ದೇಶದಲ್ಲಿಂದು ಗಣೆಶ ಚತುರ್ಥಿಯ ಸಂಭ್ರಮ. ಗಣೇಶನ ಮೂರ್ತಿಯನ್ನಿಟ್ಟು ಅದ್ಧೂರಿಯಾಗಿ ಹಬ್ಬಾಚರಿಸಲಾಗುತ್ತಿದೆ. ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ. ಸೆಲೆಬ್ರಿಟಿಗಲು ಹಂಚಿಕೊಂಡಿರುವ ಸಾಂಪ್ರದಾಯಿಕ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.
ರಿಷಬ್ ಶೆಟ್ಟಿ ಪೋಸ್ಟ್: ಕಾಂತಾರ ಮೂಲಕ ಜನಪ್ರಿಯರಾಗಿರುವ ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಮೂರು ಸುಂದರ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ರಿಷಬ್ ಶೆಟ್ಟಿ ಕುಟುಂಬ ಸಂಪೂರ್ಣ ಸಾಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡಿದ್ದು, ''ನಮ್ಮಿಂದ ನಿಮ್ಮವರೆಗೆ, ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ ಖಾತೆಯಲ್ಲೂ ಈ ಪೋಸ್ಟ್ ಅನ್ನು ಕಾಣಬಹುದು.
ಪ್ರಣಿತಾ ಸುಭಾಷ್ ಪೋಸ್ಟ್: ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ನಟಿ ಪ್ರಣಿತಾ ಸುಭಾಷ್ ಎರಡು ದಿನಗಳ ಹಿಂದಷ್ಟೇ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ದಿನ ಸಂಜೆ ತಮ್ಮ ಮೊದಲ ಮಗಳೊಂದಿಗೆ ಸುಂದರ ಫೋಟೋಗಳನ್ನು ಹಂಚಿಕೊಂಡ ನಟಿ 'ನಮ್ಮ ಮನೆಯ ಪುಟ್ಟ ಗೌರಿ' ಎಂದು ಬರೆದುಕೊಂಡಿದ್ದರು. ತಾಯಿ ಮಗಳು ಸಾಂಪ್ರದಾಯಿಕ ನೋಟದಲ್ಲಿ ಕಂಗೊಳಿಸಿದ್ದಾರೆ.
ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು🙏🏻
— DrShivaRajkumar (@NimmaShivanna) September 7, 2024
ವಕ್ರ-ತುಂಡ ಮಹಾ-ಕಾಯ ಸೂರ್ಯ-ಕೋಟಿ ಸಮಪ್ರಭ |
ನಿರ್ವಿಘ್ನಂ ಕುರು ಮೇ ದೇವ ಸರ್ವ-ಕಾರ್ಯೇಷು ಸರ್ವದಾ ||#HappyGaneshaChaturthi@NimmaShivanna @GeethaPictures #Narthan @rukminitweets @actorshabeer @RaviBasrur #NaveenKumarI #BhairathiRanagalNovember15… pic.twitter.com/roxz2SttW7
ಶಿವಣ್ಣ ಪೋಸ್ಟ್: ತಮ್ಮ ಬಹುನಿರೀಕ್ಷಿತ ಭೈರತಿ ರಣಗಲ್ ಚಿತ್ರದ ಪೋಸ್ಟರ್ ಹಂಚಿಕೊಂಡ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್, ''ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ವಕ್ರ-ತುಂಡ ಮಹಾ-ಕಾಯ ಸೂರ್ಯ-ಕೋಟಿ ಸಮಪ್ರಭ |ನಿರ್ವಿಘ್ನಂ ಕುರು ಮೇ ದೇವ ಸರ್ವ-ಕಾರ್ಯೇಷು ಸರ್ವದಾ'' ಎಂದು ಬರೆದುಕೊಂಡಿದ್ದಾರೆ.
ಡಾಲಿ ಧನಂಜಯ್ ಇನ್ಸ್ಟಾ ಸ್ಟೋರಿ: ಕನ್ನಡ ಚಿತ್ರರಂಗದ ನಟರಾಕ್ಷಸ ಖ್ಯಾತಿಯ ಚಲನಚಿತ್ರ ನಿರ್ಮಾಣ ಸಂಸ್ಥೆ 'ಡಾಲಿ ಪಿಕ್ಚರ್ಸ್' ನಿರ್ಮಾಣದ ಐದನೇ ಚಿತ್ರ 'ಜೆಸಿ'. 'ದಿ ಯೂನಿವರ್ಸಿಟಿ' ಎಂಬ ಟ್ಯಾಗ್ಲೈನ್ ಹೊಂದಿರುವ ಚಿತ್ರದ ಪೋಸ್ಟರ್ ಅನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಡಾಲಿ ಧನಂಜಯ್ ಸರ್ವರಿಗೂ ಹಬ್ಬದ ಶುಭಾಶಯ ಕೋರಿದ್ದಾರೆ.
ಅಮೃತಾ ಅಯ್ಯಂಗಾರ್ ಇನ್ಸ್ಟಾ ಸ್ಟೋರಿ: ನಟಿ ಅಮೃತಾ ಅಯ್ಯಂಗಾರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನ ಸ್ಟೋರಿ ವಿಭಾಗದಲ್ಲಿ ಗಣೇಶ, ಗಣೇಶ ಪೂಜೆಯ ಮತ್ತು ತಮ್ಮ ಸಿಂಗಲ್ ಫೋಟೋಗಳನ್ನು ಹಂಚಿಕೊಂಡು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಗಣೇಶ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಅಮೃತಾ ಪ್ರೇಮ್ ಇನ್ಸ್ಟಾ ಸ್ಟೋರಿ: ತಮ್ಮ ಚೊಚ್ಚಲ ಚಿತ್ರದಲ್ಲೇ ಯಶ ಕಂಡಿರುವ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ನೈಸರ್ಗಿಕ ಗಣೇಶ ಮತ್ತು ಗೌರಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಅವರ ಮನೆಯಲ್ಲಿಟ್ಟಿರುವ ಗಣೇಶನಂತೆ ತೋರಿದೆ.
ಅಮೂಲ್ಯ ಪೋಸ್ಟ್: ಬಿಳಿ ಉಡುಗೆಯಲ್ಲಿ ಕಂಗೊಳಿಸಿರುವ ನಟಿ ಅಮೂಲ್ಯ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ನಾಲ್ಕು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ಗೆ ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.
ಸಂಯುಕ್ತ ಹೊರನಾಡು ಪೋಸ್ಟ್: ನಟಿ ಸಂಯುಕ್ತ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಗಣೇಶ ಪೂಜೆಯ ಫೋಟೋ ಹಂಚಿಕೊಂಡಿದ್ದಾರೆ.
ಹೀಗೆ ಹೆಚ್ಚಿನ ಸಂಖ್ಯೆಯ ಸೆಲೆಬ್ರಿಟಿಗಳು ಪೋಸ್ಟ್ ಶೇರ್ ಮಾಡಿ ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ.