ETV Bharat / entertainment

ರಾಕುಲ್​-ಜಾಕಿ ಮದುವೆ: ಗೋವಾ ತಲುಪಿದ ವಧು-ವರ, ವಿಡಿಯೋ ನೋಡಿ - ಜಾಕಿ ಭಗ್ನಾನಿ

ಹಸೆಮಣೆ ಏರಲು ನಟಿ ರಾಕುಲ್​ ಪ್ರೀತ್ ಸಿಂಗ್​ ಮತ್ತು​ ನಿರ್ಮಾಪಕ ಜಾಕಿ ಭಗ್ನಾನಿ ಗೋವಾ ತಲುಪಿದ್ದಾರೆ.

ರಾಕುಲ್​ ಪ್ರೀತ್ ಸಿಂಗ್​ ಮತ್ತು​ ಜಾಕಿ ಭಗ್ನಾನಿ
Rakul Preet Singh-Jackky Bhagnani
author img

By ETV Bharat Karnataka Team

Published : Feb 18, 2024, 10:27 AM IST

Updated : Feb 18, 2024, 12:11 PM IST

ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಪ್ರೇಮಾಂಕುರವಾಗಿ, ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿ ಮಾದರಿ ದಾಂಪತ್ಯ ಜೀವನ ನಡೆಸುತ್ತಿರುವ ಹಲವು ಉದಾಹಣೆಗಳು ನಮ್ಮ ಕಣ್ಣ ಮುಂದಿವೆ. ಇದೀಗ ಈ ಸಾಲಿಗೆ ಸೇರಲು ಬಹುಭಾಷಾ ನಟಿ ರಾಕುಲ್​ ಪ್ರೀತ್ ಸಿಂಗ್​ ಮತ್ತು ಬಾಲಿವುಡ್​ ನಿರ್ಮಾಪಕ ಜಾಕಿ ಭಗ್ನಾನಿ ಸಜ್ಜಾಗಿದ್ದಾರೆ.

ಕೆಲ ಸಮಯದಿಂದ ಡೇಟಿಂಗ್​​ನಲ್ಲಿದ್ದ ಈ ಜೋಡಿ ಈಗ ಹಸೆಮಣೆ ಏರಲು ಸಜ್ಜಾಗಿದೆ. ಗೋವಾದಲ್ಲಿ ಪರಿಸರ ಸ್ನೇಹಿ ವಿವಾಹ ಆಚರಣೆಗಳು ನಡೆಯಲಿವೆ. ಈ ವಾರವಿಡೀ ಮುಂಬೈನಲ್ಲಿ ಸಮಾರಂಭಗಳು ಜರುಗಿದ್ದು, ಇನ್ನೂ ಗೋವಾದ ನಿಶ್ಚಿತ ಸ್ಥಳದಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಫೆಬ್ರವರಿ 19 ಅಂದರೆ ನಾಳೆಯಿಂದ ಪ್ರಾರಂಭವಾಗುವ ಮೂರು ದಿನಗಳ ವಿವಾಹ ಸಮಾರಂಭ ಫೆಬ್ರವರಿ 21ರಂದು ಮುಕ್ತಾಯಗೊಳ್ಳಲಿದೆ. ಇದೀಗ ವಧುವರರು ಗೋವಾ ತಲುಪಿದ್ದು, ಏರ್​ಪೋರ್ಟ್​​ನಿಂದ ವಿಡಿಯೋಗಳು ವೈರಲ್​ ಆಗಿವೆ.

ಈ ವಾರದ ಶುರುವಲ್ಲಿ ಈವೆಂಟ್​​ಗಳು ಆರಂಭವಾದವು. ಮುಂಬೈನಲ್ಲಿರುವ ಜಾಕಿ ಭಗ್ನಾನಿ ಅವರ ನಿವಾಸದಲ್ಲಿ ವಧು-ವರರ ಕುಟುಂಬಸ್ಥರು ಬಂದು ಸೇರಿದ್ದರು. ಮುಂಬೈನ ನಿವಾಸ ಅಲಂಕೃತಗೊಂಡ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿ ಸದ್ದು ಮಾಡಿದವು. ಇದೀಗ ರಾಕುಲ್​ ಮತ್ತು ಜಾಕಿ ತಮ್ಮ ಕುಟುಂಬಸ್ಥರೊಂದಿಗೆ ಗೋವಾ ತಲುಪಿದ್ದಾರೆ. ನಿನ್ನೆ ತಡರಾತ್ರಿ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡಿದ್ದು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

ಏರ್​ಪೋರ್ಟ್ ವಿಡಿಯೋಗೂ ಮುನ್ನ ಮುಂಬೈನ ಪ್ರಸಿದ್ಧ ದೇವಾಲಯದಿಂದ ಈ ಪ್ರೇಮಪಕ್ಷಿಗಳ ವಿಡಿಯೋ ವೈರಲ್​ ಆಗಿತ್ತು. ಹೌದು, ಮುಂಬೈನ ಪ್ರಸಿದ್ಧ ಗಣೇಶ ದೇವಸ್ಥಾನವಾದ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ನಿನ್ನೆ ಬೆಳಗ್ಗೆ ಶೇರ್ ಆದ ವಿಡಿಯೋದಲ್ಲಿ, ಸಾಂಪ್ರದಾಯಿಕ ಉಡುಗೆ ಧರಿಸಿ ಸಿದ್ಧಿವಿನಾಯಕ ದೇವಾಲಯಕ್ಕೆ ಈ ಜೋಡಿ ಬಂದಿರುವುದನ್ನು ಕಾಣಬಹುದು. ರಾಕುಲ್ ಪಿಂಕ್​ ಅನಾರ್ಕಲಿ ಸೂಟ್​ನಲ್ಲಿ ಕಂಗೊಳಿಸಿದರೆ, ಜಾಕಿ ಹಸಿರು ಕುರ್ತಾ ಧರಿಸಿದ್ದರು. ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ಕೊಟ್ಟಿದ್ದು, ಈ ವಿಡಿಯೋ ಸಹ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: ಮದುವೆಗೂ ಮುನ್ನ ಸಿದ್ಧಿವಿನಾಯಕನ ದರ್ಶನ ಪಡೆದ ರಾಕುಲ್-ಜಾಕಿ

ರಾಕುಲ್​ ಮತ್ತು ಜಾಕಿ ಅವರ ಸಿನಿಮಾ ವಿಚಾರ ಗಮನಿಸೋದಾದರೆ, 'ಬಡೆ ಮಿಯಾನ್ ಚೋಟೆ ಮಿಯಾನ್' ಬಿಡುಗಡೆಗೆ ಸಜ್ಜಾಗುತ್ತಿದೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಚಿತ್ರವನ್ನು ಜಾಕಿ ಭಗ್ನಾನಿ ನಿರ್ಮಿಸಿದ್ದು, ಚಿತ್ರದಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಸೋನಾಕ್ಷಿ ಸಿನ್ಹಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ರಾಕುಲ್ ಪ್ರೀತ್ ಸಿಂಗ್​​ ಇಂಡಿಯನ್ 2 ಮತ್ತು ಅಯಾಲಾನ್‌ ಸೇರಿದಂತೆ ಬಹುಭಾಷಾ ಸಿನಿಮಾಗಳಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ಪುಷ್ಪ 3 ಬಗ್ಗೆ ಖಚಿತ ಮಾಹಿತಿ ಕೊಟ್ಟ ಅಲ್ಲು ಅರ್ಜುನ್

Last Updated : Feb 18, 2024, 12:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.