ETV Bharat / entertainment

'ರಶ್ಮಿಕಾ ಅನಿಮಲ್​ ಯಶಸ್ಸಿನ ಶ್ರೇಯಸ್ಸು ತೆಗೆದುಕೊಳ್ಳಲಿಲ್ಲ' ಮಾತಿಗೆ ಸ್ಪಷ್ಟನೆ ಕೊಟ್ಟ ನಟಿ - ರಶ್ಮಿಕಾ ಮಂದಣ್ಣ

ಅನಿಮಲ್ ಸಕ್ಸಸ್​ನಿಂದ ರಶ್ಮಿಕಾ ಮಂದಣ್ಣ ದೂರ ಉಳಿದುಕೊಂಡಿದ್ದಾರೆ ಎಂಬ ಮಾತಿಗೆ ಸ್ವತಃ ನಟಿಯೇ ಸೋಷಿಯಲ್​ ಮೀಡಿಯಾದಲ್ಲಿಂದು ಸ್ಪಷ್ಟನೆ ಕೊಟ್ಟಿದ್ದಾರೆ.

Rashmika Mandanna
ನಟಿ ರಶ್ಮಿಕಾ ಮಂದಣ್ಣ
author img

By ETV Bharat Karnataka Team

Published : Feb 25, 2024, 2:29 PM IST

Updated : Feb 25, 2024, 3:29 PM IST

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಕೊನೆಯ ಚಿತ್ರ 'ಅನಿಮಲ್' ಸೂಪರ್​ ಡೂಪರ್​ ಹಿಟ್ ಆಗಿದೆ. ಅನಿಮಲ್​ ಸಿನಿಮಾ ರಿಲೀಸ್​ ಬೆನ್ನಲ್ಲೇ ನಟಿ ತಮ್ಮ ಮುಂದಿನ ಚಿತ್ರಗಳ ಕೆಲಸಗಳನ್ನು ಆರಂಭಿಸಿದ್ದಾರೆ. ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾದಲ್ಲಿಂದು, ಮುಂದಿನ ಬಹುನಿರೀಕ್ಷಿತ ಚಿತ್ರದ ಲುಕ್​ ಶೇರ್ ಮಾಡಿದ್ದಾರೆ. ಜೊತೆಗೆ 'ಅನಿಮಲ್​​ ಯಶಸ್ಸಿನಿಂದ ದೂರವಿದ್ದಾರೆ' ಎಂಬ ಹಲವರ ಮಾತಿಗೆ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಅಕೌಂಟ್​ನಲ್ಲಿ ರಶ್ಮಿಕಾ ಒಂದೆರಡು ಮಿರರ್ ಸೆಲ್ಫಿಗಳನ್ನು ಶೇರ್ ಮಾಡಿದ್ದಾರೆ. ಬ್ಲ್ಯಾಕ್​​ ಆ್ಯಂಡ್​ ವೈಟ್​ ಫೋಟೋವಿದು. ಮಿರರ್ ಸೆಲ್ಫಿಯಲ್ಲಿ, ತಮ್ಮ ಫೋನ್‌ನಿಂದ ಮುಖವನ್ನು ಮುಚ್ಚಿಕೊಂಡಿದ್ದಾರೆ. ಈ ಫೋಟೋಗಳು ತಮ್ಮ ಹೊಸ ಚಿತ್ರದ್ದು ಎಂದು ವಿವರಿಸಿದ್ದಾರೆ. ಚಿತ್ರತಂಡ ಅನುಮತಿ ಕೊಡೋವರೆಗೂ ತಮ್ಮ ಸಂಪೂರ್ಣ ನೋಟವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೂಡ ತಿಳಿಸಿದ್ದಾರೆ.

"ಹಾಯ್ ಗೆಳೆಯರೇ, ಇದು ನನ್ನ ಹೊಸ ಸಿನಿಮಾದ ನೋಟವಾಗಿರುವುದರಿಂದ ಕಂಪ್ಲೀಟ್, ಕ್ಲಿಯರ್​ ಫೋಟೋ ಶೇರ್ ಮಾಡಲು ಸಾಧ್ಯವಿಲ್ಲ. ಚಿತ್ರತಂಡಕ್ಕೂ ಮೊದಲು ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಶೂಟಿಂಗ್​ ಉತ್ತಮವಾಗಿ ಸಾಗಿದೆ'' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಅನಿಮಲ್​ ಸಿನಿಮಾ ಸಕ್ಸಸ್ ಬಗ್ಗೆಯೂ ಬರೆದುಕೊಂಡಿದ್ದಾರೆ.

ಜನಪ್ರಿಯತೆಯ ಹೊರತಾಗಿಯೂ, ವಿಶೇಷವಾಗಿ ಅನಿಮಲ್ ಯಶಸ್ಸಿನ ನಂತರ, ರಶ್ಮಿಕಾ ಅವರು ಚಿತ್ರದ ಬಗ್ಗೆ ಹೆಚ್ಚು ಮಾತನಾಡಿಲ್ಲ ಎಂದು ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ. ನೆಟ್ಟಿಗರ ಕಳವಳಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ, ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟನೆ ನೀಡೋ ಜೊತೆಗೆ ಅವರ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಅನಿಮಲ್ ತೆರೆಕಂಡ ಬಳಿಕ ತಮ್ಮ ಮುಂದಿನ ಸಿನಿಮಾಗಳಿಗಾಗಿ ಸೆಟ್‌ಗೆ ತೆರಳಬೇಕಾಯಿತು. ಟೈಟ್ ಶೂಟಿಂಗ್​ ಶೆಡ್ಯೂಲ್​ ಹಿನ್ನೆಲೆ ಸಂದರ್ಶನಗಳಲ್ಲಿ ಭಾಗಿಯಾಗಲು ಅಥವಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಸಮಯ ಸಿಗಲಿಲ್ಲ. ಸಿನಿಮಾ ಸಕ್ಸಸ್​ ಸಂಬಂಧ ತಮ್ಮ ಈ ಮೌನವು, ಶೂಟಿಂಗ್​ ಶೆಡ್ಯೂಲ್​ ಮತ್ತು ಒಪ್ಪಂದದ ಜವಾಬ್ದಾರಿಗಳ ಪರಿಣಾಮ ಎಂದು ಅಭಿಮಾನಿಗಳಲ್ಲಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: 'ಪುಷ್ಪ 2' ಚಿತ್ರದ ಅತಿಥಿ ಪಾತ್ರದಲ್ಲಿ ಅಲ್ಲು ಅರ್ಜುನ್​​ ಪುತ್ರ

ಅನಿಮಲ್​​ ಸಿನಿಮಾ ಯಶಸ್ಸಿನ ಪಾಲುದಾರಿಕೆಯ ಭಾಗವಾಗದಿರುವ ಬಗೆಗಿನ ಟೀಕೆಗೆ ಸಂಬಂಧಿಸಿದಂತೆ, ಇನ್​ಸ್ಟಾಗ್ರಾಮ್​ನಲ್ಲಿ ರಶ್ಮಿಕಾ ಎರಡು ಪಾಯಿಂಟ್ಸ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡರು. ಅಭಿಮಾನಿಗಳ ಕಾಳಜಿಯನ್ನು ಒಪ್ಪಿಕೊಂಡ ನಟಿ "ಯಶಸ್ಸಿನ ಮಾಲೀಕತ್ವಕ್ಕೆ ಬರುತ್ತಿದ್ದೇನೆ. ಗೆಳೆಯರೇ, ನಿಮ್ಮ ಪ್ರೀತಿ, ಸಂದೇಶಗಳು ನನಗೆ ಬಹಳ ಸಂತೋಷ ನೀಡುತ್ತವೆ. ಪ್ರಾಮಾಣಿಕ ಕೆಲಸ ಮುಂದುವರಿಸಲು ಪ್ರೇರಣೆಯಾಗುತ್ತದೆ. ಮತ್ತೊಮ್ಮೆ ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಟ ಆಶಿಶ್ ರೆಡ್ಡಿ ಆರತಕ್ಷತೆಯಲ್ಲಿ ರಶ್ಮಿಕಾ-ವಿಜಯ್​​: ವಿಡಿಯೋ ನೋಡಿ

Last Updated : Feb 25, 2024, 3:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.