ETV Bharat / entertainment

ಕೆರೆಬೇಟೆ ಸಿನಿಮಾ ನೋಡಿ ಮೆಚ್ಚಿದ ವಸಿಷ್ಠ ಸಿಂಹ, ಅಜಯ್ ರಾವ್, ಚೇತನ್ - Kerebete Movie

Kerebete Movie: ಸ್ಯಾಂಡಲ್​ವುಡ್​ನಲ್ಲಿ ಒಳ್ಳೆ ಕಂಟೆಂಟ್​ನಿಂದ ಸದ್ದು ಮಾಡುತ್ತಿರುವ ಸಿನಿಮಾ ಕೆರೆಬೇಟೆ. ಮಾರ್ಚ್ 15ರಂದು ತೆರೆಕಂಡು ಇವತ್ತಿಗೂ ಚಿತ್ರಮಂದಿರಗಳಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ ಕೆರೆಬೇಟೆ ಚಿತ್ರ.

SANDALWOOD STARS REACTION  WATCHING KEREBETE MOVIE
ಕೆರೆಬೇಟೆ ಸಿನಿಮಾ ನೋಡಿ ಮೆಚ್ಚಿದ ವಸಿಷ್ಠ ಸಿಂಹ
author img

By ETV Bharat Karnataka Team

Published : Mar 29, 2024, 7:50 PM IST

Updated : Mar 29, 2024, 10:57 PM IST

ಕೆರೆಬೇಟೆ

Kerebete Movie: ಕೆರೆಬೇಟೆ ಸಿನಿಮಾ ನೋಡಿದ ಪ್ರೇಕ್ಷಕರು ನಮ್ಮ ಹಳ್ಳಿ ಸೊಗಡಿನ ಸಿನಿಮಾ ಅಂತಾ ಮೆಚ್ಚಿಕೊಂಡಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಉತ್ತಮ ಸಿನಿಮಾಗಳ ಕೊರತೆ ಇದೆ. ಕಂಟೆಂಟ್ ಓರಿಯೆಂಟ್ ಸಿನಿಮಾಗಳು ಬರ್ತಾ ಇಲ್ಲ ಎನ್ನುವ ಕೊರಗಿಗೆ ಈಗ ಮದ್ದು ನೀಡಿದೆ ಕೆರೆಬೇಟೆ ಸಿನಿಮಾ. ಗೌರಿಶಂಕರ್ ನಟನೆಯ ರಾಜ್ ಗುರು ನಿರ್ದೇಶನದ ಕೆರೆಬೇಟೆ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆಯಷ್ಟೇ ಅಲ್ಲ ಸಿನಿಮಾ ಗಣ್ಯರು ಕೂಡ ಕೆರೆಬೇಟೆ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

ಉತ್ತಮ ಸಿನಿಮಾಗಳನ್ನು ಅಭಿಮಾನಿಗಳು ಯಾವತ್ತೂ ಕೈ ಬಿಡಲ್ಲ ಎನ್ನುವುದಕ್ಕೆ ಕೆರೆಬೇಟೆ ಚಿತ್ರವೇ ಸಾಕ್ಷಿ. ಸಿನಿಮಾ ಗಣ್ಯರು ಕೂಡ ಉತ್ತಮ ಕಂಟೆಕ್ಟ್ ಇರುವ ಸಿನಿಮಾಗಳಿಗೆ ಸಪೋರ್ಟ್ ಮಾಡುತ್ತಾರೆ ಎನ್ನುವುದಕ್ಕೆ ಕೆರೆಬೇಟೆ ಸಿನಿಮಾನೇ ಉದಾಹರಣೆ. ಈ ಹಿಂದೆ ಕೆರೆಬೇಟೆ ಸಿನಿಮಾಗೆ ಕಿಚ್ಚ ಸುದೀಪ್, ಅಶ್ವಿನಿ ಪುನೀತ್ ರಾಜ್ ಕುಮಾರ್, ಧನಂಜಯ್, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನೆನಪಿರಲಿ ಪ್ರೇಮ್, ನಿರ್ದೇಶಕರಾದ ಶಶಾಂಕ್, ಪವನ್ ಒಡೆಯರ್, ಕವಿರಾಜ್ ಸೇರಿದಂತೆ ಚಿತ್ರರಂಗದ ತಾರೆಯರು ಹಾಡಿ ಹೊಗಳಿದ್ದರು. ಉತ್ತಮ ಸಿನಿಮಾಗಳಿಗೆ ಯಾವತ್ತೂ ಅನ್ಯಾಯವಾಗಬಾರದು ದಯವಿಟ್ಟು ಸಿನಿಮಾ ನೋಡಿ ಅಂತಾ ಹೇಳಿದ್ದರು.

ಇದೀಗ ನಟರಾದ ವಷಿಷ್ಟ ಸಿಂಹ, ಅಜಯ್ ರಾವ್, ಆ ದಿನಗಳು ಚೇತನ್, ನಿರ್ದೇಶಕ ಮಿಲನ ಪ್ರಕಾಶ್ ಹಾಗೂ ಗಾಯಕಿ ಶಮಿತಾ ಮಲ್ನಾಡ್ ಕೆರೆಬೇಟೆ ಸಿನಿಮಾ ನೋಡಿ ಮೆಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ವಸಿಷ್ಠ ಸಿಂಹ, ನಟ ಗೌರಿ ಶಂಕರ್​ ಹಾಗೂ ನಿರ್ದೇಶಕ ರಾಜ್ ಗುರು ಸಮ್ಮುಖದಲ್ಲಿ ಕೆರೆಬೇಟೆ ಚಿತ್ರದ ವಿಶೇಷತೆ ಬಗ್ಗೆ ಮಾತನಾಡುತ್ತಾ ಗೆಳೆಯ ಗೌರಿ ಶಂಕರ್ ಹಾಗೂ ನಿರ್ದೇಶಕರ ಕೆಲಸದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಆ ದಿನಗಳು ಚೇತನ್ ಪತ್ನಿ ಮೇಘಾ ಜೊತೆ ಕೆರೆಬೇಟೆ ಚಿತ್ರವನ್ನ ನೋಡಿ ಮೆಚ್ಚಿಕೊಂಡರು. ಈ ಚಿತ್ರದಲ್ಲಿ ಮಲೆನಾಡಿನ ಸೊಬಗು ಆ ಸಂಸ್ಕೃತಿ ಹಾಗು ಜಾತಿ ವ್ಯವಸ್ಥೆ ಹಾಗು ತಾಯಿ ಸೆಂಟಿಮೆಂಟ್​ನಲ್ಲಿ ಗೆಳೆಯ ಗೌರಿ ಶಂಕರ್ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಕಂಟೆಂಟ್ ಚಿತ್ರಗಳು ಬರಬೇಕು ಅಂತಾ ಚೇತನ್ ಹೇಳಿದರು.

ಓದಿ: ಅಪ್ಪಟ ಗ್ರಾಮೀಣ ಸೊಗಡಿನ 'ಕೆರೆಬೇಟೆ' ಸಿನಿಮಾ ಮೆಚ್ಚಿದ ಡಾಲಿ, ಧ್ರುವ, ನೆನಪಿರಲಿ ಪ್ರೇಮ್

ಇನ್ನು ನಿರ್ದೇಶಕ ಮಿಲನ ಪ್ರಕಾಶ್ ಮಾತನಾಡಿ ಇಂತಹ ಕಂಟೆಂಟ್ ಇರುವ ಸಿನಿಮಾಗಳನ್ನ ಯಾರೂ ಮಿಸ್ ಮಾಡಬೇಡಿ. ಚಿತ್ರಮಂದಿರಕ್ಕೆ ಹೋಗಿ ಈ ಸಿನಿಮಾ ನೋಡಿ ಅಂತಾ ಹೇಳಿದರು. ಹಾಗೇ ಗಾಯಕಿ ಶಮಿತಾ ಮಲ್ನಾಡ್ ಮಾತನಾಡಿ ಮಲೆನಾಡಿ ಆಚಾರ ವಿಚಾರಗಳನ್ನ ಹೊಂದಿರುವ ಕೆರೆಬೇಟೆ ಚಿತ್ರವನ್ನ ಯಾರು ಮಿಸ್ ಮಾಡಿಕೊಳ್ಳಬೇಡಿ. ಈ ಸಿನಿಮಾವನ್ನ ಥಿಯೇಟರ್​​ಗೆ ಹೋಗಿ ನೋಡಿ ಅಂತಾ ಶಮಿತಾ ಮಲ್ನಾಡ್ ಮನವಿ ಮಾಡಿದರು.

ಸಿನಿಮಾದ ಕಥೆ, ನಿರ್ದೇಶನ, ಊಹಿಸಲಾಗದ ಟ್ವಿಸ್ಟ್, ಮಲೆನಾಡಿನ ಚಿತ್ರಣ, ಅಲ್ಲಿನ ಭಾಷೆ, ಆಚಾರ ವಿಚಾರ, ಕೆರೆಬೇಟೆ ಸಂಸ್ಕ್ರತಿ ಎಲ್ಲವನ್ನು ಈ ಚಿತ್ರದ ಮೂಲಕ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜಗುರು. ಚಿತ್ರದಲ್ಲಿ ನಾಯಕಿ ಬಿಂದು ಶಿವರಾಮ್ ಪಾತ್ರ, ಗೋಪಾಲ ದೇಶಪಾಂಡೆ, ಸಂಪತ್ ಕುಮಾರ್ ಮತ್ತು ನಟಿ ಹರಣಿಯವರ ಪಾತ್ರಗಳು ಸಹ ಅದ್ಭುತವಾಗಿ ಮೂಡಿ ಬಂದಿದೆ.

ಕೆರೆಬೇಟೆ ಜನಮನ ಸಿನಿಮಾಸ್ ಬ್ಯಾನರ್​ನಲ್ಲಿ ನಾಯಕ ಗೌರಿ ಶಂಕರ್ ಹಾಗೂ ಸಹೋದರ ಜೈ ಶಂಕರ್ ಪಟೇಲ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಗಗನ್ ಬದೇರಿಯ ಅವರ ಸಂಗೀತವಿದೆ. ಕೀರ್ತನ್ ಪೂಜಾರಿಯವರ ಛಾಯಾಗ್ರಹಣವಿದೆ. ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ ಇದಾಗಿದ್ದು, ಮಣ್ಣಿನ ಕಥೆಯ ಸಿನಿಮಾಗಳಿಗೆ ಯಾವತ್ತೂ ಸೋಲಿಲ್ಲ ಎನ್ನುವುದಕ್ಕೆ ಈ ಸಿನಿಮಾ ಮತ್ತೊಂದು ಉದಾಹರಣೆಯಾಗಿದೆ.

ಓದಿ: ನನಗೆ ಆ್ಯಕ್ಟಿಂಗ್ ಬರುತ್ತೆ ಎಂಬ ಆತ್ಮವಿಶ್ವಾಸ ಮೂಡಿದ್ದು ಅಚ್ಯುತ್ ಕುಮಾರ್ ಸರ್​​ ಜೊತೆ ನಟಿಸಿದಾಗ: ಯುವ ರಾಜ್​ಕುಮಾರ್​ ಸಂದರ್ಶನ - Yuvrajkumar Interview

Last Updated : Mar 29, 2024, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.