎಂದು ಹೇಳಲಾಗಿದೆ. ಇದು ದುನಿಯಾ ವಿಜಯ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಎಲ್ಲದಕ್ಕೂ ಅಧಿಕೃತ ಘೋಷಣೆ ಆಗಬೇಕಿದೆ. ಭೈರತಿ ರಣಗಲ್ ಜಾಗಕ್ಕೆ ಭೀಮನ ಎಂಟ್ರಿ‌ಯಾಗಿದ್ದು, ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.