ಮುಂಬೈ: ಸಾರಾ ಅಲಿ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಏ ವತನ್ ಮೇರೆ ವತನ್' ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಟ್ರೇಲರ್ ನೋಡಿದ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಸಾರಾ ಅಳಿ ಖಾನ್ ಮೊದಲ ಬಾರಿಗೆ ದೇಶಭಕ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ಸಾರಾ ಅಲಿ ಖಾನ್ ಅವರ ಲುಕ್ ಹಾಗೂ ಪಾತ್ರದ ಬಗ್ಗೆ ಈಗಾಗಲೇ ಬಹಿರಂಗಪಡಿಸಲಾಗಿತ್ತು. ಇದೀಗ ಟ್ರೇಲರ್ನಲ್ಲಿ ಸಾರಾ ಅವರ ಅಭಿನಯದ ಝಲಕ್ ನೋಡಿ, ಅಭಿಮಾನಿಗಳು ವಾಹ್ ಎಂದಿದ್ದಾರೆ. ಕಣ್ಣನ್ ಅಯ್ಯರ್ ಆ್ಯಕ್ಷನ್ ಕಟ್ ಹೇಳಿರುವ 'ಏ ವತನ್ ಮೇರೆ ವತನ್' ಸಿನಿಮಾವನ್ನು ಕರಣ್ ಜೋಹರ್ ಅವರ ಧರ್ಮ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಕರಣ್ ಜೋಹರ್ ಹಾಗೂ ಅಪೂರ್ವ ಮೆಹ್ತಾ ನಿರ್ಮಾಣ ಮಾಡಿದ್ದಾರೆ.
- " class="align-text-top noRightClick twitterSection" data="">
'ಮಾಡು ಇಲ್ಲವೇ ಮಡಿ' ಹೋರಾಟದಲ್ಲಿ ಸಾರಾ: 2.52 ನಿಮಿಷಗಳಿರುವ 'ಏ ವತನ್ ಮೇರೆ ವತನ್' ಟ್ರೇಲರ್ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧವಾಗಿರುವ ದೇಶದ ಜನರೆಲ್ಲ, ಗಡಿಯಾರದಲ್ಲಿ ಸಮಯ ನೋಡುತ್ತಾ ರೇಡಿಯೋ ಕಾರ್ಯಕ್ರಮಕ್ಕಾಗಿ ಕಾದು ಕುಳಿತಿರುವುದರಿಂದ ಪ್ರಾರಂಭವಾಗುತ್ತದೆ. ಉಷಾ ಮೆಹ್ತಾ ಪಾತ್ರದಲ್ಲಿ ಸಾರಾ ಅಲಿ ಖಾನ್ ಅಭಿನಯಿಸಿದ್ದು, ರೇಡಿಯೋ ಕಾರ್ಯಕ್ರಮ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ. ಟ್ರೇಲರ್ ಕೊನೆಯಲ್ಲಿ ದೇಶಕ್ಕಾಗಿ ಮಾಡು ಇಲ್ಲವೇ ಮಡಿ ಎನ್ನುವ ಘೋಷಣೆ ಎಲ್ಲರನ್ನೂ ರೋಮಾಂಚನಗೊಳಿಸುತ್ತದೆ. ಉಷಾ ಮೆಹ್ತಾ ಪಾತ್ರದಲ್ಲಿ ಸಾರಾ ಅದ್ಭುತವಾಗಿ ಕಾಣಿಸಿಕೊಂಡಿದ್ದು, ತಮ್ಮ ನಟನೆಯಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಈ ಸಿನಿಮಾ ನೈಜ ಘಟನಾಧಾರಿತವಾಗಿದೆ. 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿ ಆಧರಿಸಿ ನಿರ್ಮಾಣವಾಗಿದೆ. ಕಥೆಯನ್ನು ದಾರಬ್ ಫಾರೂಕಿ ಹಾಗೂ ಕಣ್ಣನ್ ಅಯ್ಯರ್ ಬರೆದಿದ್ದಾರೆ. ಸಿನಿಮಾ ಮಾರ್ಚ್ 21ರಂದು ಒಟಿಟಿ ಫ್ಲಾಟ್ಫಾರ್ಮ್ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಕ್ರೈಂ ಥ್ರಿಲ್ಲರ್ ಸಿನಿಮಾದೊಂದಿಗೆ ಬರ್ತಿದ್ದಾರೆ ಚಿನ್ನಾರಿ ಮುತ್ತ