ಬಾಲಿವುಡ್‌ನ ಬಹುತೇಕ ಸೆಲೆಬ್ರಿಟಿಗಳು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಜೋಡಿಯ ಎರಡನೇ ಪ್ರೀ ವೆಡ್ಡಿಂಗ್ ಕ್ರೂಸ್ ಪಾರ್ಟಿಯನ್ನು ಆನಂದಿಸಿದ್ದಾರೆ. ಈ ಪಾರ್ಟಿ ಇಟಲಿಯಿಂದ ಫ್ರಾನ್ಸ್‌ಗೆ ಹೋಗುವ ಐಷಾರಾಮಿ ಕ್ರೂಸ್ನಲ್ಲಿ ನಡೆದಿದೆ. ಮೇ 29 ರಂದು ಇಟಲಿಯಲ್ಲಿ ಎರಡನೇ ವಿವಾಹ ಪೂರ್ವ ಸಮಾರಂಭ ಪ್ರಾರಂಭವಾಯಿತು. ನಿನ್ನೆ, ಜೂನ್ 1ರಂದು ಫ್ರಾನ್ಸ್ನಲ್ಲಿ ಕಾರ್ಯಕ್ರಮ ಪೂರ್ಣಗೊಂಡಿದೆ ಎಂದು ನಂಬಲಾಗಿದೆ. ಸಾರಾ ಅಲಿ ಖಾನ್ ಅವರೀಗ ಸಾಗರೋತ್ತರ ಪ್ರದೇಶದಿಂದ ಫೋಟೋಗಳನ್ನು ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಜರಾ ಹಟ್ಕೆ ಜರಾ ಬಚ್ಕೆ ನಟಿ ಸಾರಾ ಅಲಿ ಖಾನ್ ಇಟಲಿಯಿಂದ ತಮ್ಮ ಸಹೋದರ ಇಬ್ರಾಹಿಂ ಅಲಿ ಖಾನ್ ಜೊತೆಗಿನ ಅನೇಕ ಸುಂದರ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಪ್ರವಾಸದಲ್ಲಿ ಸಾರಾ ಜೊತೆ ಅವರ ಸ್ನೇಹಿತರು ಕೂಡ ಇದ್ದರು. ಅನೇಕ ಚಿತ್ರಗಳಲ್ಲಿ, ಸಾರಾ ತಮ್ಮ ಗರ್ಲ್ ಸ್ಕ್ವಾಡ್‌ನೊಂದಿಗೆ ವಿಹಾರ ನೌಕೆಯಲ್ಲಿ ಪೋಸ್ ಕೊಡೋದನ್ನು ಕಾಣಬಹುದು.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಕಿರಿ ಪುತ್ರ ಅನಂತ್ ಅಂಬಾನಿ ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಪುತ್ರಿ ರಾಧಿಕಾ ಮರ್ಚೆಂಟ್ ಜುಲೈ 12 ರಂದು ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ಮದುವೆ ಸಮಾರಂಭಕ್ಕೆ ಸಾಂಪ್ರದಾಯಿಕ ಭಾರತೀಯ ಡ್ರೆಸ್ ಕೋಡ್ ಇರಿಸಲಾಗಿದೆ. ವಾರಾಂತ್ಯದವರೆಗೆ (ಜುಲೈ 12, ಜುಲೈ 13) ವಿವಾಹ ಮಹೋತ್ಸವಗಳು ನಡೆಯಲಿವೆ.
ಅನಂತ್ ಮತ್ತು ರಾಧಿಕಾ ಅವರ ಐಷಾರಾಮಿ ಕ್ರೂಸ್ ಪಾರ್ಟಿಯ ಫೋಟೋ ವಿಡಿಯೋಗಳನ್ನು ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳು ಕೊಂಚ ಸಮಯ ಕಾಯಬೇಕಾಗಬಹುದು. ಇನ್ನೂ ಫೋಟೋಗಳನ್ನು ಹರಿಬಿಡಲಾಗಿಲ್ಲ.
ಇದನ್ನೂ ಓದಿ: ಸ್ಪೇನ್‌ನಲ್ಲಿ ಶಾರುಖ್ ಖಾನ್ 'ಕಿಂಗ್' ಶೂಟಿಂಗ್? ಫೋಟೋ ವೈರಲ್ - SRK King Shooting
ಇತ್ತೀಚೆಗೆ ರೆಡ್, ಗೋಲ್ಡನ್ ಕಲರ್ನಲ್ಲಿ ಸಿದ್ಧಪಡಿಸಲಾಗಿರುವ ಮದುವೆಯ ಆಮಂತ್ರಣ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮೂರು ದಿನಗಳ ಸಂಭ್ರಮಾಚರಣೆ ನಡೆಯಲಿದ್ದು, ಆ ಇನ್ವಿಟೇಶನ್ ಅದರ ವಿವರಗಳನ್ನು ಬಹಿರಂಗಪಡಿಸಿತ್ತು. ಜುಲೈ 12 ರಂದು ಶುಭ ವಿವಾಹ ಸಮಾರಂಭ ನಡೆಯಲಿದೆ. ಈ ಮೂಲಕ ವಿಶ್ವದ ಅದ್ದೂರಿ ಮದುವೆ ಸಮಾರಂಭ ಪ್ರಾರಂಭವಾಗುತ್ತದೆ. ಮರುದಿನ, ಶುಭ ಆಶೀರ್ವಾದ ಸಮಾರಂಭ ಜರುಗಲಿದೆ. ಮದುವೆಯ ಕೊನೆಯ ಕಾರ್ಯಕ್ರಮ ಜುಲೈ 14 ರಂದು ನಡೆಯಲಿದೆ. ಮಂಗಲ್ ಉತ್ಸವ ಅಥವಾ ಆರತಕ್ಷತೆ ಸಮಾರಂಭ ಇದಾಗಲಿದೆ. ಮೂರು ದಿನಗಳ ಕಾರ್ಯಕ್ರಮಗಳು ಮುಂಬೈನ ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದ್ದು ಅತಿಥಿಗಳಿಗೆ ಇಂಡಿಯನ್ ಡ್ರೆಸ್ ಕೋಡ್ ಫಾಲೋ ಮಾಡುವಂತೆ ಕೇಳಿಕೊಳ್ಳಲಾಗಿದೆ.
ಇದನ್ನೂ ಓದಿ: ಅಂಬಾನಿ ಪುತ್ರನ ಮದುವೆ ಡೇಟ್ ಫಿಕ್ಸ್: ಮುಂಬೈನಲ್ಲಿ ನಡೆಯಲಿದೆ ಅದ್ಧೂರಿ ಸಮಾರಂಭ - Anant Radhika Wedding Date