ETV Bharat / entertainment

ಮದುವೆಯಾಗಿ ಒಂದು ತಿಂಗಳ ಸಂಭ್ರಮದಲ್ಲಿ ರಾಕುಲ್​ ಪ್ರೀತ್​- ಭಗ್ನಾನಿ ಜೋಡಿ - RAKUL WEDDING One MONTH CELEBRATION - RAKUL WEDDING ONE MONTH CELEBRATION

ಮದುವೆಯಾಗಿ ಒಂದು ತಿಂಗಳು ಪೂರೈಸಿರುವ ರಾಕುಲ್​, ಭಗ್ನಾನಿ ಜೊತೆಗಿನ ಫೋಟೋ ಹಂಚಿಕೊಂಡು ಪತಿಗೆ ಶುಭಾಶಯ ತಿಳಿಸಿದ್ದಾರೆ.

Rakul Preet - Bhagnani couple celebrating one month of marriage
ಮದುವೆಯಾಗಿ ಒಂದು ತಿಂಗಳ ಸಂಭ್ರಮದಲ್ಲಿ ರಾಕುಲ್​ ಪ್ರೀತ್​- ಭಗ್ನಾನಿ ಜೋಡಿ
author img

By ETV Bharat Karnataka Team

Published : Mar 21, 2024, 7:30 PM IST

ಹೈದರಾಬಾದ್​: ಕಳೆದ ತಿಂಗಳು ಗೋವಾದಲ್ಲಿ ಹಸಮಣೆ ಏರಿದ್ದ ನಟಿ ರಾಕುಲ್​ ಪ್ರೀತ್​ ಸಿಂಗ್​ ಹಾಗೂ ನಟ-ನಿರ್ಮಾಪಕ ಜಾಕಿ ಭಗ್ನಾನಿ ಗುರುವಾರ ತಮ್ಮ ಒಂದು ತಿಂಗಳ ವಿವಾಹ ಸಂಭ್ರಮವನ್ನು ಆಚರಿಸಿದರು.

ಈ ವಿಶೇಷ ದಿನವನ್ನು ಗುರುತಿಸಲು ರಾಕುಲ್​ ಪ್ರೀತ್​ ತಮ್ಮ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲಿ ತಮ್ಮ ಹಾಗೂ ಪತಿ ಜಾಕಿ ಜೊತೆಗಿರುವ ಫೋಟೋವನ್ನು ಹಂಡಿಕೊಂಡಿದ್ದಾರೆ. ಮದುವೆಯಾಗಿ ಒಂದು ತಿಂಗಳೂ ಪೂರೈಸಿರುವ ಸಂಭ್ರಮದ ಆಚರಣೆಯ ಸ್ನ್ಯಾಪ್​ಶಾಟ್​ ಒಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿ, ಪತಿ ಶುಭಾಶಯಗಳನ್ನು ತಿಳಿಸಿದ್ದಾರೆ. ಸಂತೋಷದ ಕ್ಷದ ಸಾರವನ್ನು ಸೆರಹಿಡಿದಿರುವ ಫೋಟೋ ಹಂಚಿಕೊಂಡಿರುವ ನಟಿ, ಕ್ಯಾಪ್ಷನ್​ನಲ್ಲಿ " ಮದುವೆಯಾಗಿ ಆಗಲೇ ಒಂದು ತಿಂಗಳು. ಸಮಯ ಸರಿಯುತ್ತಿದೆ ಮತ್ತು ಮುಂದೆ ಜೀವನವೂ ಇದೆ. ಚಂದ್ರನಿಗೆ ಹಾಗೂ ನನ್ನ ಹಿಂದಿರುವ ಶಕ್ತಿಗೆ ನನ್ನ ಪ್ರೀತಿ. ನಮ್ಮ ಜೀವನ ಖುಷಿಯಿಂದ ಕುಣಿಯುತ್ತಿದೆ. #onemonthanniversary @jackkybhagnani." ಎಂದು ಬರೆದುಕೊಂಡಿದ್ದಾರೆ.

ನಟಿ ರಾಕುಲ್​ ಪ್ರೀತ್​ ಸಿಂಗ್​ ಹಾಗೂ ನಟ-ನಿರ್ಮಾಪಕ ಜಾಕಿ ಭಗ್ನಾನಿ ಫೆಬ್ರವರಿ 21ರಂದು ದಕ್ಷಿಣ ಗೋವಾದಲ್ಲಿ ಮದುವೆಯಾದರು. ಮದುವೆಯಾಗಿ ಒಂದು ತಿಂಗಳು ಪೂರೈಸಿದ್ದು, ನೆನಪಿನಲ್ಲಿರಬೇಕಾದ ದಿನವನ್ನು, ಕ್ಷಣವನ್ನು ಜೋಡಿ ಸಂಭ್ರಮಾಚರಿಸಿದೆ.

ಇತ್ತೀಚೆಗೆ ವಬ್ಲಾಯ್ಡ್​ಗೆ ನೀಡಿದ ಸಂದರ್ಶನವೊಂದರಲ್ಲಿ ರಾಕುಲ್​, ಈ ಬಾರಿಯ ಹೋಳಿ ಹಬ್ಬವನ್ನು ಮದುವೆಯಾದ ಹೊಸ ಜೋಡಿಯಾಗಿ ಆಚರಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ. ಮದುವೆ ನಂತರದ ಜೀವನ, ಅವರ ಜೀವನದ ಮೇಲಾಗಿರುವ ಪ್ರಭಾವದ ಬಗ್ಗೆ ಮಾತನಾಡಿದ ರಾಕುಲ್​, ಜೀವನ ಸಾಮಾನ್ಯವಾಗಿದೆ, ಮದುವೆ ಜೀವನದ ಸುಂದರ ಭಾಗವಾಗಿದೆ ಎಂದು ಹೇಳಿದರು. ಮದುವೆ ಜೀವನದ ಖುಷಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮದುವೆಯ ಮೊದಲು ಮತ್ತು ನಂತರ ನಮ್ಮ ಜೀವನದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಹೇಳಿದರು.

ಸಿನಿಮಾಗಳ ಬಗ್ಗೆ ನೋಡುವುದಾದರೆ, ಮುಂಬರುವ ಕಾಲಿವುಡ್​ನ 'ಇಂಡಿಯನ್​ 2' ಆ್ಯಕ್ಷನ್​ ಸಿನಿಮಾದಲ್ಲಿ ಕಮಲ್​ ಹಾಸನ್​ ಅವರ ಜೊತೆಗೆ ರಾಕುಲ್​ ಪ್ರೀತ್​ ಸಿಂಗ್​ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಬಿ ಸಿಂಹ ಹಾಗೂ ಪ್ರಿಯಾ ಭವಾನಿ ಶಂಕರ್​ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮತ್ತೊಂದೆಡೆ ಜಾಕಿ ಭಗ್ನಾನಿ ಅವರ ನಿರ್ಮಾಣದ, ಅಕ್ಷಯ್, ಟೈಗರ್​ ಶ್ರಾಫ್​, ಸೋನಾಕ್ಷಿ ಸಿನ್ಹಾ ಮತ್ತು ಪೃಥ್ವಿರಾಜ್​ ಸುಕುಮಾರನ್​ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಬಡೇ ಮಿಯಾನ್​ ಚೋಟೆ ಮಿಯಾನ್​ ಬಿಡುಗಡೆಗೆ ತಯಾರಾಗಿದೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿರಿಸಿದ ರಾಕುಲ್ ​ -ಜಾಕಿ: ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಸಲ್ಲಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.