ETV Bharat / entertainment

'ನಮಗೆ ಮಗಳ ಸಂತೋಷವೇ ಮುಖ್ಯ': ಸೋನಾಕ್ಷಿ ಅಂತರ್​​ಧರ್ಮೀಯ ಮದುವೆ ಬಗ್ಗೆ ಶತ್ರುಘ್ನ ಸಿನ್ಹಾ ಮನದಾಳ - Shatrughan Sinha - SHATRUGHAN SINHA

ಮಗಳ ಮದುವೆ ಬಗ್ಗೆ ನಟ - ರಾಜಕಾರಣಿ ಶತ್ರುಘ್ನ ಸಿನ್ಹಾ ಮಾತನಾಡಿದ್ದಾರೆ.

Shatrughan, Zaheer - Sonakshi
ಶತ್ರುಘ್ನ ಸಿನ್ಹಾ, ಜಹೀರ್-ಸೋನಾಕ್ಷಿ (IANS)
author img

By ETV Bharat Karnataka Team

Published : Jul 24, 2024, 8:51 PM IST

ಏಳು ವರ್ಷಗಳಿಂದ ಡೇಟಿಂಗ್​​ನಲ್ಲಿದ್ದ ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಜಹೀರ್ ಇಕ್ಬಾಲ್ ಜೂನ್ 23ರಂದು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಅಂತರ್​​​ಧರ್ಮೀಯ ಮದುವೆ ಹಿನ್ನೆಲೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಸೋಷಿಯಲ್​ ಮೀಡಿಯಾಗಳಲ್ಲಿ ಮಾದರಿ ದಂಪತಿಯಂತೆ ಕಂಗೊಳಿಸುತ್ತಿದ್ದಾರೆ ಈ ಪ್ರೇಮಪಕ್ಷಿಗಳು.

ವಿಭಿನ್ನ ಧಾರ್ಮಿಕ ಆಚರಣೆಗಳ ಹಿನ್ನೆಲೆ, ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿನ್ಹಾ ದಂಪತಿ ತಮ್ಮ ಮಗಳು ಜಹೀರ್ ಅವರನ್ನು ಮದುವೆಯಾಗುವ ನಿರ್ಧಾರವನ್ನು ಆರಂಭದಲ್ಲಿ ಸಂಪೂರ್ಣವಾಗಿ ಬೆಂಬಲಿಸಿರಲಿಲ್ಲ ಎಂಬ ವದಂತಿಗಳು ಈ ಹಿಂದೆ ಹರಡಿದ್ದವು. ಅದೇನೇ ಇದ್ದರೂ ದಂಪತಿಗಳ ಮತ್ತು ಪಾಪರಾಜಿಗಳ ಸೋಷಿಯಲ್​​​ ಮೀಡಿಯಾ ಪೋಸ್ಟ್, ಅವರ ಕುಟುಂಬದಲ್ಲಿನ ಪ್ರೀತಿಯನ್ನು ಎತ್ತಿ ತೋರಿಸಿದೆ. ಇದೀಗ, ಸೋನಾಕ್ಷಿ ಮತ್ತು ಜಹೀರ್‌ ಮದುವೆಗೆ ತಮ್ಮ ಬಲವಾದ ಬೆಂಬಲವನ್ನು ಬಹಿರಂಗವಾಗಿ ದೃಢೀಕರಿಸಲು ಮಧುಮಗಳ ತಂದೆ, ನಟ - ರಾಜಕಾರಣಿ ಶತ್ರುಘ್ನ ಅವರು ಮುಂದೆ ಬಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಶತ್ರುಘ್ನ ಸಿನ್ಹಾ, ಈ ಮದುವೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಸೋನಾಕ್ಷಿ ಮತ್ತು ಜಹೀರ್ ಜೋಡಿಗೆ "ಮೇಡ್ ಫಾರ್ ಈಚ್ ಅದರ್" ಎಂದು ಉಲ್ಲೇಖಿಸಿದ್ದಾರೆ.

ಜನರು ಏನೇನೋ ಹೇಳಲು ಪ್ರಯತ್ನಿಸಿರಬಹುದು. ಆದರೆ ನಮಗೆ, ನಮ್ಮ ಮಕ್ಕಳ ಸಂತೋಷ ಮುಖ್ಯ, ವಿಶೇಷವಾಗಿ ನಮ್ಮ ಮಗಳ ಸಂತೋಷ. ಅವಳು ಸಂತೋಷವಾಗಿದ್ದಾಳೆ, ಸಂತೋಷವಾಗೇ ಮುಂದುವರಿಯುತ್ತಾಳೆ ಎಂದು ನಮಗನಿಸಿದೆ. ಅಷ್ಟಕ್ಕೂ ಆಕೆ, ಅಸಂವಿಧಾನಿಕ ಅಥವಾ ಕಾನೂನಿಗೆ ವಿರುದ್ಧವಾಗಿ ಏನನ್ನೂ ಮಾಡಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಸೋನಾಕ್ಷಿ ಮದುವೆಯಾಗಲು ತಂದೆ ಶತ್ರುಘ್ನ​​ ಸಿನ್ಹಾರ ಬಳಿ ಜಹೀರ್ ಇಕ್ಬಾಲ್ ಅನುಮತಿ ಕೇಳಿದ್ದು ಹೀಗೆ! - Zaheer on Shatrughan Sinha

ಪೋಷಕರ ಜವಾಬ್ದಾರಿಗಳ ಬಗ್ಗೆ ಮಾತನಾಡುತ್ತಾ, ಮಗಳಿಗೆ ಬೆಂಬಲದ ಮೂಲವಾಗಿರುವುದರ ಮಹತ್ವವನ್ನು ಒತ್ತಿಹೇಳಿದರು. "ನೀವು ನನ್ನ ಶಕ್ತಿಯ ಆಧಾರ ಸ್ತಂಭ" ಎಂದು ಸೋನಾಕ್ಷಿ ನನಗೆ ಆಗಾಗ್ಗೆ ಹೇಳುತ್ತಾಳೆ. ಹಾಗಾಗಿ ಅದನ್ನು ಉಳಿಸಿಕೊಳ್ಳುವುದು ಮತ್ತು ಅವಳ ನಿರೀಕ್ಷೆಗಳಿಗೆ ತಕ್ಕಂತೆ ಇರುವುದು ನನ್ನ ಕರ್ತವ್ಯ. ಅವಳ ನಿರ್ಧಾರದಲ್ಲಿ, ಅವಳ ಸಂತೋಷವೇ ನಮ್ಮ ಸಂತೋಷವಾಗಿತ್ತು" ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.