ETV Bharat / entertainment

₹400 ಕೋಟಿ ವೆಚ್ಚದ ಚಿತ್ರದಲ್ಲಿ ಸಲ್ಮಾನ್ ಖಾನ್; 10 ವರ್ಷದ ನಂತರ ಸಾಜಿದ್ ಜೊತೆ ಸಿನಿಮಾ - ಸಲ್ಮಾನ್ ಖಾನ್

ನಟ ಸಲ್ಮಾನ್ ಖಾನ್, ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಮತ್ತು ನಿರ್ದೇಶಕ ಎ.ಆರ್.ಮುರುಗದಾಸ್ ಕಾಂಬಿನೇಷನ್​ನಲ್ಲಿ 400 ಕೋಟಿ ರೂಪಾಯಿಗಳ ಬಿಗ್​​ ಬಜೆಟ್‌ ಚಿತ್ರ ಸಿದ್ಧಗೊಳ್ಳಲಿದೆ. ಇನ್ನೂ ಹೆಸರಿಡದ ಚಿತ್ರ ಮುಂದಿನ ವರ್ಷ ಈದ್ ಮಿಲಾದ್‌ಗೆ ತೆರೆ ಕಾಣಲಿದೆ.

Salman Khan-Sajid Nadiadwala to Reunite after a Decade with Actioner Directed by Ar Murugadoss
ನಟ ಸಲ್ಮಾನ್ ಖಾನ್, ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ
author img

By ETV Bharat Karnataka Team

Published : Feb 12, 2024, 6:17 PM IST

ಹೈದರಾಬಾದ್: ಬಾಲಿವುಡ್ ನಟ ಸಲ್ಮಾನ್ ಖಾನ್ ಹೆಸರಿಡದ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಸಾಜಿದ್ ನಾಡಿಯಾದ್ವಾಲಾ ನಿರ್ಮಾಣದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ಎ.ಆರ್.ಮುರುಗದಾಸ್ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಸಾಜಿದ್ ಕೊನೆಯದಾಗಿ 2014ರಲ್ಲಿ ತೆರೆಕಂಡ 'ಕಿಕ್' ನಿರ್ಮಾಣದ ಜೊತೆಗೆ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಸಖತ್​ ಸೌಂಡ್ ಮಾಡಿತ್ತು. ಅದಕ್ಕೂ ಮುನ್ನ ಜೀತ್, ಜುಡ್ವಾ, ಹರ್ ದಿಲ್ ಜೋ ಪ್ಯಾರ್ ಕರೇಗಾ, ಮುಜ್ಸೆ ಶಾದಿ ಕರೋಗಿ ಇವರದೇ ಕಾಂಬೋದಲ್ಲಿ ಮೂಡಿಬಂದ ಸೂಪರ್​ ಹಿಟ್​ ಚಿತ್ರಗಳಾಗಿವೆ. ಇದೀಗ ದಶಕದ ನಂತರ ಮತ್ತೆ ಒಂದಾಗುತ್ತಿದ್ದಾರೆ.

400 ಕೋಟಿ ರೂಪಾಯಿಗಳ ಬಿಗ್​​ ಬಜೆಟ್‌ನೊಂದಿಗೆ ಈ ಚಿತ್ರ ಸಿದ್ಧಗೊಳ್ಳಲಿದೆ. 2025ರ ಈದ್ ಹಬ್ಬಕ್ಕೆ ತೆರೆಗೆ ಬರಲಿದೆ. ಸಾಜಿದ್ ಮತ್ತು ಮುರುಗದಾಸ್ ಚಿತ್ರದ ಬಗ್ಗೆ ಈಗಾಗಲೇ ಚರ್ಚಿಸಿದ್ದು ಸಲ್ಮಾನ್ ಖಾನ್ ಕೂಡ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರಂತೆ. ಚಿತ್ರವು ಆ್ಯಕ್ಷನ್ ಎಂಟರ್ಟೈನರ್​ ಆಗಿರಲಿದೆ ಎಂದು ಹೇಳಲಾಗುತ್ತದೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಪೋರ್ಚುಗಲ್ ಮತ್ತು ಇತರ ಯುರೋಪಿಯನ್ ದೇಶಗಳಲ್ಲಿ ಚಿತ್ರೀಕರಿಸಲಾಗುತ್ತದೆಯಂತೆ. ಕೆಲವು ಭಾಗಗಳನ್ನು ಭಾರತದಲ್ಲಿಯೂ ಚಿತ್ರೀಕರಿಸುವ ಪ್ಲಾನ್​ ಮಾಡಿಕೊಂಡಿದ್ದಾರಂತೆ. ಇದು ಸಾಜಿದ್ ಅವರ ವೃತ್ತಿ ಜೀವನದಲ್ಲೇ ಬಿಗ್​ ಬಜೆಟ್​ ಚಿತ್ರವಾಗಲಿದೆ.

ಸಲ್ಮಾನ್ ಖಾನ್ ಅವರನ್ನು ಆಕರ್ಷಿಸಿದ ಎಲ್ಲ ಸ್ಕ್ರಿಪ್ಟ್‌ಗಳಲ್ಲಿ, ಮುರುಗದಾಸ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರವು ಅವರನ್ನು ಹೆಚ್ಚು ಗಮನ ಸೆಳೆದಿದೆಯಂತೆ. ಹಾಗಾಗಿ ಒಂದೇ ಮಾತಿಗೆ ನಟಿಸುವ ಮಾತು ಕೂಡ ಕೊಟ್ಟಿದ್ದಾರಂತೆ. 'ದರ್ಬಾರ್​', 'ಸರ್ಕಾರ' ಸೇರಿ ಹಲವು ಹಿಟ್​ ಚಿತ್ರಗಳಿಗೆ ನಿರ್ದೇಶನ ಮಾಡಿರುವ ಮುರುಗದಾಸ್, ಕೆಲವು ಬಾಲಿವುಡ್​ ಚಿತ್ರಗಳಿಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಸಲ್ಮಾನ್ ಖಾನ್ ಜೊತೆಗೆ ಇದಕ್ಕೂ ಮುನ್ನ ಜೈ ಹೋ ಮತ್ತು ಹಾಲಿಡೇ ಚಿತ್ರಗಳಿಗೂ ನಿರ್ದೇಶನ ಮಾಡಿದ್ದರು. ಇದೀಗ ಬಹಳ ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ. ಬಾಲಿವುಡ್​ನಲ್ಲಿ ತೆರೆಕಂಡ ಆಮೀರ್​ ಖಾನ್​ ನಟನೆಯ 'ಗಜನಿ' ಇವರ ನಿರ್ದೇಶನದ ಮೊದಲ ಚಿತ್ರವಾಗಿದೆ.

ಇದನ್ನೂ ಓದಿ: ಬಾಕ್ಸ್​ ಆಫೀಸ್​ನಲ್ಲಿ ಹಿಡಿತ ಸಾಧಿಸುತ್ತಿರುವ ಶಾಹಿದ್​ - ಕೃತಿ ಸಿನಿಮಾ: ಚೆನ್ನೈ ಬಳಿಕ ಬೆಂಗಳೂರಿನಲ್ಲೇ ಹೆಚ್ಚು ವೀಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.