ETV Bharat / entertainment

ಶೈನ್ ಶೆಟ್ಟಿ & ಅಂಕಿತ ಅಮರ್ 'ಜಸ್ಟ್ ಮ್ಯಾರೀಡ್'! - Just Married - JUST MARRIED

ಸಿ.ಆರ್.ಬಾಬಿ ನಿರ್ದೇಶನದ 'ಜಸ್ಟ್ ಮ್ಯಾರೀಡ್' ಸಿನಿಮಾದ ಶೂಟಿಂಗ್ ಕೆಲಸ ಮುಗಿದಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ.

ಜಸ್ಟ್ ಮ್ಯಾರೀಡ್
ಜಸ್ಟ್ ಮ್ಯಾರೀಡ್
author img

By ETV Bharat Karnataka Team

Published : Apr 22, 2024, 2:45 PM IST

ಬಿಗ್ ಬಾಸ್ ಜನಪ್ರಿಯತೆಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಟನೆಯ 'ಜಸ್ಟ್ ಮ್ಯಾರೀಡ್' ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿ ಜನಮನ ಗೆದ್ದಿರುವ ಅಜನೀಶ್ ಲೋಕನಾಥ್​ ಈ ಮೂಲಕ ನಿರ್ಮಾಪಕರಾಗಿದ್ದಾರೆ. ಇಷ್ಟು ದಿನ ಸಂಗೀತ ಕ್ಷೇತ್ರದಲ್ಲಿ ಹೆಸರು‌ ಮಾಡಿದ್ದ ಸಿ.ಆರ್​.ಬಾಬಿ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.

ಚಿತ್ರದಲ್ಲಿ 6 ಹಾಡುಗಳಿವೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಈ ಪೈಕಿ ಪ್ರಮೋದ್ ಮರವಂತೆ ಬರೆದು, ವಿಜಯ್ ಪ್ರಕಾಶ್ ಹಾಡಿರುವ 'ಅಭಿಮಾನಿಯಾಗಿ ಹೋದೆ' ಹಾಡು ಇತ್ತೀಚಿಗೆ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿದೆ. ಸಿ.ಆರ್.ಬಾಬಿ ಹಾಗೂ ಧನಂಜಯ್ ರಂಜನ್ ಚಿತ್ರಕಥೆ ಬರೆದಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ‌ ನೀಡಿದ್ದಾರೆ.

ಜಸ್ಟ್ ಮ್ಯಾರೀಡ್
ಜಸ್ಟ್ ಮ್ಯಾರೀಡ್

ದೇವರಾಜ್​, ಅಚ್ಯುತಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ ಅನಿಲ್, ಕುಮುದಾ, ಜಯರಾಮ್, ವೇದಿಕಾ ಕಾರ್ಕಳ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಈ ಚಿತ್ರಕ್ಕೆ ಪಿ.ಜಿ. ಛಾಯಾಗ್ರಹಣ, ಶ್ರೀಕಾಂತ್​​ ಮತ್ತು ಅಶಿಕ್​ ಕುಸುಗೊಳ್ಳಿ (ಗಣೇಶ ಸಾಂಗ್) ಸಂಕಲನ, ಅಮರ್ ಕಲಾ ನಿರ್ದೇಶನ, ವಿಕ್ರಮ್ ಮೋರ್, ಸಾಹಸ ನಿರ್ದೇಶನ ಹಾಗೂ ಬಾಬಾ ಭಾಸ್ಕರ್, ಶಾಂತಿ ಅರವಿಂದ್ ಅವರ ನೃತ್ಯ ನಿರ್ದೇಶನವಿದೆ. ಎಲ್ಲಾ ಹಾಡುಗಳನ್ನು ಪ್ರಮೋದ್ ಮರವಂತೆ ಮತ್ತು ಧನಂಜಯ್ ಬರೆದಿದ್ದಾರೆ.

ಬೆಂಗಳೂರು, ಮೈಸೂರು ಮತ್ತು ಚಿಕ್ಕಮಗಳೂರಿನಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಶೂಟಿಂಗ್ ಕಂಪ್ಲೀಟ್ ಮಾಡಿರುವ 'ಜಸ್ಟ್ ಮ್ಯಾರೀಡ್' ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ಇದನ್ನೂ ಓದಿ: ’ವೀರ ಮದಕರಿಯ ಕಿಚ್ಚನ ಮಗಳು‘ ಈಗ ನಾಯಕಿ: ಹೀರೋ ಯಾರು? ಸಿನಿಮಾ ಯಾವುದು ಗೊತ್ತಾ? - New heroine

ETV Bharat Logo

Copyright © 2024 Ushodaya Enterprises Pvt. Ltd., All Rights Reserved.