ಕನ್ನಡ ಮಾತ್ರವಲ್ಲದೇ ತಮಿಳು ಹಾಗು ಹಿಂದಿ ಚಿತ್ರರಂಗದಲ್ಲಿ ಬೋಲ್ಡ್ ನಟನೆ ಜೊತೆಗೆ ಗ್ಲ್ಯಾಮರ್ನಿಂದ ತನ್ನದೇ ಆದ ಬೇಡಿಕೆಯನ್ನು ಹೊಂದಿರುವ ನಟಿ ರಾಗಿಣಿ ದ್ವಿವೇದಿ. ಕಳೆದ ಒಂದು ದಶಕದಿಂದ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಛಾಪು ಮೂಡಿಸಿರುವ ವೀರಮದಕರಿ ಸುಂದರಿ. ಸದ್ಯ ಸಿನಿಮಾ ಜೊತೆ ಜೊತೆಗೆ ಆಲ್ಬಂ ವಿಡಿಯೋಗಳನ್ನು ಮಾಡುತ್ತಿರುವ ರಾಗಿಣಿ ದ್ವಿವೇದಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 34ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಬೆಡಗಿಗೆ ಕುಟುಂಬ ಸದಸ್ಯರು, ಸಿನಿ ಸ್ನೇಹಿತರೂ ಸೇರಿದಂತೆ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರುತ್ತಿದ್ದಾರೆ. ಸ್ಯಾಂಡಲ್ವುಡ್ ಸುಂದರಿ ಈ ವರ್ಷದ ಹುಟ್ಟುಹಬ್ಬವನ್ನು ಕೊಂಚ ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ.
ನಟಿಮಣಿಯರು ಸಹಜವಾಗಿ ತಮ್ಮ ಬರ್ತ್ ಡೇಯನ್ನು ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಸೇರಿ ಪಾರ್ಟಿ ಮಾಡುವ ಮೂಲಕ ಜೋರಾಗಿಯೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಾರೆ. ತಮ್ಮ ದಶಕದ ಸಿನಿ ಜರ್ನಿಯಲ್ಲಿ ಏಳು ಬೀಳುಗಳನ್ನು ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇಂದು ಕೆಲ ಸಾಮಾಜಿಕ ಕೆಲಸಗಳ ಮೂಲಕ ಜನ್ಮದಿನ ಆಚರಿಸಿಕೊಂಡರು. ಸ್ಮಶಾನದಲ್ಲಿ ಕೆಲಸ ಮಾಡುವ ಬಡವರಿಗೆ ಹಾಗೂ ಮಂಗಳಮುಖಿಯರಿಗೆ ಬಟ್ಟೆ, ದಿನಸಿ ಸಾಮಗ್ರಿಗಳನ್ನು ಕೊಡುವ ಮೂಲಕ ರಾಗಿಣಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.
ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಅಭಿನಯದ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಸ್ಪೆಷಲ್ ಸಾಂಗ್ಗೆ ಸಖತ್ ಡ್ಯಾನ್ಸ್ ಮಾಡುವ ಮೂಲಕ ಚಿತ್ರದ ಭಾಗವಾಗಿದ್ದಾರೆ. ಹೀಗಾಗಿ ನಿರ್ದೇಶಕ ನಾಗಶೇಖರ್ ರಾಗಿಣಿ ಬರ್ತ್ ಡೇಗೆ ಹಾಡಿನ ಮೇಕಿಂಗ್ ವಿಡಿಯೋ ರಿವೀಲ್ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ.
ಇದನ್ನೂ ಓದಿ: ಶಾರುಖ್ಗೆ ಹೀಟ್ ಸ್ಟ್ರೋಕ್: ಫಿಟ್ನೆಸ್ ಐಕಾನ್ ಮಲೈಕಾ ಅರೋರಾ ಕೊಟ್ಟ ಸಲಹೆ ಇದು - Malaika Arora Health Tips
ಕೋವಿಡ್ ಸಂದರ್ಭ ರಾಗಿಣಿ ತಮ್ಮ ಜೆನ್ ನೆಕ್ಸ್ಟ್ ಚಾರಿಟೇಬಲ್ ವತಿಯಿಂದ ಮಂಗಳಮುಖಿಯರಿಗೆ ಸಾಕಷ್ಟು ಸಹಾಯ ಮಾಡುತ್ತಾ ಬಂದಿದ್ದಾರೆ. ಇದರ ಜೊತೆಗೆ ಕನ್ನಡ, ಮಲೆಯಾಳಂ ಸೇರಿದಂತೆ ನಾಲ್ಕೈದು ಸಿನಿಮಾಗಳಲ್ಲಿ ರಾಗಿಣಿ ನಟಿಸುತ್ತಿದ್ದಾರೆ. ಮುಂದಿನ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರಿಕ್ಷೆಗಳನ್ನಿಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ'ಯ ಮೊದಲ ಹಾಡು ನಾಳೆ ರಿಲೀಸ್ - Krishnam Pranaya Sakhi