ETV Bharat / entertainment

ಹ್ಯಾಟ್ರಿಕ್​​ ಹೀರೋ ಶೂಟಿಂಗ್​​ ಸೆಟ್​ಗೆ ರಾಕಿಂಗ್​​ ಸ್ಟಾರ್ ಎಂಟ್ರಿ: ಶಿವಣ್ಣ-ಯಶ್​​​ ಭೇಟಿ ವಿಡಿಯೋ ನೋಡಿ - Yash Met Shiva Rajkumar

ಸೆಂಚುರಿ ಸ್ಟಾರ್​ ಶಿವರಾಜ್​​​ಕುಮಾರ್​ ಅವರ 131ನೇ ಸಿನಿಮಾದ ಸೆಟ್​ಗೆ ರಾಕಿ ಭಾಯ್​​ ಯಶ್​ ಭೇಟಿ ನೀಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಸಂದರ್ಭ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿತ್ತು. ಆ ನಂತರ ಶೂಟಿಂಗ್​ ಪ್ರಾರಂಭವಾಗಿದ್ದು, ಇಂದು ಸೆಟ್​​ಗೆ ರಾಕಿಭಾಯ್​ನ ಎಂಟ್ರಿಯಾಗಿದೆ.

Yash Met Shiva rajkumar
ಶಿವರಾಜ್​​​ಕುಮಾರ್​ ಭೇಟಿಯಾದ ಯಶ್ (ETV Bharat)
author img

By ETV Bharat Entertainment Team

Published : Aug 19, 2024, 5:10 PM IST

Updated : Aug 19, 2024, 5:28 PM IST

ಶಿವರಾಜ್​​​ಕುಮಾರ್​ ಭೇಟಿಯಾದ ಯಶ್ (ETV Bharat)

ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್​​ಕುಮಾರ್​​ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹ್ಯಾಟ್ರಿಕ್​​​ ಹೀರೋನ ಮುಂದಿನ ಸಿನಿಮಾಗಳಿಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಫ್ಯಾನ್ಸ್​​​ ನಿರೀಕ್ಷೆಯಂತೆ ಶಿವಣ್ಣ ಕೂಡಾ ತಮ್ಮ ಸಿನಿಮಾಗಳನ್ನು ಶೀಘ್ರ ಪೂರ್ಣಗೊಳಿಸಲು ಸಂಪೂರ್ಣ ಶ್ರಮ ಹಾಕುತ್ತಿದ್ದಾರೆ. ಇದೀಗ ಶೂಟಿಂಗ್​ ಸೆಟ್​​ಗೆ ರಾಕಿಂಗ್​ ಸ್ಟಾರ್ ಯಶ್​​ ಎಂಟ್ರಿ ಕೊಡೋ ಮೂಲಕ ಸಖತ್​​​ ಸುದ್ದಿ ಮಾಡಿದ್ದಾರೆ.

ಇತ್ತೀಚೆಗಷ್ಟೇ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್​ ಸೆಟ್ಟೇರಿದೆ. ರಾಕಿಂಗ್​ ಸ್ಟಾರ್​ ಯಶ್​ ಮುಖ್ಯಭೂಮಿಕೆಯ ಈ ಪ್ರಾಜೆಕ್ಟ್​ನ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ. ಇದೀಗ ಸೆಂಚುರಿ ಸ್ಟಾರ್​ ಶಿವರಾಜ್​​​ಕುಮಾರ್​ ಅವರ 131ನೇ ಸಿನಿಮಾದ ಸೆಟ್​ಗೆ ರಾಕಿ ಭಾಯ್​​ ಯಶ್​ ಭೇಟಿ ನೀಡಿದ್ದಾರೆ. ಕನ್ನಡದ ಹೆಸರಾಂತ ನಟರು ಗುಣಮಟ್ಟದ ಸಮಯ ಕಳೆದಿದ್ದಾರೆ. ಈ ಸೂಪರ್​ ಸ್ಟಾರ್​ಗಳ ಫೋಟೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

Yash Met Shiva rajkumar
ಶಿವರಾಜ್​​​ಕುಮಾರ್​ ಯಶ್​​ ಮಾತುಕತೆ (ETV Bharat)

ಸೆಂಚುರಿ ಸ್ಟಾರ್​ ಬಣ್ಣ ಹಚ್ಚಿರುವ 'ಭೈರತಿ ರಣಗಲ್​​' ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಹೊತ್ತಿನಲ್ಲಿ ನಟನ 131ನೇ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭ ಕರುನಾಡ ಚಕ್ರವರ್ತಿಯ 131ನೇ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಸೆಟ್ಟೇರಿತ್ತು. ನಿರ್ಮಾಪಕ ಎಸ್.​​​ಎನ್.ರೆಡ್ಡಿ ಕ್ಲ್ಯಾಪ್​ ಮಾಡುವ ಮೂಲಕ ಕಾರ್ಯಕ್ರಮ ನಡೆದಿತ್ತು.

ತಮಿಳು ಸಿನಿಮಾವೊಂದನ್ನು ನಿರ್ದೇಶಿಸಿರುವ ಕಾರ್ತಿಕ್​​ ಅದ್ವೈತ್​​ ಶಿವಣ್ಣನ ಸಿನಿಮಾ ಮೂಲಕ ಸ್ಯಾಂಡಲ್​​​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇದೊಂದು ಆ್ಯಕ್ಷನ್​​​ ಥ್ರಿಲ್ಲರ್​​ ಸಿನಿಮಾ ಆಗಿದ್ದು, ಶಿವ ರಾಜ್​ಕುಮಾರ್​​​ ಡಿಫ್ರೆಂಟ್​​ ಲುಕ್​​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರ ಕೂಡಾ ಅಷ್ಟೇ ವಿಭಿನ್ನವಾಗಿರಲಿದೆಯಂತೆ. ಘೋಸ್ಟ್​ ಖ್ಯಾತಿಯ ವಿ.ಎಂ.ಪ್ರಸನ್ನ ಮತ್ತು ಸೀತಾರಾಮಂ ಜನಪ್ರಿಯತೆಯ ಜಯಕೃಷ್ಣ ಬರಹಗಾರರಾಗಿ ಚಿತ್ರತಂಡದ ಭಾಗವಾಗಿದ್ದಾರೆ.

ಇದನ್ನೂ ಓದಿ: ಡಾರ್ಲಿಂಗ್ ಪ್ರಭಾಸ್ ಹೊಸ ಸಿನಿಮಾಗೆ ಸ್ಟಾರ್ ಡೈರೆಕ್ಟರ್​​ ಪ್ರಶಾಂತ್​​ ನೀಲ್​ ಸಾಥ್ - Prabhas New Movie

ಶಿವಣ್ಣ ಅಭಿನಯದ 131 ಚಿತ್ರದ ಅಧಿಕೃತ ಶೀರ್ಷಿಕೆ ಇನ್ನಷ್ಟೇ ಘೋಷಣೆಯಾಗಬೇಕಿದೆ. ವಿಕ್ರಂ, ವೇದ, ಆರ್​ಡಿಎಕ್ಸ್, ಖೈದಿ ಸಿನಿಮಾಗಳ ಖ್ಯಾತಿಯ ಸ್ಯಾಮ್ ಸಿ.ಎಸ್ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ಎ.ಜೆ.ಶೆಟ್ಟಿ ಅವರ ಕ್ಯಾಮರಾ ಕೈಚಳ ಇರಲಿದೆ. ದೀಪು ಎಸ್​ ಕುಮಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಜೊತೆಗೆ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ.

ಇದನ್ನೂ ಓದಿ: ಅದ್ಧೂರಿಯಾಗಿ ಸೆಟ್ಟೇರಿದ ಶಿವಣ್ಣನ 131ನೇ ಸಿನಿಮಾ: ಡೈರೆಕ್ಟರ್​ ಯಾರು ಗೊತ್ತಾ? - Shiva Rajkumar 131th movie

ಭುವನೇಶ್ವರಿ ಪ್ರೊಡಕ್ಷನ್​ ಅಡಿ ಎಸ್​ಎನ್​ ರೆಡ್ಡಿ ಹಾಗೂ ಸುಧೀರ್​ ಪಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸುಮನ್​ ಬಿ ಸಹ ನಿರ್ಮಾಪಕರಾಗಿ, ರಮಣ ರೆಡ್ಡಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಚಿತ್ರೀಕರಣ ಕೂಡಾ ಶನಿವಾರದಂದೇ ಆರಂಭವಾಗಿದೆ. ಶೂಟಿಂಗ್​ ಅಖಾಡಕ್ಕೀಗ ರಾಕಿಭಾಯ್​ನ ‌ಎಂಟ್ರಿ ಆಗಿದೆ.

Last Updated : Aug 19, 2024, 5:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.