ETV Bharat / entertainment

ದರ್ಶನ್​​ ಸಿನಿಮಾ ನಿರ್ದೇಶಿಸಲಿದ್ದಾರೆ ಪ್ರೇಮ್​; ಸಂಜಯ್​ ದತ್​​ ವಿಲನ್​? - Prem

ದರ್ಶನ್​​ ಸಿನಿಮಾಗೆ ಪ್ರೇಮ್​​ ಆ್ಯಕ್ಷನ್​ ಕಟ್​ ಹೇಳಲಿದ್ದು, ಸಂಜಯ್​ ದತ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

Sanjay Dutt in Prem and darshan's Movie?
ಪ್ರೇಮ್ ಸಿನಿಮಾದಲ್ಲಿ ದರ್ಶನ್, ಸಂಜಯ್​ ದತ್​​
author img

By ETV Bharat Karnataka Team

Published : Feb 8, 2024, 6:52 PM IST

ತಾಯಿ ಸೆಂಟಿಮೆಂಟ್, ರೌಡಿಸಂ, ಲವ್ ಸ್ಟೋರಿ ಚಿತ್ರಗಳನ್ನು ಮಾಡುತ್ತ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿರುವ ನಿರ್ದೇಶಕ ಜೋಗಿ ಪ್ರೇಮ್. ಸದ್ಯ ಧ್ರುವ ಸರ್ಜಾ ಜೊತೆ ಪ್ಯಾನ್ ಇಂಡಿಯಾ 'ಕೆ.ಡಿ' ಸಿನಿಮಾ ಮಾಡುತ್ತಿರುವ ಪ್ರೇಮ್ ಮತ್ತೊಂದು ಬಿಗ್ ಬಜೆಟ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸಿನಿಮಾ ಮಾಡಲಿದ್ದಾರಂತೆ.

ದರ್ಶನ್​​ ಅವರಿಗೆ ಪ್ರೇಮ್ ಬಹಳ ವರ್ಷಗಳ ಬಳಿಕ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಅನ್ನೋದು ಕೆಲ ತಿಂಗಳ ಹಿಂದೆಯೇ ರಿವೀಲ್ ಆಗಿತ್ತು. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ದರ್ಶನ್ ಹಾಗೂ ಜೋಗಿ ಪ್ರೇಮ್ ಅವರನ್ನು ಒಟ್ಟಿಗೆ ಸೇರಿಸಿ ಅದ್ಧೂರಿ ಸಿನಿಮಾ ಮಾಡುವುದಾಗಿ ತಿಳಿಸಿತ್ತು. ಇದೀಗ ಪ್ರೇಮ್ ಅಡ್ಡಾದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ.

ಅದೆನಪ್ಪಾ ಅಂದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗೆ ಬಾಲಿವುಡ್ ನಟ ಸಂಜಯ್ ದತ್ ಖಳನಟ ಆಗ್ತಾರೆ? ಎಂಬ ಸುದ್ದಿಯೊಂದು ಸ್ಯಾಂಡಲ್​​ವುಡ್​ನಿಂದ ಬಾಲಿವುಡ್​ವರೆಗೂ ಸಖತ್​​ ಟಾಕ್ ಆಗುತ್ತಿದೆ. 'ಕೆಜಿಎಫ್' ಸಿನಿಮಾ ನಂತರ ಸಂಜುದಾದಾ ಬ್ಯಾಕ್ ಟು ಬ್ಯಾಕ್ ಕನ್ನಡ ಚಿತ್ರಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಈ ಮಾತಿಗೆ ಪೂರಕವಾಗಿ ಈಗಾಗ್ಲೆ 'ಕೆ.ಡಿ' ಚಿತ್ರದಲ್ಲಿ ಸಂಜಯ್ ದತ್ ಅಭಿನಯಿಸುತ್ತಿದ್ದು, ಪ್ರೇಮ್​​ ನಿರ್ದೇಶನ ಮಾಡುತ್ತಿದ್ದಾರೆ.

ಇದೀಗ ಪ್ರೇಮ್​​, ದರ್ಶನ್​​, ಸಂಜಯ್​ ದತ್​​ ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಖಾಸಗಿ ಹೋಟೆಲ್​​ನಲ್ಲಿ ಸಂಜಯ್ ದತ್, ದರ್ಶನ್, ಪ್ರೇಮ್ ಹಾಗೂ ಕೆವಿಎನ್ ಸಂಸ್ಥೆಯ ಮಾಲೀಕ ವೆಂಕಟ್ ಕೆ ನಾರಾಯಣ್ ಭೇಟಿಯಾಗಿದ್ದಾರೆ. ಒಂದು ಫ್ರೇಮ್‌ನಲ್ಲಿ ರಕ್ಷಿತಾ ಪ್ರೇಮ್​​ ಕೂಡ ಇದ್ದಾರೆ. ಈ ಭೇಟಿಯ ಫೋಟೋಗಳನ್ನು ಕೆವಿಎನ್‌ ಪ್ರೊಡಕ್ಷನ್ ಹೌಸ್ ತನ್ನ ಅಫಿಶಿಯಲ್​​ ಸೋಷಿಯಲ್​ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದೆ.

ಬಾಲಿವುಡ್‌ನ ಸಂಜಯ್ ದತ್ ಮತ್ತು ನಟ ದರ್ಶನ್ ಕನೆಕ್ಷನ್ ಎಲ್ಲಿಂದ ಎಲ್ಲಿಗೆ?. ಕನೆಕ್ಟ್ ಆಗೋಕೆ ಸಾಧ್ಯವೇ ಇಲ್ಲ ಬಿಡಿ. ಆದ್ರೆ ಜೋಗಿ ಪ್ರೇಮ್ ಅವರ 'ಕೆ.ಡಿ' ಸಿನಿಮಾದಿಂದ ಇದೆಲ್ಲಾ ಸಾಧ್ಯವಾಗಿದೆ. ಕೆವಿಎನ್‌ ಪ್ರೊಡಕ್ಷನ್ ಹೌಸ್ ಪ್ರೇಮ್‌ ಅವರ ಎರಡು ಚಿತ್ರಗಳಿಗೆ ಬಂಡವಾಳ ಹೂಡುತ್ತಿದೆ. ಹಾಗಾಗಿಯೇ ಈ ಎಲ್ಲಾ ಭೇಟಿಗಳು ಸಾಧ್ಯವಾಗುತ್ತಿವೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈ ಮೂವರ ಜೊತೆ ಕೆವಿಎನ್ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಸುಪ್ರೀತ್ ಕೂಡ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಕುತೂಹಲ ಸಹಜವಾಗಿ ಮೂಡುತ್ತದೆ. ಇದಕ್ಕೆ ಕ್ಲಾರಿಟಿ ಅನ್ನೋ ಹಾಗೆ ಜೋಗಿ ಪ್ರೇಮ್ ಚಿತ್ರಗಳಿಗೆ ಹಣ ಹಾಕುತ್ತಿರೋ ಕೆವಿಎನ್ ಪ್ರೊಡಕ್ಷನ್ ಫೋಟೋಗಳನ್ನು ಶೇರ್ ಮಾಡಿದೆ.

ಇದನ್ನೂ ಓದಿ: ಯಾಮಿ ಗೌತಮ್ ನಟನೆಯ 'ಆರ್ಟಿಕಲ್ 370' ಸಿನಿಮಾ ಟ್ರೇಲರ್ ಔಟ್

ಕೆವಿಎನ್ ಪ್ರೊಡಕ್ಷನ್ ಹೌಸ್ ಆಪ್ತರ ಪ್ರಕಾರ, ಪ್ರೇಮ್ ನಿರ್ದೇಶನದ, ದರ್ಶನ್ ನಟನೆಯ ಹೆಸರಡಿದ ಚಿತ್ರದಲ್ಲಿ ಸಂಜಯ್ ದತ್ ಅವರಿಂದ ನಟನೆ ಮಾಡಿಸಲು ಮಾತುಕತೆ ಆಗಿದೆ. ಆದರೆ ಸಂಜಯ್​ ದತ್ತ ಮಾತ್ರ ಇನ್ನೂ ಓಕೆ ಮಾಡಿಲ್ಲ ಅಂತಾ ಹೇಳಲಾಗುತ್ತಿದೆ. ಆದರೆ ಯಾವುದೂ ಕೂಡ ಅಧಿಕೃತ ಮಾಹಿತಿಯಲ್ಲ. ಇನ್ನು ದರ್ಶನ್ ಮತ್ತು ಜೋಗಿ ಪ್ರೇಮ್ ಸಿನಿಮಾ ಶುರುವಾಗಲು ಒಂದು ವರ್ಷ ಬೇಕಾಗುತ್ತದೆ. ಯಾಕಂದ್ರೆ, ದರ್ಶನ್ ಡೆವಿಲ್ ಸಿನಿಮಾ ಮುಗಿಸಬೇಕಿದೆ. ಮತ್ತೊಂದೆಡೆ ಕೆ.ಡಿ ಚಿತ್ರ ಮುಗಿದ ಮೇಲೆ ಪ್ರೇಮ್​ ಮುಂದಿನ ಚಿತ್ರದೆಡೆಗೆ ಗಮನ ಕೊಡಲಿದ್ದಾರೆ. ಹಾಗಾಗಿ ದರ್ಶನ್ ಹಾಗೂ ಪ್ರೇಮ್ ಕಾಂಬಿನೆಷನ್​ನ ಚಿತ್ರ ಸೆಟ್ಟೇರುವುದು ಬಹುಶಃ 2025 ಅಂತಾ ಹೇಳಲಾಗುತ್ತಿದೆ.

ಇದನ್ನೂ ಓದಿ: 'ಒಂದು ಸರಳ ಪ್ರೇಮಕಥೆ' ಪ್ರೀ-ರಿಲೀಸ್ ಈವೆಂಟ್​​: ವಿನಯ್ ರಾಜ್​​ಕುಮಾರ್ ಸಿನಿಮಾಗೆ ದೊಡ್ಮನೆ ಸಾಥ್

ಎಲ್ಲಾ ಅಂದುಕೊಂಡಂತೆ ನಡೆದರೆ ದರ್ಶನ್ ಸಿನಿಮಾದಲ್ಲಿ ಸಂಜಯ್ ದತ್ ಅಭಿನಯಿಸಲಿದ್ದು, ಪ್ರೇಮ್ ಅವರು ಸಂಜಯ್​ ದತ್ತಗೆ ಎರಡನೇ ಬಾರಿಗೆ ನಿರ್ದೇಶನ ಮಾಡಲಿದ್ದಾರೆ. ಸದ್ಯ ಈ ಮೂವರು ಸ್ಟಾರ್ಸ್ ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಂಡಿರೋದು ನೆಟ್ಟಿಗರ ಕುತೂಹಲವನ್ನಂತೂ ಹೆಚ್ಚಿಸಿದೆ. ಇದು ಆತ್ಮೀಯ ಭೇಟಿನಾ, ಸಿನಿಮಾ ಮಾತುಕಥೆನಾ ಅನ್ನೋದನ್ನು ಜೋಗಿ ಪ್ರೇಮ್ ಅಥವಾ ಕೆವಿಎನ್ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಅನೌನ್ಸ್ ಮಾಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.