ETV Bharat / entertainment

'ಲಾಫಿಂಗ್​​ ಬುದ್ಧ' ಟ್ರೇಲರ್​ ರಿಲೀಸ್​ಗೆ ದಿನ ನಿಗದಿ: ರಿಷಬ್​ ನಿರ್ಮಾಣದ ಚಿತ್ರದಲ್ಲಿ ಮೋಡಿ ಮಾಡಲು ರೆಡಿಯಾದ ಪ್ರಮೋದ್​ - Laughing Buddha Trailer - LAUGHING BUDDHA TRAILER

ರಿಷಬ್ ಶೆಟ್ಟಿ ಫಿಲ್ಮ್ಸ್ ಬ್ಯಾನರ್​ ಅಡಿ ನಿರ್ಮಾಣಗೊಂಡಿರುವ 'ಲಾಫಿಂಗ್ ಬುದ್ಧ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇದೇ ಆಗಸ್ಟ್​​ 30ರಂದು ಬಿಡುಗಡೆ ಆಗಲಿರುವ ಈ ಚಿತ್ರದ ಮೂಲಕ ಪ್ರಮೋದ್ ಶೆಟ್ಟಿ ನಾಯಕ ನಟನಾಗಿ ಹೊರಹೊಮ್ಮಲಿದ್ದಾರೆ. ಈಗಾಗಲೇ ಚಿತ್ರತಂಡ ಪ್ರಚಾರ ಪ್ರಾರಂಭಿಸಿದ್ದು, ಟ್ರೇಲರ್​ ಅನಾವರಣಕ್ಕೆ ದಿನ ನಿಗದಿ ಆಗಿದೆ.

'Laughing Buddha' film team
'ಲಾಫಿಂಗ್​​ ಬುದ್ಧ' ಚಿತ್ರತಂಡ (ETV Bharat)
author img

By ETV Bharat Karnataka Team

Published : Aug 12, 2024, 1:37 PM IST

ಡಿವೈನ್​ ಸ್ಟಾರ್​ ಖ್ಯಾತಿಯ ರಿಷಬ್​​ ಶೆಟ್ಟಿ ಅಭಿನಯಕ್ಕೆ ಮಾತ್ರ ಸೀಮಿತವಾಗಿಲ್ಲ. ವಿವಿಧ ವಿಭಾಗಗಳಲ್ಲಿ ಶ್ರಮ ಹಾಕುತ್ತಾ ತಮ್ಮ ಪ್ರತಿಭೆ ಪ್ರದರ್ಶಿಸುತ್ತಲೇ ಬಂದಿದ್ದಾರೆ. ನಟನೆ, ನಿರ್ದೇಶನದ ಜೊತೆ ಜೊತೆಗೇನೆ ಚಲನಚಿತ್ರ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿರುವ ಕಾಂತಾರ ಸ್ಟಾರ್​ನ ಮುಂದಿನ ಚಿತ್ರಗಳ ಮೇಲೆ ಕನ್ನಡಿಗರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಹೆಸರಾಂತ ನಟನ ಮುಂದಿನ ಬಹುನಿರೀಕ್ಷಿತ ಪ್ರೊಜೆಕ್ಟ್​​​ 'ಲಾಫಿಂಗ್ ಬುದ್ಧ'. ಈ ಚಿತ್ರದಲ್ಲಿ ಕಿರಿಕ್​ ಪಾರ್ಟಿ ನಿರ್ದೇಶಕ ಬಣ್ಣ ಹಚ್ಚಿಲ್ಲ, ಬದಲಾಗಿ ಬಂಡವಾಳ ಹೂಡಿದ್ದಾರೆ.

ಟ್ರೇಲರ್​ ಅನಾವರಣಕ್ಕೆ ಮುಹೂರ್ತ ಫಿಕ್ಸ್​: ತಮ್ಮ ರಿಷಬ್ ಶೆಟ್ಟಿ ಫಿಲ್ಮ್ಸ್ ಬ್ಯಾನರ್​ ಅಡಿ ನಿರ್ಮಾಣ ಮಾಡಿರುವ 'ಲಾಫಿಂಗ್ ಬುದ್ಧ' ಚಿತ್ರ ಬಿಡುಗಡೆ ಹೊಸ್ತಿಲಿನಲ್ಲಿದೆ. ಈಗಾಗಲೇ ಚಿತ್ರದ ಚೊಚ್ಚಲ ''ಎಂಥ ಚೆಂದಾನೆ ಇವಳು'' ಗೀತೆಯನ್ನು ಅನಾವರಣಗೊಳಿಸುವ ಮೂಲಕ ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ. ಈ ತಿಂಗಳಾಂತ್ಯ ಚಿತ್ರಂದಿರ ಪ್ರವೇಶಿಸಲಿರುವ 'ಲಾಫಿಂಗ್ ಬುದ್ಧ'ನ ಟ್ರೇಲರ್​ ಅನಾವರಣಕ್ಕೀಗ ಮುಹೂರ್ತ ಫಿಕ್ಸ್​ ಆಗಿದೆ.

ರಿಷಬ್​​ ಶೆಟ್ಟಿ ಪೋಸ್ಟ್: ಈ ವಿಚಾರವನ್ನು ಸ್ವತಃ ನಿರ್ಮಾಪಕ ರಿಷಬ್​ ಶೆಟ್ಟಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಟ್ರೇಲರ್​ ಬಿಡುಗಡೆಯ ಪೋಸ್ಟರ್ ಹಂಚಿಕೊಂಡ ಅವರು, ಲಾಫಿಂಗ್​​ ಬುದ್ಧ 14ರ ಮಿಡ್​ನೈಟ್​​ ಡ್ಯೂಟಿಗೆ ಬರಲಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್​ನಲ್ಲಿ ನಾಯಕ ನಟ ಪ್ರಮೋದ್​ ಶೆಟ್ಟಿ ತಮ್ಮ ಸಹುದ್ಯೋಗಿಯೊಂದಿಗೆ ಸ್ಕೂಟರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್​ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದ್ದು, 14ರ ಮಿಡ್​ ನೈಟ್​ ಬಿಡುಗಡೆ ಆಗಲಿದೆ ಎಂಬ ಮಾಹಿತಿಯೂ ಇದರಲ್ಲಿದೆ.

ಇದನ್ನೂ ಓದಿ: ಫ್ಯಾಕ್ಟ್​​​​ ಚೆಕ್​: ಅಭಿಷೇಕ್-ಐಶ್ವರ್ಯಾ 'ವಿಚ್ಛೇದನ' ವೈರಲ್ ವಿಡಿಯೋ ಹಿಂದಿನ ಸತ್ಯಾಸತ್ಯತೆ ಇಲ್ಲಿದೆ - Abhishek Aishwarya

ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸಲು ರೆಡಿಯಾಗುತ್ತಿರುವ 'ಲಾಫಿಂಗ್ ಬುದ್ಧ' ತಂಡ ಇದೇ ಆಗಸ್ಟ್​ 7ರಂದು ತನ್ನ ಮೊದಲ ಗೀತೆ ಅನಾವರಣಗೊಳಿಸಿತ್ತು. 'ಎಂಥ ಚೆಂದಾನೆ ಇವಳು' ಶೀರ್ಷಿಕೆಯ ಹಾಡಿನ ಮೂಲಕ ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ. ಫಸ್ಟ್ ಸಾಂಗ್ ರಿಲೀಸ್​ ಈವೆಂಟ್​ನಲ್ಲಿ ಚಿತ್ರತಂಡ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿತ್ತು.​​

ಇದನ್ನೂ ಓದಿ: ಕಾಂತಾರ ಸೂಪರ್ ಹಿಟ್ ಆದ್ರೂ ರಿಷಬ್ ಬಾಡಿಗೆ ಮನೆಯಲ್ಲಿದ್ದಾರೆ: ಪ್ರಮೋದ್ ಶೆಟ್ಟಿ - Pramod Shetty Interview

ಭರತ್ ರಾಜ್ ನಿರ್ದೇಶನವಿರುವ ಈ ಚಿತ್ರದ ಕಥೆಯನ್ನು ಪೊಲೀಸರ ಕುಟುಂಬ ಹಾಗೂ ಅವರ ಭಾವನೆಗಳ ಸುತ್ತ ಹೆಣೆಯಲಾಗಿದೆ. ಇದೇ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಪ್ರಮೋದ್ ಶೆಟ್ಟಿ ಗೋವರ್ಧನ ಎಂಬ ಪೊಲೀಸ್ ಕಾನ್ಸ್​ಟೇಬಲ್​​ ಪಾತ್ರದಲ್ಲಿ ಹಾಗೂ ತೇಜು ಬೆಳವಾಡಿ ಸತ್ಯವತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಯಾಂಡಲ್​ವುಡ್​​ ದೂದ್​​ಪೇಡ ಖ್ಯಾತಿಯ ದಿಗಂತ್ ಮಂಚಾಲೆ ಕೂಡ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಭದ್ರಾವತಿ ಸುತ್ತಮುತ್ತ ಶೂಟಿಂಗ್​ ನಡೆಸಲಾಗಿದೆ‌. ಕೆ.ಎಸ್.ಚಂದ್ರಶೇಖರ್ ಕ್ಯಾಮರಾ ಕೈಚಳಕ, ಕೆ.ಎಂ.ಪ್ರಕಾಶ್ ಸಂಕಲನ‌ ಈ ಚಿತ್ರಕ್ಕಿದೆ. ಇದೇ ಆಗಸ್ಟ್​​ 30ರಂದು 'ಲಾಫಿಂಗ್ ಬುದ್ಧ' ಚಿತ್ರಮಂದಿರ ಪ್ರವೇಶಿಸಲಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.