ETV Bharat / entertainment

ಸಿನಿಮಾಗೆ ಮರಳಲು ಸಮಂತಾ ರೆಡಿ; ಪಾಡ್‌ಕಾಸ್ಟ್​​ನಲ್ಲಿ ಭಾಗಿ - ಸಮಂತಾ ಪಾಡ್‌ಕಾಸ್ಟ್

ಆರೋಗ್ಯ ಚೇತರಿಕೆಗೆ ಸಮಯ ಮೀಸಲಿಟ್ಟಿದ್ದ ನಟಿ ಸಮಂತಾ ರುತ್ ಪ್ರಭು ಶೀಘ್ರದಲ್ಲೇ ಸಿನಿಮಾಗೆ ಮರಳಲಿದ್ದಾರೆ.

Samantha Ruth Prabhu
ಸಮಂತಾ ರುತ್ ಪ್ರಭು
author img

By ETV Bharat Karnataka Team

Published : Feb 11, 2024, 9:41 AM IST

ದಕ್ಷಿಣ ಚಿತ್ರರಂಗದ ಬೇಡಿಕೆಯ ನಟಿಯರಲ್ಲೋರ್ವರಾದ ಸಮಂತಾ ರುತ್ ಪ್ರಭು ಕಳೆದ ಏಳು ತಿಂಗಳಿನಿಂದ ಸಿನಿಮಾಗಳಿಂದ ದೂರ ಉಳಿದಿದ್ದಾರೆ. 2023ರ ಜುಲೈನಲ್ಲಿ ಕುಶಿ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ ಬಳಿಕ ತಮ್ಮ ಆರೋಗ್ಯದ ಕಡೆ ಗಮನಹರಿಸಲು ಸಿನಿಮಾಗಳಿಂದ ವಿರಾಮ ಪಡೆದಿದ್ದರು. ಉತ್ತಮ ಆರೋಗ್ಯಕ್ಕಾಗಿ ಸಮಯ ಮೀಸಲಿಟ್ಟ ಬಳಿಕ ಇದೀಗ ತಮ್ಮ ಕೆಲಸಕ್ಕೆ ಮರಳಲು ಸಿದ್ಧರಾದಂತೆ ತೋರುತ್ತಿದೆ.

ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಸಿನಿ ವೃತ್ತಿಜೀವನಕ್ಕೆ ಮರಳುವ ಕುರಿತು ಮಾತನಾಡಿರುವ ಸಣ್ಣ ವಿಡಿಯೋವೊಂದನ್ನು ಅವರು ಹಂಚಿಕೊಂಡಿದ್ದಾರೆ. ಸಂಪೂರ್ಣವಾಗಿ ನಿರುದ್ಯೋಗಿಯಾಗಿದ್ದೆ ಎಂಬುದನ್ನು ನಟಿ ಹಾಸ್ಯಮಯವಾಗಿ ಒಪ್ಪಿಕೊಂಡಿದ್ದಾರೆ. ಕಮ್​ ಬ್ಯಾಕ್​​ ಮಾಡುವ ಬಗ್ಗೆ ಘೋಷಿಸುವುದರ ಜೊತೆಗೆ, ತಮ್ಮ ಸ್ನೇಹಿತರೊಂದಿಗೆ ಹೆಲ್ತ್ ಪಾಡ್‌ಕಾಸ್ಟ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿಯೂ ಬಹಿರಂಗಪಡಿಸಿದರು. ಈ ಕಾರ್ಯಕ್ರಮ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ವಿಡಿಯೋದಲ್ಲಿ ನಟಿ ರೆಡ್​ ಔಟ್​ಫಿಟ್​​ನಲ್ಲಿ ಕಾಣಿಸಿಕೊಂಡರು. ಮೇಕಪ್ ಇಲ್ಲದೆಯೂ ಬೆರಗುಗೊಳಿಸುವ ನೋಟ ಬೀರಿದ್ದಾರೆ. "ಹಲೋ" ಎಂದು ವಿಡಿಯೋ ಪ್ರಾರಂಭಿಸಿದ್ದು, "ಅಂತಿಮವಾಗಿ ನಾನು ಕೆಲಸಕ್ಕೆ ಮರಳುತ್ತಿದ್ದೇನೆ. ಆದರೆ, ನಿಮ್ಮಲ್ಲಿ ಹೆಚ್ಚಿನವರು 'ನೀವು ಯಾವಾಗ ಮರಳಿ ಕೆಲಸಕ್ಕೆ ಹೋಗುತ್ತೀರಿ ಎಂಬ ಪ್ರಶ್ನೆಯನ್ನು ಕೇಳುತ್ತೀರಿ ಎಂಬುದು ನನಗೆ ತಿಳಿದಿದೆ?'. ಹೌದು, ನಾನು ಮತ್ತೆ ಕೆಲಸಕ್ಕೆ ಹೋಗುತ್ತಿದ್ದೇನೆ. ಆದರೆ, ಈ ಮಧ್ಯೆ ನಾನು ಸಂಪೂರ್ಣವಾಗಿ ನಿರುದ್ಯೋಗಿಯಾಗಿದ್ದೆ" ಎಂದು ತಿಳಿಸಿದರು.

ಅಲ್ಲದೇ, ಸಮಂತಾ ಪಾಡ್‌ಕಾಸ್ಟ್ ಬಗ್ಗೆಯೂ ಮಾತನಾಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ತನ್ನ ಪ್ರೊಡಕ್ಷನ್ ಬ್ಯಾನರ್ ಘೋಷಿಸಿರುವ ನಟಿ, ಕೆಲಸಕ್ಕೆ ಮರಳುವ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದರು. ಇದರ ಜೊತೆಗೆ ಪಾಡ್‌ಕಾಸ್ಟ್ ಬಗ್ಗೆಯೂ ಸುಳಿವು ನೀಡಿದರು.

ಇದನ್ನೂ ಓದಿ: ಸೈಕಲ್‌ನಲ್ಲೇ​ ಏಷ್ಯಾ ಯಾತ್ರೆ ಕೈಗೊಂಡ ಅಪ್ಪು ಅಭಿಮಾನಿ: 1,111 ದಿನಗಳ ಪ್ರಯಾಣ

"ನಾನು ಸ್ನೇಹಿತರೊಂದಿಗೆ ಮೋಜಿನ ಸಂಗತಿಯೊಂದರಲ್ಲಿ ಭಾಗಿಯಾಗಿದ್ದೇನೆ. ಇದು ಹೆಲ್ತ್ ಪಾಡ್‌ಕಾಸ್ಟ್. ಅನಿರೀಕ್ಷಿತ ಎಂಬುದನ್ನು ನಾ ಬಲ್ಲೆ. ಆದರೆ ನಿಜವಾಗಿಯೂ ಇಷ್ಟಪಡುವ ವಿಷಯ. ಕಾರ್ಯಕ್ರಮ​​ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ನಿಜವಾಗಿಯೂ ಉತ್ಸುಕಳಾಗಿದ್ದೇನೆ. ನಿಮ್ಮಲ್ಲಿ ಕೆಲವರಿಗೆ ಉಪಯೋಗವಾಗಬಹುದು ಎಂದು ಭಾವಿಸುತ್ತೇನೆ. ಈ ಕಾರ್ಯಕ್ರಮದ ವೇಳೆ​ ಸಾಕಷ್ಟು ಆನಂದಿಸಿದ್ದೇನೆ" ಎಂದು ಸಮಂತಾ ಹೇಳಿದ್ದಾರೆ.

ಇದನ್ನೂ ಓದಿ: ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಬ್ರೈನ್​ ಸ್ಟ್ರೋಕ್​​: ಹೇಗಿದೆ ಆರೋಗ್ಯ? ಹೆಲ್ತ್ ಅಪ್‌ಡೇಟ್ಸ್‌

ನಟಿ ಕೊನೆಯದಾಗಿ ಕುಶಿ ಚಿತ್ರದಲ್ಲಿ ಕಾಣಿಸಿಕೊಂಡರು. ಮುಂದಿನ ಪ್ರಾಜೆಕ್ಟ್​​ ಸಿಟಾಡೆಲ್​. ಇದು ಹಾಲಿವುಡ್​ನ ಆ್ಯಕ್ಷನ್ ಸರಣಿ 'ಸಿಟಾಡೆಲ್‌'ನ ಭಾರತೀಯ ರೂಪಾಂತರವಾಗಿದೆ. ಬಾಲಿವುಡ್​​ ನಟ ವರುಣ್ ಧವನ್ ಜೊತೆ ನಟಿಸಲಿದ್ದಾರೆ. ಇಬ್ಬರೂ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ರಾಜ್ ಮತ್ತು ಡಿಕೆ ರಚನೆಯ ಈ ಸರಣಿ ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ಶೀಘ್ರದಲ್ಲೇ ಪ್ರಚಾರ ಪ್ರಾರಂಭವಾಗಲಿದೆ. ಸಮಂತಾ ಇತ್ತೀಚೆಗೆ ಸಿಟಾಡೆಲ್ ಡಬ್ಬಿಂಗ್‌ ಸಲುವಾಗಿ ಮುಂಬೈನಲ್ಲಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.