ETV Bharat / entertainment

'ಶೈತಾನ್' ಟೀಸರ್ ರಿಲೀಸ್​​: ಸೂಪರ್ ನ್ಯಾಚುರಲ್ ಥ್ರಿಲ್ಲರ್ ಸಿನಿಮಾ ವೀಕ್ಷಿಸುವ ಕಾತುರ - ಆರ್ ಮಾಧವನ್

Shaitaan Teaser: ಅಜಯ್ ದೇವ್​ಗನ್, ಜ್ಯೋತಿಕಾ ಮತ್ತು ಆರ್ ಮಾಧವನ್ ನಟನೆಯ 'ಶೈತಾನ್' ಟೀಸರ್ ರಿಲಿಸ್​ ಆಗಿದೆ.

Shaitaan Teaser
ಶೈತಾನ್​ ಟೀಸರ್
author img

By ETV Bharat Karnataka Team

Published : Jan 25, 2024, 5:51 PM IST

ಸೂಪರ್​ ಸ್ಟಾರ್​ಗಳಾದ ಅಜಯ್ ದೇವಗನ್, ಜ್ಯೋತಿಕಾ ಮತ್ತು ಆರ್ ಮಾಧವನ್ ಮುಖ್ಯಭೂಮಿಕೆಯ ಸೂಪರ್ ನ್ಯಾಚುರಲ್ ಥ್ರಿಲ್ಲರ್ ಸಿನಿಮಾ 'ಶೈತಾನ್'ನ ಟೀಸರ್ ಅನಾವರಣಗೊಂಡಿದೆ. ಒಂದೂವರೆ ನಿಮಿಷದ ಟೀಸರ್ ಮೈಜುಂ ಎನಿಸುವ ವಾಯ್ಸ್ ಓವರ್, ಗ್ರಾಫಿಕ್ಸ್ ಒಳಗೊಂಡಿದೆ. ಈ ದನಿ ಕೇಳುತ್ತಾ ಕುಳಿತರೆ ಒಂದು ಕ್ಷಣಕ್ಕೆ ಎಂಥವರೂ ಕೂಡ ಭಯಭೀತರಾಗುತ್ತಾರೆ.

ಟೀಸರ್ ವೀಕ್ಷಿಸಿದ ಸಿನಿಪ್ರಿಯರು ಸಿನಿಮಾ ನೋಡುವ ಕಾತುರ ವ್ಯಕ್ತಪಡಿಸುತ್ತಿದ್ದಾರೆ. ಆರ್​. ಮಾಧವನ್ ವಿರೋಧಿ 'ಶೈತಾನ್' (ದುಷ್ಟ) ಪಾತ್ರವನ್ನು ನಿರ್ವಹಿಸಿದರೆ, ಅಜಯ್ ಮತ್ತು ಜ್ಯೋತಿಕಾ ದುಷ್ಟ ಕಾಟದಲ್ಲಿ ಸಿಲುಕಿಕೊಂಡಿರುವ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸೂಪರ್ ಸ್ಟಾರ್​​ಗಳ ದಿ ಮೋಸ್ಟ್ ಎಕ್ಸ್​​ಪೆಕ್ಟೆಡ್ 'ಶೈತಾನ್' 2024ರ ಮಾರ್ಚ್ 8ರಂದು ಚಿತ್ರಮಂದಿರ ಪ್ರವೇಶಿಸಲಿದೆ.

  • " class="align-text-top noRightClick twitterSection" data="">

ಸಂಪೂರ್ಣ ಟೀಸರ್ ಗ್ರಾಫಿಕ್ಸ್ ಒಳಗೊಂಡಿದೆ. ಮಾಧವನ್ ಧ್ವನಿ ಮೂಲಕ ಟೀಸರ್ ಆರಂಭಗೊಳ್ಳುತ್ತದೆ. ಮಾಧವನ್​ ಪಾತ್ರವು ಜನರನ್ನು ಹೇಗೆ ಮೋಸಗೊಳಿಸುತ್ತದೆ ಎಂಬುದನ್ನು ವಿವರಿಸುತ್ತದೆ. "ಜಗತ್ತು ಕಿವುಡವಾಗಿದೆ ಎಂದು ಅವರು ಹೇಳುತ್ತಾರೆ. ಆದರೂ ಅವರು ನನ್ನ ಪ್ರತಿ ಮಾತುಗಳನ್ನು ಅನುಸರಿಸುತ್ತಾರೆ. ನಾನು ಕತ್ತಲೆ ಮತ್ತು ಪ್ರಲೋಭನೆ, ಅಮಂಗಳ ಪ್ರಾರ್ಥನೆಗಳಿಂದ ನಿಷೇಧಿತ ಮಂತ್ರಗಳವರೆಗೆ, ನಾನು ನರಕದ ಒಂಭತ್ತು ವಲಯಗಳನ್ನು ಆಳುತ್ತೇನೆ" ಎಂಬ ಹಿನ್ನೆಲೆ ದನಿ ಕೇಳುಗರನ್ನು ಭಯಭೀತರನ್ನಾಗಿಸುವಂತಿದೆ.

ಮಾಟ ಮಂತ್ರಕ್ಕೆ ಬಳಸುವಂತಹ ಗೊಂಬೆಗಳು ಮತ್ತು ಇತರೆ ಸಾಮಗ್ರಿಗಳನ್ನು ಸಹ ಟೀಸರ್​ನಲ್ಲಿ ತೋರಿಸಲಾಗಿದೆ. ಟೀಸರ್​ ನೋಡಿದ್ರೆ ಸಿನಿಮಾ 'ಡಾರ್ಕ್ ಮ್ಯಾಜಿಕ್‌' ಸುತ್ತ ಸುತ್ತುತ್ತದೆ ಎಂಬುದನ್ನು ಸೂಚಿಸಿದೆ. ಟೀಸರ್‌ನ ಕೊನೆಯಲ್ಲಿ, ಮಾಧವನ್‌ನ ಅವರ ಭಯಂಕರ ನಗುವನ್ನು ನೋಡಿದ ಅಜಯ್ ಮತ್ತು ಜ್ಯೋತಿಕಾ ಅವರು ಭಯಭೀತರಾಗೋ ದೃಶ್ಯಗಳಿವೆ. ಪ್ರಮುಖ ಪಾತ್ರಧಾರಿಗಳು ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಟೀಸರ್ ಹಂಚಿಕೊಳ್ಳುವಾಗ ಸಿನಿಮಾದ ಕೆಲ ಸುಳಿವು ಬಿಟ್ಟುಕೊಟ್ಟರಾದರೂ, ಚಿತ್ರ ತಯಾರಕರು ಕಥೆಯನ್ನು ಮುಚ್ಚಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: 'ಕಬ್ಜ ಸಿನಿಮಾದಿಂದ ಸರ್ಕಾರಕ್ಕೆ 20 ಕೋಟಿ ರೂ. ಟ್ಯಾಕ್ಸ್ ಕಟ್ಟಿದ್ದೇನೆ': ನಿರ್ದೇಶಕ ಆರ್​​ ಚಂದ್ರು

ಅಜಯ್ ದೇವ್​ಗನ್​ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಟೀಸರ್ ಶೇರ್ ಮಾಡಿದ್ದು, "ಅವರು ನಿಮ್ಮನ್ನು ಕೇಳುತ್ತಾರೆ. ಇದು ಆಟ, ನೀವು ಆಡುತ್ತೀರೇ? ಆದರೆ ಪ್ರಲೋಭನೆಗೆ ಒಳಗಾಗಬೇಡಿ'' ಎಂದು ಬರೆದುಕೊಂಡಿದ್ದಾರೆ. ಜ್ಯೋತಿಕಾ ಅವರು, "ಆಟ ಮತ್ತು ನಿಯಮಗಳು ಸಹ ಅವನದ್ದೇ. ಅದೇ ರೀತಿ ನಿಮ್ಮನ್ನು ಪ್ರಚೋದಿಸುತ್ತಾನೆ'' ಎಂದು ಬರೆದುಕೊಂಡಿದ್ದಾರೆ. ಮತ್ತೊಂದೆಡೆ ಮಾಧವನ್, "ಏನೇ ಆಗಲಿ, ಅವನಿಂದ ಪ್ರಲೋಭನೆಗೆ ಒಳಗಾಗಬೇಡ'' ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ.

ಇದನ್ನೂ ಓದಿ: 9 ವರ್ಷಗಳ ಬಳಿಕ ಅಸ್ಸಾಂನಲ್ಲಿ ಕೋಣ ಮತ್ತು ಪಕ್ಷಿಗಳ ಕಾಳಗ: ಫೋಟೋಗಳಿಲ್ಲಿವೆ

ಬಹು ಸಮಯದ ನಂತರ ಜ್ಯೋತಿಕಾ 'ಶೈತಾನ್' ಮೂಲಕ ಬಾಲಿವುಡ್​ಗೆ ಮರಳಲು ಸಜ್ಜಾಗಿದ್ದಾರೆ. ಅಜಯ್ ದೇವಗನ್ ಫಿಲ್ಮ್ಸ್, ಪನೋರಮಾ ಸ್ಟುಡಿಯೋಸ್ ಇಂಟರ್​ನ್ಯಾಷನಲ್ ಮತ್ತು ಜಿಯೋ ಸ್ಟುಡಿಯೋಸ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಅಜಯ್ ದೇವ್​ಗನ್​​ ಕೊನೆ ಬಾರಿಗೆ ತಮಿಳು ಚಿತ್ರ 'ಕೈಥಿ'ಯ ರೀಮೇಕ್​ ಭೋಲಾದಲ್ಲಿ ಕಾಣಿಸಿಕೊಂಡರು. ಶೀಘ್ರದಲ್ಲೇ ಮೈದಾನ್, ಸಿಂಗಮ್ ಎಗೈನ್, ರೈಡ್ 2 ಮತ್ತು ಔರೋನ್ ಮೇ ಕಹಾ ದಮ್ ಥಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.