ETV Bharat / entertainment

ಮುದ್ದಿನ ಮಡದಿ ಜೊತೆಗಿನ ರೋಮ್ಯಾಂಟಿಕ್​ ಡೇಟ್ ​ವೇಳೆ ಪ್ಯಾಪಾರಾಜಿಗಳ ಮುಂದೆ ತಾಳ್ಮೆ ಕಳೆದುಕೊಂಡ ನಟ ಶಾಹೀದ್​ ಕಪೂರ್​​ - Shahid Loses Cool at Paparazzi - SHAHID LOSES COOL AT PAPARAZZI

ಚಿತ್ರೋದ್ಯಮದಲ್ಲಿ ಸಖತ್​ ಫ್ಯಾಷನ್​ಬಲ್​ ಜೋಡಿಯಾಗಿ ಗುರುತಿಸಿಕೊಂಡಿರುವ ಈ ಜೋಡಿ ಡೇಟ್​ ವೇಳೆ ಅದ್ಬುತವಾಗಿ ಕಂಡಿದ್ದಾರೆ

shahid-kapoor-loses-cool-at-paparazzi-during-romantic-dinner-date-with-wife-mira-rajput

author img

By ETV Bharat Karnataka Team

Published : Apr 23, 2024, 11:21 AM IST

Updated : Apr 24, 2024, 6:12 AM IST

ಹೈದರಾಬಾದ್​: ನಟ ಶಾಹೀದ್​ ಕಪೂರ್​​ ತಮ್ಮ ಸೂಪರ್​ಡೂಪರ್​ ಚಿತ್ರ 'ತೇರಿ ಬಾತೋ ಮೇ ಹೈಸಾ ಉಲ್ಜಾ ಜಿಯಾ'ದ ಯಶಸ್ಸಿನ ಅಲೆಯಲ್ಲಿದ್ದಾರೆ. ತಮ್ಮ ಬ್ಯುಸಿ ವೃತ್ತಿಪರ ಜೀವನ ನಡುವೆ ತಮ್ಮ ಮುದ್ದಿನ ಮಡದಿ ಮೀರಾ ಕಪೂರ್​ ಜೊತೆ ರೋಮ್ಯಾಂಟಿಕ್​ ಡೇಟ್​​ಗೆ ತೆರಳಿದ್ದು, ಈ ವೇಳೆ ಊಟವಾಗಿ ಹೊರ ಬರುತ್ತಿದ್ದಂತೆ ಪ್ಯಾಪರಾಜಿಗಳು ವಿರುದ್ಧ ತಾಳ್ಮೆ ಕಳೆದು ಕೊಂಡು ಸುದ್ದಿಯಾಗಿದ್ದಾರೆ.

ಮುಂಬೈನಲ್ಲಿ ಈ ಜೋಡಿ ತಮ್ಮ ರಾತ್ರಿ ಭೋಜನ ಸವಿಯುವ ಉದ್ದೇಶದಿಂದ ರೋಮ್ಯಾಂಟಿಕ್​ ಡೇಟ್​ಗೆ ಮುಂದಾಗಿದ್ದಾರೆ. ಚಿತ್ರೋದ್ಯಮದಲ್ಲಿ ಸಿಖತ್​ ಫ್ಯಾಷನ್​ಬಲ್​ ಜೋಡಿಯಾಗಿ ಗುರುತಿಸಿಕೊಂಡಿರುವ ಈ ಜೋಡಿ ಡೇಟ್​ ವೇಳೆ ಅದ್ಬುತವಾಗಿ ಕಂಡಿದ್ದಾರೆ. ಈ ಸಮಯದಲ್ಲಿ ಫೋಟೋ ತೆಗೆಯಲು ಪ್ಯಾಪಾರಾಜಿಗಳು ಮುಂದಾಗಿದ್ದಾರೆ. ಅದು ಅವರ ಕಾರ್​ವರೆಗೆ ಹಿಂಬಾಲಿಸಿದ್ದು, ನಟನ ತಾಳ್ಮೆ ಕಟ್ಟೆ ಒಡೆಯುವಂತೆ ಮಾಡಿದೆ. ಈ ವೇಳೆ ಕಿರಿಕಿರಿಗೆ ಒಳಗಾದ ನಟ, ನೀವು ಇಲ್ಲಿಯೇ ನಿಲ್ಲಿಸುತ್ತೀರಾ? ನೀವು ಸರಿಯಾಗಿ ವರ್ತಿಸುತ್ತೀರಾ ಎಂದು ಸಿಟ್ಟಿನಲ್ಲಿ ಅವರು ಕೂಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಘಟನೆ ಹೊರತಾಗಿ ನಟ ಡಿನ್ನರ್​ ಡೇಟ್​ನಲ್ಲಿ ಸಿಕ್ಕಾಪಟ್ಟೆ ಸ್ಟೈಲೀಶ್​ ಆಗಿ ಕಂಗೊಳಿಸಿದ್ದಾರೆ. ಕಪ್ಪು ಬಣ್ಣದ ಶರ್ಟ್​ ಮತ್ತು ಅದೇ ಡೇನಿಮ್​ ಪ್ಯಾಂಟ್​ನಲ್ಲಿ ಅವರು ಕಂಡರೆ, ಮೀರಾ ಕೋಆರ್ಡ್​ ಸೆಟ್​ನಲ್ಲಿ ಮುದ್ದಾಗಿ ಕಂಡಿದ್ದಾರೆ. ಕಪ್ಪು ಬಣ್ಣದ ಸ್ಯಾಟಿನ್​ ಗೌನ್​ಗೆ ಓಪನ್​ ಹೇರ್​​ ಬಿಟ್ಟಿದ್ದಾರೆ. ಈ ದಂಪತಿಗಳು ಇಬ್ಬರು ಮುದ್ದಾದ ಮಕ್ಕಳ ಪೋಷಕರು ಹೌದು.

ವೃತ್ತಿ ವಿಷಯದಲ್ಲಿ ಗಮನಿಸಿದರೆ ನಟಿ ಕೃತಿ ಸನೋನ್​ ಜೊತೆ ನಟಿಸಿದ 'ತೇರಿ ಬಾತೋ ಮೇ ಹೈಸೇ ಉಲ್ಜಾ ಜಿಯಾ' ಚಿತ್ರ ನಿಧಾನವಾಗಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಇದರ ಹೊರತಾಗಿ ನಟ ಪೂಜಾ ಹೆಗ್ಡೆ ಜೊತೆಗೆ 'ದೇವಾ'ದಲ್ಲಿ ಕಾಣಿಸಲಿದ್ದಾರೆ. ಈ ಚಿತ್ರವನ್ನು ರೋಶನ್​ ಆ್ಯಂಡ್ರೋಸ್​​ ನಿರ್ದೇಶಿಸಿದ್ದು, ಈ ಚಿತ್ರದಲ್ಲಿ ರಗಡ್​ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಸಚಿನ್​ ಬಿ ರವಿ ನಿರ್ದೇಶನದಲ್ಲಿ 'ಅಶ್ವತ್ಥಾಮ- ದಿ ಸಾಗಾ ಕಂಟಿನ್ಯೂಸ್'​ನಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ ಇದರ ಜೊತೆಗೆ ಅವರ ಅಭಿಮಾನಿಗಳು ನಟ ಶಾಹೀದ್​ ಆನ್​ಲೈನ್​ ಹಿಟ್​​ ಸೀರಿಸ್​ ಆಗಿರುವ 'ಫರ್ಜಿ' ಎರಡನೇ ಸೀಸನ್​ ಅನ್ನು ಕೂಡ ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: ಬೇಬಿ ಶವರ್​ ಸಂಭ್ರಮದಲ್ಲಿ ನತಾಶಾ - ವರುಣ್​​ ಧವನ್​; ಇಲ್ಲಿವೆ ಫೋಟೋಸ್​​

Last Updated : Apr 24, 2024, 6:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.