ETV Bharat / entertainment

ದೀಪಾವಳಿಗೆ ಬೆಳ್ಳಿಪರದೆ ಮೇಲೆ ರಜನಿ, ಅಜಿತ್​ ಸಿನಿಮಾ: ಅಭಿಮಾನಿಗಳಿಗೆ ಹಬ್ಬದೂಟ - Rajinikanths Vettaiyan film - RAJINIKANTHS VETTAIYAN FILM

ರಜನೀಕಾಂತ್​ ಮತ್ತು ಅಜಿತ್​ ಇಬ್ಬರು ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಹೊಂದಿದ್ದು, ಈ ಬಾರಿ ದೀಪಾವಳಿಯಲ್ಲಿ ಅವರಿಗೆ ನಟರಿಂದ ಮನೋರಂಜನೆಯನ್ನು ಸವಿಯಬಹುದಾಗಿದೆ.

Rajinikanth's Vettaiyan Aiming For Diwali Release
ರಜನೀಕಾಂತ್​- ಅಜಿತ್​​ (ಈಟಿವಿ ಭಾರತ್​​)
author img

By ETV Bharat Karnataka Team

Published : Jul 11, 2024, 4:23 PM IST

ಹೈದರಾಬಾದ್​: ಅಭಿಮಾನಿಗಳು ಕಾದು ಕುಳಿತಿರುವ ಟಾಲಿವುಡ್​ನ ಇಬ್ಬರು ಸ್ಟಾರ್​ ನಟರಾದ ಅಜಿತ್​ ಮತ್ತು ರಜನೀಕಾಂತ್​​ ಸಿನಿಮಾ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂಬ ಮಾತು ಕೇಳಿ ಬಂದಿದೆ. ಸ್ಟಾರ್​ ನಟರ ಮುಖಾಮುಖಿಗೆ ಬಾಕ್ಸ್​ ಆಫೀಸ್​ ಸಾಕ್ಷಿಯಾಗಲಿದೆ ಎನ್ನಲಾಗಿದೆ. ನಟ ರಜನೀಕಾಂತ್​​ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ವೆಟ್ಟಿಯನ್'​ ಅಕ್ಟೋಬರ್​ಗೆ ಬಿಡುಗಡೆಯಾಗಲು ಸಜ್ಜಾಗಿದೆ. ಈ ನಡುವೆ ಸೂರ್ಯ ನಟನೆಯ 'ಕಂಗುವಾ' ಸಿನಿಮಾ ಕೂಡ ಈ ಪೈಪೋಟಿಗೆ ಇಳಿಯುವುದಿಲ್ಲ ಎಂದು ನಿರ್ಮಾಪಕರಾಗಿರುವ ಕೆಇ ಜ್ಞಾನವೆಲ್​ ರಾಜ್​ ತಿಳಿಸಿದ್ದಾರೆ. ಭಾವಾನಾತ್ಮಕವಾಗಿ ಮತ್ತು ವೃತ್ತಿಯಿಂದಲೂ ನಾವು ರಜನೀಕಾಂತ್​ ಸಿನಿಮಾದ ಜೊತೆಗೆ ನಮ್ಮ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಮೂಲಕ 'ವೆಟ್ಟಿಯನ್'​ ಸಿನಿಮಾ ದೀಪಾವಳಿಗೆ ಬೆಳ್ಳಿತೆರೆ ಅಪ್ಪಳಿಸುವುದು ನಿಜ ಎನ್ನಲಾಗಿದೆ. ಆದರೆ, ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಈ ನಡುವೆ ಅಜಿತ್​ ಅಭಿನಯದ 'ವಿದಾಮುಯಾರ್ಚಿ' ಕೂಡ ದೀಪಾವಳಿಗೆ ಬಿಡುಗಡೆಯಾಗುವುದಾಗಿ ಸುಳಿವು ನೀಡಿದೆ. ಈ ಮೂಲಕ ಇಬ್ಬರು ಸ್ಟಾರ್​ ಸಿನಿಮಾಗಳು ಕ್ಲಾಶ್​ ಆಗಲಿದೆ. ಕಳೆದ 2019ರಲ್ಲಿ ಕೂಡ ರಜನೀಕಾಂತ್​ ಅಭಿನಯದ 'ಪೆಟ್ಟಾ' ಮತ್ತು 'ಅಜಿತ್'​ ಅಭಿನಯದ ವಿಸ್ವಸಂ ಚಿತ್ರ ಪೋಗಲ್​ (ಸಂಕ್ರಾಂತಿ)ನಲ್ಲಿ ಬಿಡುಗಡೆಗೊಂಡಿದ್ದು, ಎರಡು ಕೂಡ ದೊಡ್ಡ ಹಿಟ್​ ಕಂಡಿತು, ಇದೀಗ ಮತ್ತೊಂದು ಬಾರಿ ಇಬ್ಬರು ಸ್ಟಾರ್​ ನಟರ ಚಿತ್ರ ಏಕ ಸಮಯದಲ್ಲಿ ಬಿಡುಗಡೆಯಾಗುವ ಕುರಿತು ಭರವಸೆ ವ್ಯಕ್ತವಾಗಿದೆ.

'ವೆಟ್ಟಿಯನ್' ಚಿತ್ರವನ್ನು ಟಿಜೆ ಜ್ಞಾನವೇಲ್​ ನಿರ್ದೇಶಿಸುತ್ತಿದ್ದು, ರಜನೀಕಾಂತ್​ ಜೊತೆಗೆ ಅಮಿತಾಬ್​ ಬಚ್ಚನ್​, ಫಾಹದ್​ ಫಸೀಲ್​, ರಾಣಾ ದುಗ್ಗುಬಾಟಿ, ಮಂಜು ವಾರಿಯರ್​, ದುಶಾರ ವಿಜಯನ್​, ರಿತಿಕಾ ಸಿಂಗ್​ ಮತ್ತು ರಕ್ಷಣ್​ ಸೇರಿದಂತೆ ಬಹು ತಾರಾಗಣ ಕಾಣಬಹುದಾಗಿದೆ. ಇನ್ನು ನಟ ಅಜಿತ್​ ಅಭಿಯನದ 'ವಿದಾಮುಯಾರ್ಚಿ' ಸಿನಿಮಾಗೆ ಮಾಗಿಜ್ ತಿರುಮೇನಿ ನಿರ್ದೇಶಿಸಿದ್ದಾರೆ. ರಜನೀಕಾಂತ್​ ಮತ್ತು ಅಜಿತ್​ ಇಬ್ಬರು ತಮ್ಮದೇ ಆದ ದೊಡ್ಡ ಅಭಿಮಾನ ಬಳಗ ಹೊಂದಿದ್ದು, ಈ ಬಾರಿ ದೀಪಾವಳಿಯಲ್ಲಿ ಅವರಿಗೆ ನಟರಿಂದ ಮನೋರಂಜನೆಯ ಸವಿ ಉಣಬಹುದಾಗಿದೆ.

ಇದನ್ನೂ ಓದಿ: ತಮಿಳು ಸಿನಿಮಾಕ್ಕೆ ಕಾಲಿಟ್ಟ ಶ್ರೀಲೀಲಾ; ನಟ ಅಜಿತ್​ಗೆ ನಾಯಕಿಯಾಗಲಿರುವ ಕನ್ನಡತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.