ETV Bharat / entertainment

ಕುಡುಬಿ ಜನಾಂಗದ ಕಷ್ಟ ಸುಖದ ಕಥೆ ಹೇಳಲಿದೆ 'ಗುಂಮ್ಟಿ': ಟ್ರೇಲರ್​ ರಿಲೀಸ್​​​ - GUMTI TRAILER RELEASE

ಕುಡುಬಿ ಜನಾಂಗದ ಕಥೆಯನ್ನಾಧರಿಸಿರುವ 'ಗುಂಮ್ಟಿ' ಚಿತ್ರದ ಟ್ರೇಲರ್​ ಅನಾವರಣಗೊಂಡಿದೆ.

Gumti Trailer release event
'ಗುಂಮ್ಟಿ' ಟ್ರೇಲರ್​ ರಿಲೀಸ್​​​ ಈವೆಂಟ್​​ (Photo: ETV Bharat)
author img

By ETV Bharat Entertainment Team

Published : Nov 9, 2024, 4:25 PM IST

ಶೀರ್ಷಿಕೆ ಮತ್ತು ಕಥಾಹಂದರದ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ 'ಗುಂಮ್ಟಿ' ಚಿತ್ರ ತೆರೆಕಾಣಲು ಸಜ್ಜಾಗಿದೆ‌. ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಅನಾವರಣಗೊಳಿಸಿದೆ.

ಇತ್ತೀಚೆಗೆ ನಡೆದ 'ಗುಂಮ್ಟಿ' ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ಚಿತ್ರತಂಡ, ಟ್ರೇಲರ್ ಮತ್ತು ಗುಂಮ್ಟಿ ಚಿತ್ರದ ಕಥಾಹಂದರ ಸೇರಿದಂತೆ ಒಂದಿಷ್ಟು ಮಾಹಿತಿಗಳನ್ನು ಮಾಧ್ಯಮಗಳೆದುರು ಹಂಚಿಕೊಂಡಿತು.

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಕತ್ತಲೆ ಕೋಣೆ ಮತ್ತು ಇನಾಮ್ದಾರ್ ಸಿನಿಮಾಗಳನ್ನು ನಿರ್ದೇಶಿಸಿ, ಕಂಟೆಂಟ್ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶ್​​ ಶೆಟ್ಟಿ ಆಜ್ರಿ ಅವರು ಗುಂಮ್ಟಿ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಜೊತೆಗೆ ತೆರೆಮೇಲೆ ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಗುಂಮ್ಟಿ ಬಗ್ಗೆ ಮಾತಿಗಿಳಿದ ನಿರ್ದೇಶಕ ಕಂ ನಾಯಕ ನಟ ಸಂದೇಶ್ ಶೆಟ್ಟಿ ಆಜ್ರಿ, ಇದೊಂದು ಕಲಾತ್ಮಕ ಸಿನಿಮಾ. ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯನ್ನು ತೆರೆಮೇಲೆ ಹೇಳಲು ಹೊರಟಿದ್ದೇವೆ. ಗುಂಮ್ಟಿ ಎಂಬುದು ಕುಡುಬಿ ಸಮುದಾಯದ ಕಲಾ ಪ್ರಾಕಾರದ ಸಾಂಪ್ರದಾಯಿಕ ವಾದ್ಯವಾಗಿದ್ದು, ಅದನ್ನೇ ಸಿನಿಮಾದ ಟೈಟಲ್ ಆಗಿ ಇಟ್ಟುಕೊಂಡಿದ್ದೇವೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ - ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷ ನಮ್ಮ ಈ ಸಿನಿಮಾದಲ್ಲಿ ಅನಾವರಣಗೊಳ್ಳಲಿದೆ ಎಂದು ಶೀರ್ಷಿಕೆ ಮತ್ತು ಕಥಾಹಂದರದ ಬಗ್ಗೆ ವಿವರಣೆ ನೀಡಿದರು.

Gumti Trailer release event
'ಗುಂಮ್ಟಿ' ಪ್ರಮೋಶನ್​ ಈವೆಂಟ್​ (Photo: ETV Bharat)

ನಿರ್ಮಾಪಕ ವಿಕಾಸ್ ಎಸ್ ಶೆಟ್ಟಿ ಮಾತನಾಡಿ, 'ಬಾಲ್ಯದಿಂದಲೂ ನಮ್ಮ ಸುತ್ತಮುತ್ತ ಕಂಡ ಜಾನಪದ ಕಲೆಯೊಂದನ್ನು ಈ ಸಿನಿಮಾದಲ್ಲಿ ತೆರೆಗೆ ತರುವ ಪ್ರಯತ್ನ ಮಾಡಿದ್ದೇವೆ. ಎಲ್ಲರಿಗೂ ಕಥಾಹಂದರ ಇಷ್ಟವಾಗಲಿದೆ. ಮನಮುಟ್ಟಲಿದೆ' ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಯಶ್ 'ಟಾಕ್ಸಿಕ್​​​'ಗಾಗಿ ಭಾರತಕ್ಕೆ ಬಂದ ಹಾಲಿವುಡ್ ಸ್ಟಂಟ್ ಮ್ಯಾನ್​​: ರಾಕಿಂಗ್​ ಸ್ಟಾರ್​​ ಹಾಡಿ ಹೊಗಳಿದ ಜೆ.ಜೆ ಪೆರಿ

ಗುಂಮ್ಟಿ ಸಿನಿಮಾದಲ್ಲಿ ವೈಷ್ಣವಿ ನಾಡಿಗ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಮಲ್ಲಿ ಎಂಬ ಹೆಸರಿನ ಕುಡುಬಿ ಸಮುದಾಯದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಸ್ಮೈ ಪ್ರೊಡಕ್ಷನ್ಸ್ ಮತ್ತು ಜ್ಯೋತಿ ಪ್ರೊಡಕ್ಷನ್ಸ್ ಬ್ಯಾನರ್​​​ನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ಗುಂಮ್ಟಿ ಸಿನಿಮಾವನ್ನು ವಿಕಾಸ್ ಎಸ್ ಶೆಟ್ಟಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅನೀಶ್ ಡಿಸೋಜಾ ಛಾಯಾಗ್ರಹಣ, ಶಿವರಾಜ ಮೇಹು ಅವರ ಸಂಕಲನವಿದೆ. ಡೊಂಡಿ ಮೋಹನ್ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ.

Gumti Trailer release event
'ಗುಂಮ್ಟಿ' ಕಲಾವಿದರು (Photo: ETV Bharat)

ಇದನ್ನೂ ಓದಿ: ಪ್ರಭಾಸ್​ 'ಕಣ್ಣಪ್ಪ' ನೋಟ, ಅಲ್ಲು ಅರ್ಜುನ್​-ಶ್ರೀಲೀಲಾ 'ಪುಷ್ಪ 2' ಡ್ಯಾನ್ಸ್ ಲುಕ್​​​ ಲೀಕ್​​: 'ವೈರಲ್​​ ಮಾಡಬೇಡಿ' - ಚಿತ್ರತಂಡ ಮನವಿ

ಸಿನಿಮಾವನ್ನು ಉಡುಪಿ, ಕುಂದಾಪುರ, ಕಾರವಾರ, ಶಿರಸಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 30ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಸದ್ಯ ಯಶಸ್ವಿಯಾಗಿ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ ಗುಂಮ್ಟಿ ಸೆನ್ಸಾರ್ ಮುಂದಿದೆ. ಇದೀಗ ಟ್ರೇಲರ್ ಬಿಡುಗಡೆ ಮೂಲಕ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಶೀಘ್ರದಲ್ಲಿಯೇ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.