ETV Bharat / entertainment

ನೀವು ಫಿಲ್ಮ್​ ಮೇಕರ್​ ಆಗಬೇಕೆ? ರಾಮೋಜಿ ಅಕಾಡೆಮಿಯಲ್ಲಿದೆ ಉಚಿತ ಚಲನಚಿತ್ರ ನಿರ್ಮಾಣ ಕೋರ್ಸ್‌ - Free Filmmaking Courses

ಚಲನಚಿತ್ರ ನಿರ್ಮಾಣದಲ್ಲಿ ತಮ್ಮ ವೃತ್ತಿಜೀವನವನ್ನು ಮಾಡಲು ಬಯಸುವವರಿಗೆ ವಯಸ್ಸಿನ ಮಿತಿಯಿಲ್ಲದೆ ರಾಮೋಜಿ ಅಕಾಡೆಮಿ ಆಫ್ ಮೂವೀಸ್​ ಬಹು ಭಾರತೀಯ ಭಾಷೆಗಳಲ್ಲಿ ಉಚಿತ ಚಲನಚಿತ್ರ ನಿರ್ಮಾಣ ಕೋರ್ಸ್‌ಗಳನ್ನು ಘೋಷಿಸಿದೆ. ಈ ಕೋರ್ಸಗಳನ್ನು ಸೇರಲು ಏನು​ ಮಾಡಬೇಕು, ಅರ್ಹತೆ ಏನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ರಾಮೋಜಿ ಅಕಾಡೆಮಿ
ರಾಮೋಜಿ ಅಕಾಡೆಮಿ
author img

By ETV Bharat Karnataka Team

Published : Apr 2, 2024, 7:04 AM IST

Updated : Apr 2, 2024, 6:00 PM IST

ಹೈದರಾಬಾದ್: ನಿಮಗೆ ಚಿತ್ರನಿರ್ಮಾಪಕನಾಗುವ ಕನಸಿದೆಯೇ. ಹಾಗಾದರೆ ಇಲ್ಲಿದೆ ಉಚಿತ ಫಿಲ್ಮ್ ಮೇಕಿಂಗ್ ಕೋರ್ಸ್‌ಗಳು. ರಾಮೋಜಿ ಅಕಾಡೆಮಿ ಆಫ್​ ಮೂವೀಸ್ (RAM) ಉಚಿತ ಕೋರ್ಸ್​ಗಳ ಸುವರ್ಣಾವಕಾಶವನ್ನು ನಿಮಗಾಗಿ ನೀಡುತ್ತಿದೆ.

ಹೈದರಾಬಾದ್​ನ ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ರಾಮೋಜಿ ಗ್ರೂಪ್‌ನ ಡಿಜಿಟಲ್ ಫಿಲ್ಮ್ ಅಕಾಡೆಮಿಯಾದ ರಾಮೋಜಿ ಅಕಾಡೆಮಿ ಆಫ್ ಮೂವೀಸ್ (RAM) ಸಂಸ್ಥೆ ಇಂಗ್ಲಿಷ್ ಜೊತೆಗೆ ಹಿಂದಿ, ಮರಾಠಿ, ತೆಲುಗು, ಮಲಯಾಳಂ, ತಮಿಳು, ಕನ್ನಡ ಮತ್ತು ಬಂಗಾಳಿ ಸೇರಿದಂತೆ ಏಳು ಭಾರತೀಯ ಭಾಷೆಗಳಲ್ಲಿ ಆನ್‌ಲೈನ್ ಚಲನಚಿತ್ರ ನಿರ್ಮಾಣ ಕೋರ್ಸ್‌ಗಳನ್ನು ಘೋಷಿಸಿದೆ.

ಫ್ರೀ ಕೋರ್ಸ್​ನಲ್ಲಿ ನೀವು ಕಥೆ ಮತ್ತು ಚಿತ್ರಕಥೆ, ನಿರ್ದೇಶನ, ಆ್ಯಕ್ಷನ್, ಚಲನಚಿತ್ರ ನಿರ್ಮಾಣ, ಚಲನಚಿತ್ರ ಸಂಕಲನ ಮತ್ತು ಡಿಜಿಟಲ್ ಫಿಲ್ಮ್ ಮೇಕಿಂಗ್​ನ್ನು ಕಲಿಯಬಹುದು. ಇಷ್ಟು ಅವಕಾಶಗಳನ್ನು ರಾಮೋಜಿ ಅಕಾಡೆಮಿ ಆಫ್​ ಮೂವೀಸ್ ನೀಡಿದೆ.

ಉಚಿತ ಕೋರ್ಸ್‌ಗಳು: ಎಲ್ಲಾ ಕೋರ್ಸ್‌ಗಳು ನಿಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಫಿಲ್ಮ್​ ಮೇಕಿಂಗ್​​ ಕುರಿತು ಪಠ್ಯಕ್ರಮಗಳನ್ನು ಒದಗಿಸುತ್ತವೆ. ಮತ್ತು ಅವು ಉಚಿತವಾಗಿದ್ದು, ಚಲನಚಿತ್ರ ನಿರ್ಮಾಣದಲ್ಲಿಯೇ ವೃತ್ತಿಜೀವನದ ಕನಸು ಕಂಡವರಿಗೆ ಇಲ್ಲಿ ಕಲಿಯಲು ಅವಕಾಶವಿದೆ. ಅಲ್ಲದೆ ನಿಮಗೆ ಸಮಯ ಮತ್ತು ಸ್ಥಳದ ಅಡ್ಡಿಯಿಲ್ಲ. ಹೀಗಾಗಿ ನೀವು ಒಂದು ಬಾರಿ ಕೋರ್ಸ್​ಗೆ ಸೇರಿದರೆ ನಿಮಗೆ ಬೇಕಾದಾಗೆಲ್ಲ ಕಲಿಯಬಹುದು.

ಹೊಸತನ ಮತ್ತು ಮೌಲ್ಯಯುತ ಕಾರ್ಯಕ್ರಮಗಳು: ಚಲನಚಿತ್ರಗಳು ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವುದರಿಂದ, ಬಹು ಭಾಷೆಗಳಲ್ಲಿನ ಚಲನಚಿತ್ರ ನಿರ್ಮಾಣ ಕೋರ್ಸ್‌ಗಳು ನವೀನತೆಗೆ ಕಾರಣವಾಗಲಿವೆ. ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕತೆ ಮತ್ತು ಆ ಪ್ರದೇಶಕ್ಕೆ ವಿಶಿಷ್ಟವಾದ ವಿಷಯಗಳಲ್ಲಿ ಕಥೆ ಹೇಳುವಿಕೆಯ ಮೂಲಕ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಈ ಕೋರ್ಸ್ ಅನುವು ಮಾಡಿಕೊಡುತ್ತದೆ. ಜತೆಗೆ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಕಲಿಯಲು ಸಹಾಯ ಮಾಡುತ್ತವೆ.

ಕೋರ್ಸ್​ಗಳಿಗೆ ಸೇರಲು ಅರ್ಹತೆಗಳೇನು: ರಾಮೋಜಿ ಅಕಾಡೆಮಿ ಆಫ್​ ಮೂವೀಸ್ ಉಚಿತ ಕೋರ್ಸ್‌ಗಳಿಗೆ ನೋಂದಾಯಿಸಲು, ಯಾವುದೇ ಹೆಚ್ಚಿನ ವಯಸ್ಸಿನ ಮಿತಿ ಅಥವಾ ಕನಿಷ್ಠ ಅರ್ಹತೆಯ ಮಾನದಂಡಗಳಿಲ್ಲ. ಕನಿಷ್ಠ ವಯಸ್ಸಿನ ಮಿತಿ 15 ವರ್ಷ ಆಗಿರಬೇಕು ಮತ್ತು ಆಯ್ಕೆ ಮಾಡಿದ ಅಧ್ಯಯನದ ಭಾಷೆಯಲ್ಲಿ ಪ್ರಾವೀಣ್ಯತೆ ಕಡ್ಡಾಯವಾಗಿದೆ. ಮುಖ್ಯವಾಗಿ ವಿದ್ಯಾರ್ಥಿಯು ನಿಖರವಾದ ಫೋನ್ ನಂಬರ್​ ಮತ್ತು ಇಮೇಲ್ ವಿಳಾಸವನ್ನು ನೀಡಬೇಕು.

ಸೇಫ್​ ಎಕ್ಸಾಂ ಬ್ರೌಸರ್​ (SEB) ಮೂಲಕ ಸಕ್ರಿಯಗೊಳಿಸಲಾದ ತಡೆರಹಿತ ಮತ್ತು ಸುರಕ್ಷಿತ ಆನ್‌ಲೈನ್ ವಾತಾವರಣವನ್ನು ರಾಮೋಜಿ ಅಕಾಡೆಮಿ ಆಫ್​ ಮೂವೀಸ್ ಒದಗಿಸುತ್ತದೆ. ರಚನಾತ್ಮಕ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ. SEB ಬ್ರೌಸರ್​ ಅನ್ನು ಡೌನ್‌ಲೋಡ್ ಮಾಡಿದ ನಂತರ, ವಿದ್ಯಾರ್ಥಿಗೆ ವಿವರವಾದ ಅಧ್ಯಾಯ ಮತ್ತು ಅನುಗುಣವಾದ ಪರೀಕ್ಷೆಗಳನ್ನು ನೀಡಲಾಗುತ್ತದೆ.

ವಿದ್ಯಾರ್ಥಿಯು ಮುಂದಿನ ಹಂತಕ್ಕೆ ತೆರಳುವ ಮೊದಲು ಅಧ್ಯಾಯ ಮತ್ತು ಪರೀಕ್ಷೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಹೀಗಾಗಿ ಸುವ್ಯವಸ್ಥಿತ ಮತ್ತು ಪರಿಣಾಮಕಾರಿ ಕಲಿಕೆಯ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ರಾಮೋಜಿ ಅಕಾಡೆಮಿ ಆಫ್​ ಮೂವೀಸ್ ಪ್ರತಿ ವಿದ್ಯಾರ್ಥಿಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲಿದ್ದು, ಕೋರ್ಸ್‌ನ ಪ್ರತಿ ಹಂತದಲ್ಲೂ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತದೆ. ಈ ಮೂಲಕ ವಿದ್ಯಾರ್ಥಿಗಳು ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸಲು ಸಹಾಯ ಮಾಡುತ್ತದೆ.

ಆಸಕ್ತ ವಿದ್ಯಾರ್ಥಿಗಳು ಈ ಕೆಳಗಿನ ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ.

https://www.ramojiacademy.com/

ಇದನ್ನೂ ಓದಿ: ಕರ್ನಾಟಕ ಅಂಚೆ ಇಲಾಖೆ ನೇಮಕಾತಿ; ಪೋಸ್ಟಲ್​ ಅಸಿಸ್ಟೆಂಟ್​ ಸೇರಿದಂತೆ ಹಲವು ಹುದ್ದೆ - POSTAL RECRUITMENT

Last Updated : Apr 2, 2024, 6:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.