ETV Bharat / entertainment

'ರಾಮಾಯಣ'ಕ್ಕಾಗಿ ಆರ್ಚರಿ ಕಲಿಯುತ್ತಿರುವ ರಣ್​ಬೀರ್ ಕಪೂರ್: ತರಬೇತುದಾರರೊಂದಿಗಿನ ಫೋಟೋ ವೈರಲ್ - Ramayan - RAMAYAN

ಭಗವಾನ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿರುವ ಬಾಲಿವುಡ್​​ ಸೂಪರ್​ ಸ್ಟಾರ್ ರಣ್​​ಬೀರ್ ಕಪೂರ್ ಆರ್ಚರಿ (ಬಿಲ್ಲುಗಾರಿಕೆ) ತರಬೇತಿ ಪಡೆಯುತ್ತಿರುವ ಫೋಟೋ ವೈರಲ್​ ಆಗಿದೆ.

Ranbir Kapoor Learns Archery for Ramayan
'ರಾಮಾಯಣ'ಕ್ಕಾಗಿ ಆರ್ಚರಿ ಕಲಿಯುತ್ತಿರುವ ರಣ್​ಬೀರ್ ಕಪೂರ್
author img

By ETV Bharat Karnataka Team

Published : Mar 26, 2024, 5:50 PM IST

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಪ್ರಿಯರಲ್ಲಿ ಬಹುನಿರೀಕ್ಷೆ ಹುಟ್ಟುಹಾಕಿರುವ ಚಿತ್ರ. ಅಧಿಕೃತವಾಗಿ ಘೋಷಣೆಯಾಗದಿದ್ದರೂ ಸಿನಿಮಾ ಸುತ್ತಲಿನ ಮಾಹಿತಿ ಜೋರಾಗೇ ಕೇಳಿಬರುತ್ತಿದೆ. ದಿನಕ್ಕೊಂದು ಸುದ್ದಿ ಹೊರಬರುತ್ತಿದ್ದು, ಕೆಲ ಫೋಟೋಗಳು ಕೂಡ ಆ ಅಂತೆಕಂತೆಗಳಿಗೆ ತುಪ್ಪ ಸುರಿಯುತ್ತಿದೆ. ರಾಮನವಮಿ ಸಂದರ್ಭ ಚಿತ್ರ ಘೋಷಣೆಯಾಗುವ ಸಾಧ್ಯತೆಗಳಿವೆ.

ಬಾಲಿವುಡ್​​ ಸೂಪರ್​ ಸ್ಟಾರ್ ರಣ್​​ಬೀರ್ ಕಪೂರ್ ಭಗವಾನ್ ಶ್ರೀರಾಮನ ಪಾತ್ರದಲ್ಲಿ, ದಕ್ಷಿಣ ಚಿತ್ರರಂಗದ ಚೆಲುವೆ ಸಾಯಿ ಪಲ್ಲವಿ ದೇವಿ ಸೀತೆ ಪಾತ್ರದಲ್ಲಿ ಮತ್ತು ರಾವಣನ ಪಾತ್ರದಲ್ಲಿ ಸ್ಯಾಂಡಲ್​ವುಡ್​ನ​ ರಾಕಿಂಗ್​ ಸ್ಟಾರ್ ಯಶ್ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಬಹಳ ದಿನಗಳಿಂದ ಸದ್ದು ಮಾಡುತ್ತಿರುವ ವಿಚಾರ. ಇತ್ತೀಚೆಗಷ್ಟೇ, ಬರುವ ತಿಂಗಳಿನಿಂದ ಶೂಟಿಂಗ್​ ಪ್ರಾರಂಭಿಸಲು ಸಿದ್ದರಾಗಿರೋ ಹಿನ್ನೆಲೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಈ ಕಲಾವಿದರು ಸೀಮಿತಗೊಳಿಸುತ್ತಿದ್ದಾರೆ ಎಂದು ಹೇಳಲಾಯ್ತು. ಅಲ್ಲದೇ ರಣ್​ಬೀರ್​ ಕಪೂರ್ ಅವರ ಹೆಡ್​ಸ್ಟ್ಯಾಂಡ್​ ಫೋಟೋ ಕೂಡ ವೈರಲ್​ ಆಗಿತ್ತು. ಇದೀಗ ರಣ್​ಬೀರ್​ ಅವರ ಮತ್ತೊಂದು ಫೋಟೋ ವೈರಲ್​ ಆಗಿದ್ದು, 'ರಾಮಾಯಣ'ದ ಸುತ್ತಲಿರುವುದು ಕೇವಲ ವದಂತಿಗಳಲ್ಲ ಎಂಬುದು ನೆಟ್ಟಿಗರ ಅಭಿಪ್ರಾಯ.

ಭಗವಾನ್ ರಾಮನನ್ನು ಚಿತ್ರಿಸಲು ರಣ್​​ಬೀರ್ ಕಪೂರ್ ಸಜ್ಜಾಗುತ್ತಿದ್ದಾರೆ. ಅವರ ಪಾತ್ರದ ಸುತ್ತಲಿನ ಹಲವು ಅಂತೆಕಂತೆಗಳ ನಡುವೆ ಪಾತ್ರಕ್ಕಾಗಿ ಶ್ರದ್ಧೆಯಿಂದ ತಯಾರಿ ನಡೆಸುತ್ತಿರೋ ಮತ್ತೊಂದು ಫೋಟೋ ವೈರಲ್​ ಆಗಿದೆ. ಲೇಟೆಸ್ಟ್ ಫೋಟೋಗಳು ಅಭಿಮಾನಿಗಳಲ್ಲಿ ಉತ್ಸಾಹ ಹುಟ್ಟುಹಾಕಿದೆ. ಆರ್ಚರಿ (ಬಿಲ್ಲುಗಾರಿಕೆ) ಸೇರಿದಂತೆ ನಟನ ಕಠಿಣ ತರಬೇತಿ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

ಲೇಟೆಸ್ಟ್ ಪೋಸ್ಟ್‌ನಲ್ಲಿ ರಣ್​​ಬೀರ್ ಕಪೂರ್ ಬಿಲ್ಲುಗಾರಿಕೆ ತರಬೇತುದಾರನ (archery coach) ಜೊತೆ ಕಾಣಿಸಿಕೊಂಡಿದ್ದಾರೆ. ಇದು ಭಗವಾನ್ ರಾಮನ ಪಾತ್ರಕ್ಕೆ ತಯಾರಿ ಎಂಬುದನ್ನು ಸ್ಪಷ್ಟವಾಗಿ ಸೂಚಿಸಿದೆ. ಅದ್ಭುತ ಪಾತ್ರದ ಮೇಲಿನ ನಟನ ಬದ್ಧತೆಯನ್ನು ಎತ್ತಿ ಹಿಡಿದಿದೆ. ತೆರೆಮರೆಯ ಈ ಸೀನ್​​ಗಳು ಅಭಿಮಾನಿಗಳಿಗೆ, ಸಿನಿಪ್ರಿಯರಿಗೆ ಕಪೂರ್‌ ಪ್ರಯಾಣದ ಒಂದು ನೋಟ ಒದಗಿಸಿದೆ.

ಇದನ್ನೂ ಓದಿ: ರಾಮಾಯಣ: ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಸೀಮಿತಗೊಳಿಸಿದ ಯಶ್​, ರಣ್​ಬೀರ್, ಸಾಯಿ ಪಲ್ಲವಿ - Ramayana

2025ರ ದೀಪಾವಳಿ ಆಸುಪಾಸಿನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿರುವ 'ರಾಮಾಯಣ'ದ ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಕಾತರರಾಗಿರೋ ಈ ಹೊತ್ತಿನಲ್ಲಿ, ರಣ್​ಬೀರ್​ ಕಪೂರ್​ ಚಿತ್ರಪ್ರೇಮಿಗಳ ಗಮನ ಸೆಳೆಯೋದನ್ನು ಮುಂದುವರೆಸಿದ್ದಾರೆ. ಇತ್ತೀಚೆಗಷ್ಟೇ ರಣ್​ಬೀರ್​ ಕಪೂರ್ 'ಹೆಡ್‌ಸ್ಟ್ಯಾಂಡ್' (ಶಿರ್ಷಾಸನ) ಫೋಟೋವನ್ನು ಅವರ ಫಿಟ್ನೆಸ್​ ಟ್ರೈನರ್ ನಮ್​ವುಕ್​​ ಕಂಗ್ ಹಂಚಿಕೊಂಡಿದ್ದು, ಆ ಫೊಟೋ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ. ಫೋಟೋ ಹಂಚಿಕೊಂಡ ಟ್ರೈನರ್, ರಾಯಾಯಣ ಎಂದು ಕ್ಯಾಪ್ಷನ್​ನಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ: 'ರಾಮಾಯಣ' ಚಿತ್ರಕ್ಕಾಗಿ ಭರ್ಜರಿ ಸಿದ್ಧತೆ: ರಣ್​​ಬೀರ್ ಕಪೂರ್ ಹೆಡ್​ಸ್ಟ್ಯಾಂಡ್ ಫೋಟೋ ವೈರಲ್ - Ranbir Kapoor Headstand

ರಣ್​ಬೀರ್ ಕೊನೆಯದಾಗಿ ಸೂಪರ್ ಹಿಟ್ 'ಅನಿಮಲ್​' ಸಿನಿಮಾದಲ್ಲಿ ಕಾಣಿಸಿಕೊಂಡರು. ರಾಮಾಯಣ ಅಲ್ಲದೇ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಲವ್ ಆ್ಯಂಡ್​ ವಾರ್' ಚಿತ್ರದಲ್ಲೂ ನಟಿಸಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಪತ್ನಿ ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.