ETV Bharat / entertainment

'ಬ್ಯಾಂಗಲೂರ್ ಇಡ್ಲಿ ಬೇಡ': ರಿಷಬ್, ಶಿವಣ್ಣ ಬಳಿಕ 'RCB' ವಿಡಿಯೋದಲ್ಲಿ ಸುದೀಪ್ - Sudeep

ಸುದೀಪ್ ಅವರನ್ನೊಳಗೊಂಡ 'RCB' ಸ್ಪೆಷಲ್​ ವಿಡಿಯೋ ಹೊರಬಿದ್ದಿದೆ.

Superstar Sudeep
ಸುದೀಪ್
author img

By ETV Bharat Karnataka Team

Published : Mar 17, 2024, 4:00 PM IST

Updated : Mar 17, 2024, 4:16 PM IST

'ಇಂಡಿಯನ್ ಪ್ರೀಮಿಯರ್ ಲೀಗ್' (IPL) ಸೀಸನ್ 17 ಮಾರ್ಚ್ 22ರಿಂದ ಆರಂಭವಾಗಲಿದ್ದು, ಕ್ರಿಕೆಟ್​​ ಫೀವರ್ ಶುರುವಾಗಿದೆ. ಎಲ್ಲಾ ತಂಡಗಳು ಸಿದ್ಧತೆ ನಡೆಸಿದ್ದು, ಕರುನಾಡಿನಾದ್ಯಂತ 'ಈ ಸಲ ಕಪ್​ ನಮ್ದೆ' ಅನ್ನೋ ಡೈಲಾಗ್​ ಸಖತ್​ ಸದ್ದು ಮಾಡುತ್ತಿದೆ. ಆರ್​ಸಿಬಿ ಹೆಸರಿನಲ್ಲಿ ಬದಲಾವಣೆ ಆಗಲಿದ್ದು, ಕನ್ನಡ ಚಿತ್ರರಂಗ ಈ ತಂಡದ ಜೊತೆ ಕೈ ಜೋಡಿಸಿದೆ. ರಿಷಬ್​ ಶೆಟ್ಟಿ, ಅಶ್ವಿನಿ ಪುನೀತ್​​ ರಾಜ್​ಕುಮಾರ್, ಶಿವರಾಜ್​ಕುಮಾರ್​ ಬೆನ್ನಲ್ಲೇ ಅಭಿನಯ ಚಕ್ರವರ್ತಿ ಸುದೀಪ್​​ ಅವರ 'RCB' ಸ್ಪೆಷಲ್​​ ವಿಡಿಯೋ ಹೊರಬಿದ್ದಿದೆ.

ಸುದೀಪ್ ವಿಡಿಯೋದಲ್ಲೇನಿದೆ?: ವೈಟ್​ ಶರ್ಟ್​, ಬ್ಲ್ಯಾಕ್​​ ಪ್ಯಾಂಟ್​​, ಬ್ಲ್ಯಾಕ್​ ಗ್ಲಾಸ್​ ಧರಿಸಿ ಸಖತ್​ ಸ್ಟೈಲಿಶ್​ ಆಗಿ ನಟ ಸುದೀಪ್​​ ಕೋಣೆಯೊಳಗೆ ಎಂಟ್ರಿ ಕೊಡುತ್ತಾರೆ. ಅಣ್ಣಾ.. ಮೂರ್ ಇಡ್ಲಿ ಅಂತಾ ತಿಂಡಿಗೆ ಆರ್ಡರ್​ ಮಾಡ್ತಾರೆ. ಈ ವೇಳೆ ಕಿಚ್ಚ ಸಖತ್​ ಜೋಶ್​ನಲ್ಲಿರುತ್ತಾರೆ. ರಾಯಲ್​ ಚಾಲೆಂಜರ್ಸ್ ಬ್ಯಾಂಗಲೂರ್​​ ಎಂಬ ಸ್ಮಾಲ್ ಬೋರ್ಡ್ ಇಟ್ಟಿರುವ ಮೂರು ಇಡ್ಲಿಗಳ ಪ್ಲೇಟ್​ ಅನ್ನು ನಟನ ಬಳಿ ತರಲಾಗುತ್ತದೆ. ವೇಟರ್ ರಾಯಲ್​ ಮತ್ತು ಚಾಲೆಂಜರ್ಸ್ ಎಂದು ಬರೆದಿರುವ ಎರಡು ಇಡ್ಲಿಗಳನ್ನು ಒಂದೊಂದಾಗೆ ಸರ್ವ್ ಮಾಡ್ತಾರೆ. ಆಗ ಸುದೀಪ್​ ಸೂಪರ್​ ಅಂತಾ ಹೇಳ್ತಾರೆ. ಅದೇ ಬ್ಯಾಂಗಲೂರ್​ ಎಂದು ಬರೆದಿರುವ ಇಡ್ಲಿಯನ್ನು ಬಡಿಸಲು ಹೋದಾಗ, ಬೇರೆ ತಗೋಬಾ ಅಂತಾ ಹೇಳ್ತಾರೆ. ನಂತರ ಅರ್ಥ ಆಯ್ತಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲಿಗೆ ರಾಯಲ್​ ಚಾಲೆಂಜರ್ಸ್ ಬ್ಯಾಂಗಲೂರ್​​ ಬದಲು ರಾಯಲ್​ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಾವಣೆ ಆಗಲಿದೆ ಅನ್ನೋದು ಪಕ್ಕಾ ಆಗಿದೆ.

ಇದನ್ನೂ ಓದಿ: 'RCB'ಗಾಗಿ ಲಾಂಗ್​ ಹಿಡಿದ ಶಿವಣ್ಣ: ಜಬರ್​ದಸ್ತ್​ ವಿಡಿಯೋ 'ಅರ್ಥ ಆಯ್ತಾ'?

ಮಾರ್ಚ್ 19ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅನ್​ಬಾಕ್ಸ್​ ಕಾರ್ಯಕ್ರಮ ನಡೆಯಲಿದೆ. ಅದಕ್ಕೂ ಮುನ್ನ ಒಂದೊಂದಾಗೇ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ವಿಡಿಯೋ ಹೊರಬರುತ್ತಿದೆ. ಪ್ರತೀ ವಿಡಿಯೋದಲ್ಲಿ 'ಬ್ಯಾಂಗಲೂರ್'​​ ಚೆನ್ನಾಗಿಲ್ಲ ಎಂದು ಹೇಳಲಾಗುತ್ತಿದೆ. 'ರಾಯಲ್​ ಚಾಲೆಂಜರ್ಸ್ ಬೆಂಗಳೂರು' ಎಂದು ಬದಲಾಗುವ ಸೂಚನೆ ಈ ವಿಡಿಯೋಗಳಲ್ಲಿದೆ. ಎಲ್ಲದಕ್ಕೂ ಅನ್​ಬಾಕ್ಸ್​ ಕಾರ್ಯಕ್ರಮದಲ್ಲಿ ಸ್ಪಷ್ಟ, ಅಧಿಕೃತ ಮಾಹಿತಿ ಸಿಗಲಿದೆ. ಈವರೆಗೆ ಕಾಂತಾರ ಖ್ಯಾತಿಯ ನಟ-ನಿರ್ದೇಶಕ ರಿಷಬ್​ ಶೆಟ್ಟಿ, ದಿ. ನಟ ಪುನೀತ್​ ರಾಜ್​ಕುಮಾರ್​​ ಪತ್ನಿ - ನಿರ್ಮಾಪಕಿ ಅಶ್ವಿನಿ ಪುನೀತ್​ ರಾಜ್​ಕುಮಾರ್, ಕರುನಾಡ ಚಕ್ರವರ್ತಿ ಶಿವರಾಜ್​​ಕುಮಾರ್​ ಅವರ ವಿಡಿಯೋ ಹೊರಬಿದ್ದಿತ್ತು. ಇಂದು ಕಿಚ್ಚ ಸುದೀಪ್​ ಅವರ ಆರ್​ಸಿಬಿ ವಿಡಿಯೋ ಅನಾವರಣಗೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

ಇದನ್ನೂ ಓದಿ: ಅಶ್ವಿನಿ ಪುನೀತ್​ ರಾಜ್​ಕುಮಾರ್​ 'RCB' ವಿಡಿಯೋ ಅರ್ಥ ಆಯ್ತಾ?

Last Updated : Mar 17, 2024, 4:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.